ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಮಾ. 21 : ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಸರ್ಕಾರ ಶೇ4ರಷ್ಟು ಮೀಸಲಾತಿಯನ್ನು ನೀಡಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಒನಕೆ ಓಬ್ಬವ್ವ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಈ ನಡುವಳಿಯನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ದ ಭೀತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಎಸ್.ಸಿ. ಮೋರ್ಚಾದ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಅಡಳಿತಕ್ಕೆ ಬಂದಾಗಿನಿಂದಲೂ ಸಹಾ ಪರಿಶಿಷ್ಟ ವರ್ಗ ಮತ್ತು ಪಂಗಡವನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದಾರೆ ತಮ್ಮ ಗ್ಯಾರೆಂಟಿಗಳಿಗೆ ಇವರ ಅಭೀವೃದಿಗಾಗಿ ಮೀಸಲಿಟ್ಟಿದ್ದ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಈಗ ಟೆಂಡರ್ ವಿಚಾರದಲ್ಲಿಯೂ ಸಹಾ ಮುಖ್ಯಮಂತ್ರಿಗಳು ಒಂದು ವರ್ಗದ ಓಲೈಕೆಗೆ ಮುಂದಾಗಿದ್ದಾರೆ. ಟೆಂಡರ್‍ನ್ನು ಎಲ್ಲಾ ವರ್ಗದವರು ಸಹಾ ಮಾಡುತ್ತಾ ಬಂದಿದ್ದಾರೆ ಈಗ ಹೂಸದಾಗಿ ಮುಸ್ಲಿಂ ಜನರನ್ನು ಓಲೈಕೆ ಮಾಡುವುದಕ್ಕಾಗಿ ಟೆಂಡರ್‍ನಲ್ಲಿ ಅವರಿಗಾಗಿ ಮೀಸಲಾತಿಯನ್ನು ನೀಡಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಇದನ್ನು ಸರ್ಕಾರ ಹಿಂಪಡೆಯಬೇಕು ಇಲ್ಲವಾದಲ್ಲಿ ಬಿಜೆಪಿ ರಾಜ್ಯ ಮಟ್ಟದಲ್ಲಿ ಹೋರಾಟವನ್ನು ನಡೆಸುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಪದೇ ಪದೇ ಹಿಂದುಗಳ ಮೇಲೆ ದೌರ್ಜನ್ಯವನ್ನು ನಡೆಸುತ್ತಾ ಬಂದಿದೆ. ಮುಸ್ಲಿಂರನ್ನು ಓಲೈಕೆ ಮಾಡುವುದಕ್ಕಾಗಿ ಇದನ್ನು ಜಾರಿ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ಭೀನ್ನಾಭಿಪ್ರಾಯಗಳು ಮೂಡಿ ಬರುತ್ತವೆ. ಇದರಿಂದ ರಾಜ್ಯದಲ್ಲಿ ಆಶಾಂತಿಯ ವಾತಾವರಣ ಉಂಟಾಗುತ್ತದೆ ಇದಕ್ಕೆ ಸಿದ್ದರಾಮಯ್ಯರವರು ಅವಕಾಶವನ್ನು ನೀಡಬಾರದು ಈ ಕೂಡಲೇ ಮುಸ್ಲಿಂರಿಗೆ ನೀಡಿರುವ ಈ ಮೀಸಲಾತಿಯನ್ನು ಹಿಂಡೆಪಯಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಖಜಾಂಚಿ ಮಾಧುರಿ ಗೀರೀಶ್, ರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ ಶಿವಪ್ರಕಾಶ್, ಮುಖಂಡರಾದ ಕುಮಾರಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶೀ ರಾಮದಾಸ್, ಜಿಲ್ಲಾ ಎಸ್.ಟಿ,ಮೋರ್ಚಾದ ಅಧ್ಯಕ್ಷ ಶಿವಣ್ಣ ಎಸ್.ಸಿ.ಮೋರ್ಚಾದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಶೈಲಜಾರೆಡ್ಡಿ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಶಿವಕುಮಾರ್, ವಕ್ತರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ಶ್ರೀರಾಮರೆಡ್ಡಿ, ಪದಾಧಿಕಾರಿಗಳಾದ ಶಾಂತಮ್ಮ, ಚಂದ್ರಿಕಾ ಲೋಕನಾಥ್, ಗಾಯತ್ರಿದೇವಿ, ವೀಣಾ, ಕಾಂಚನ, ಸುಮ, ಕಿರಣ್, ಯಶವಂತ, ಚಳ್ಳಕೆರೆ ಮಂಡಲ ಅಧ್ಯಕ್ಷ ಸುರೇಶ್, ಕಲ್ಲೇಶಯ್ಯ, ನಾಗರಾಜ್ ಪಾಂಡು ಓಬಿಸಿ ಮೋರ್ಚಾದ ಪ್ರಶಾಂತ್ ಶಂಭು ಸೇರಿದಂತೆ ಇತರರು ಭಾಗವಹಿಸಿದ್ದರು.
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು; ರಿಯಾಲಿಟಿ ಶೋನಲ್ಲಿ ಫೇಮಸ್ ಆಗಿದ್ದ ರಜತ್ ಹಾಗೂ ವಿನಯ್ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲು ಹೋಗಿ ತಗಲಾಕಿಕೊಂಡಿದ್ದಾರೆ. ಕಳೆದ…
ಸುದ್ದಿಒನ್ : ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯವು…
ಬೆಂಗಳೂರು; ಸಚಿವ ಕೆ.ಎನ್.ರಾಜಣ್ಣ ಮೇಲೆ ಬಂದಿರುವ ಹನಿಟ್ರ್ಯಾಪ್ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಈಗಾಗಲೇ ಗೃಹಸಚಿವರಿಗೆ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ನಗರದ ಐ.ಯು.ಡಿ.ಪಿ. ಲೇಔಟ್ ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಕರೆನ್ಸಿ ಚೆಸ್ಟ್ ಶಾಖೆಯಲ್ಲಿ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಎಲ್ಲೆಡೆ ಪರೀಕ್ಷೆಗಳು ಮುಗಿಯುವ ಹಂತಕ್ಕೆ ಬಂದಿವೆ. ಇನ್ನೇನೂ ಸದ್ಯದಲ್ಲೇ ಶಾಲಾ-ಕಾಲೇಜು ರಜೆ ಘೋಷಣೆ…