ದೆಹಲಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಜನರ ಎದುರೇ ಬಹಿರಂಗವಾಗಿದೆ. ಒಬ್ಬರಿಗೊಬ್ಬರು ಮಾತಿನಲ್ಲಿಯೇ ಕಿತ್ತಾಡುತ್ತಿದ್ದಾರೆ. ಅದರಲ್ಲೂ ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಯತ್ನಾಳ್ ಬಣ ಪಣ ತೊಟ್ಟಿದೆ. ಈಗ ಹೈಕಮಾಂಡ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇರೆ ಅನೌನ್ಸ್ ಆಗಿದೆ. ಹೀಗಾಗಿ ಯತ್ನಾಳ್ ಬಣ ದೆಹಲಿಯಲ್ಲಿ ಬೀಡು ಬಿಟ್ಟಿದೆ.
ರಮೇಶ್ ಜಾರಕಿಹೊಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ವಕ್ಫ್ ಹೋರಾಟದಲ್ಲಿ ಶಬ್ಬಾಸ್ ಗಿರಿಯನ್ನು ಪಡೆದಿದ್ದಾರೆ. ಇದೇ ವೇಳೆ ಮಾಧ್ಯಮದವರ ಜೊತೆಗೂ ಮಾತನಾಡಿ, ಹೈಕಮಾಂಡ್ ನಾಯಕರನ್ನು ನಿನ್ನೆ ರಾತ್ರಿಯೇ ಭೇಟಿಯಾಗಿದ್ದೇವೆ. ಕೊನೆ ಹಂತದಲ್ಲಿ ಇರುವುದರಿಂದ ಮಾಧ್ಯಮದವೆ ಮುಂದೆ ಬಂದು ಹತಾಶ ಮನೋಭಾವದವರು ಮಾತಾಡ್ತಾರಲ್ಲ ಆ ಥರ ಮಾತಾಡುವ ಅವಶ್ಯಕತೆ ಇಲ್ಲ. ಹೈಕಮಾಂಡ್ ನಾಯಕರಿಗೆ ಎಲ್ಲಾ ರೀತಿಯ ಮನವಿ ಮಾಡಿಕೊಂಡಿದ್ದೇವೆ. ಅವರು ಕೊನೆಯ ತೀರ್ಮಾನವನ್ನು ಏನು ತೆಗೆದುಕೊಳ್ಳುತ್ತಾರೆ ಅದನ್ನು ಸ್ವೀಕಾರ ಮಾಡ್ತೇವೆ. ನಿನ್ನೆಯೇ ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಹೈಕಮಾಂಡ್ ನಾಯಕರ ಮುಂದೆ ವಿಜಯೇಂದ್ರ ಅವರ ಬಂಡವಾಳವನ್ನು ತೆರೆದಿಡುತ್ತೇವೆ ಎಂದಿದ್ದರಲ್ಲ ತೆರೆದಿಟ್ಟಿದ್ದೀರಾ ಹೇಗೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನಾಳೆ ಯತ್ನಾಳ್ ಬರ್ತಾರಲ್ಲ ಆಗ ಕೇಳಿ. ನಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿ ಮುಂದೆ ನಡೆದಿದ್ದಾರೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಬಣದಲ್ಲಿಯೇ ಸ್ಟ್ರಾಂಗ್ ಅಭ್ಯರ್ಥಿಯೊಬ್ಬರನ್ನ ಅಧ್ಯಕ್ಷರನ್ನಾಗಿ ಮಾಡುವ ಆಕಾಂಕ್ಷೆಯನ್ನು ಟೀಂ ಹೊಂದಿದೆ. ಚುನಾವಣೆ ನಡೆಯಲಿದ್ದು ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಎಂಬುದನ್ನು ನೋಡಬೇಕಿದೆ.
ಚಿತ್ರದುರ್ಗ. ಫೆ.04 : ಸವಿತಾ ಸಮಾಜ ಬಾಂಧವರು ಶ್ರಮ ಹಾಗೂ ಕಾಯಕ ಜೀವಿಗಳಾಗಿದ್ದಾರೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣುತ್ತಿದ್ದಾರೆ…
ಹಿರಿಯೂರು : ನಗರದ ದಕ್ಷಿಣ ಕಾಶಿಯೆಂದು ಹೆಸರಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಜಾತ್ರೆ ನಿನ್ನೆಯಿಂದ (ಫೆಬ್ರವರಿ.…
ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಎಂದು ರೈತರ ಒತ್ತಾಯದ ಮೇರೆಗೆ ಸಚಿವ…
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 04 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 04 ) ಹತ್ತಿ ಮಾರುಕಟ್ಟೆ ಇದ್ದು,…
ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬಂದಾಗೆಲ್ಲ ಹಿಜಾಬ್ ಬಗ್ಗೆಯೇ ಬಹಳ ಚರ್ಚೆಯಾಗುತ್ತದೆ. ಹಿಜಾಬ್ ಬಗ್ಗೆ…
ಸುದ್ದಿಒನ್, ಚಿತ್ರದುರ್ಗ, ಫೆ. 04: ಸ್ವಾತಂತ್ರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ, ಗಾಂಧೀಜಿಗೆ ದೇಗುಲು ನಿರ್ಮಿಸಿ ಮಹಾತ್ಮನಿಗೆ ಪೂಜೆ ಸಲ್ಲಿಸುತ್ತಿರುವ ತುರುವನೂರು ಗ್ರಾಮ…