ಸಿನಿಮೀಯ ಶೈಲಿಯಲ್ಲಿ ಕಳ್ಳರನ್ನು ಬೆನ್ನತ್ತಿ ಹಿಡಿದ ಬಿಜೆಪಿ ಸಂಸದ

ಬಿಹಾರ  : Sushil Kumar Singh :  ಸಂಸದರೊಬ್ಬರು ತಾವು ನಿಜವಾದ ಜನಪ್ರತಿನಿಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಹಿಳೆಯ ಕೊರಳಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದ ಸರಗಳ್ಳನ್ನು  ಜಾಣ್ಮೆಯಿಂದ ಹಿಡಿದಿದ್ದಾರೆ.

ಸಿನಿಮಾದಲ್ಲಿ ಪೊಲೀಸರು ಕಳ್ಳರನ್ನು ಕಾರಿನಲ್ಲಿ ಹಿಂಬಾಲಿಸಿ ಹಿಡಿಯುವ ರೀತಿಯಲ್ಲಿ ಈ ಸಂಸದರು ತಮ್ಮ ಕಾರಿನಲ್ಲೇ ಕಳ್ಳರನ್ನು ಬೆನ್ನಟ್ಟಿ ಕೊನೆಗೂ ಹಿಡಿದಿದ್ದಾರೆ. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಔರಂಗಾಬಾದ್ ಬಿಜೆಪಿ ಸಂಸದ ಸುಶೀಲ್ ಕುಮಾರ್ ಸಿಂಗ್ ಕಳ್ಳರನ್ನು ಕಾರಿನಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬರುನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಶೀಲ್ ಕುಮಾರ್ ಸಿಂಗ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚೈನ್ ಸ್ನಾಚರ್ ಗಳು ಮಹಿಳೆಯ ಕೊರಳಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಸಂಸದರು ತಮ್ಮ ಕಾರು ಚಾಲಕನಿಗೆ ಕಳ್ಳರನ್ನು ಹಿಂಬಾಲಿಸುವಂತೆ ಸೂಚಿಸಿದ್ದಾರೆ. ಚಾಲಕ ಕೂಡಲೇ ಕಳ್ಳರನ್ನು ಬೆನ್ನಟ್ಟಿದ್ದಾನೆ.

ಮಧುಪುರ ಎಂಬ ಗ್ರಾಮಕ್ಕೆ ಬರುವಷ್ಟರಲ್ಲಿ ಕಳ್ಳರ ಬೈಕ್ ಕೆಸರಿನಲ್ಲಿ ಸಿಲುಕಿ ಕೆಳಗೆ ಬಿದ್ದಿದೆ. ಸಂಸದರ ಕಾರು ಹಿಂಬದಿಯಿಂದ ಚೇಸ್ ಮಾಡುವುದನ್ನು ಕಂಡ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಕೂಡಲೇ ಕಳ್ಳರನ್ನು ಬೆನ್ನಟ್ಟಿ ಹಿಡಿಯುವಂತೆ ಸಂಸದ ಸುಶೀಲ್ ಕುಮಾರ್ ಸಿಂಗ್ ತಮ್ಮ ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ.  ಇದರೊಂದಿಗೆ ಅಂಗರಕ್ಷಕರು ಅರ್ಧ ಕಿಲೋಮೀಟರ್ ವರೆಗೆ ಅವರನ್ನು ಬೆನ್ನಟ್ಟಿ ಕೊನೆಗೂ ಕಳ್ಳರನ್ನು ಹಿಡಿದಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, ಆರೋಪಿಗಳಾದ ಟಿಮಕುಕುಮಾರ್, ಆನಂದ್ ಕುಮಾರ್ ಮತ್ತು ಠಾಕೂರ್ ಅವರನ್ನು ಪೊಲೀಸರು ಬಂಧಿಸಿ ವಂಶಕ್ಕೆ ಪಡೆದಿದ್ದಾರೆ.

ಆರೋಪಿಯೊಬ್ಬನಿಂದ ಪೊಲೀಸರು ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ಮೊಬೈಲ್ ಫೋನ್ ಜೊತೆಗೆ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಕಚಕ್ಯತೆಯಿಂದ ವರ್ತಿಸಿ ಕಳ್ಳರನ್ನು ಹಿಡಿದ ಸಂಸದರನ್ನು ಹಲವರು ಶ್ಲಾಘಿಸುತ್ತಿದ್ದಾರೆ.

ಸಂಸದರೆಂದರೆ ಜನರಿಗೆ ಸಹಾಯ ಮಾಡುವುದು. ಅಂತಹ ಕೆಲಸವನ್ನು  ಸುಶೀಲ್ ಕುಮಾರ್ ಸಿಂಗ್ ಮಾಡಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಸಂಸದರು ಪ್ರಯಾಣಿಸುತ್ತಿದ್ದ ಕಾರು ದರೋಡೆಕೋರರ ಬಳಿ ಬಂದಾಗ, ಕಳ್ಳನೊಬ್ಬ ತನ್ನ ಗನ್ ತೆಗೆದು ಸಂಸದನಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಆದರೆ, ಸಂಸದರು ಅವರ ಬೆದರಿಕೆಗೆ ಹೆದರದೆ ಕಳ್ಳರನ್ನು ಹಿಡಿಯಲೇಬೇಕೆಂದು ಸಿಬ್ಬಂದಿ ಸೂಚಿಸಿದರು.

ಚಿನ್ನವನ್ನು ವಾಪಸ್ ನೀಡಿದ ಬಳಿಕ ಮಹಿಳೆ ಸಂಸದರಿಗೆ ಧನ್ಯವಾದ ಹೇಳಿದ್ದಾರೆ. ಸಿರೀಸ್ ಗ್ರಾಮದ ಸರಿತಾ ಕುಮಾರಿ ಅನಾರೋಗ್ಯದಿಂದ ಬಳಲುತ್ತಿರುವ ಚಿಕ್ಕಮ್ಮನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರೆ. ಆಸ್ಪತ್ರೆಯಿಂದ ಪತಿಯೊಂದಿಗೆ ಬೈಕ್ ನಲ್ಲಿ ವಾಪಾಸು ಬರುವ ವೇಳೆ ಮೂವರು ದರೋಡೆಕೋರರು ಆಕೆಯ ಕತ್ತಿನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ಈ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಸಂಸದ ಸುಶೀಲ್ ಕುಮಾರ್ ಸಿಂಗ್ ಇಡೀ ಘಟನೆಗೆ ಸಾಕ್ಷಿಯಾದರು.

suddionenews

Recent Posts

ಮೈಕ್ರೋ ಫೈನಾನ್ಸ್ ಸುಗ್ರಿವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು : ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…

1 hour ago

ಚಿತ್ರದುರ್ಗ APMC | ಶೇಂಗಾ, ಕಡಲೆ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 07 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago

ಚಿತ್ರದುರ್ಗದ ಅಳಿಯ ಡಾಲಿ ಮೇಲೆ ದರ್ಶನ್ ಫ್ಯಾನ್ಸ್ ಗರಂ : ಫುಲ್ ಟ್ರೋಲ್..!

ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…

4 hours ago

ಮೂಡಾ ಅಪ್ಡೇಟ್: ಸಿಎಂ ಸಿದ್ದರಾಮಯ್ಯರಿಗೆ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…

5 hours ago

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ

ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…

11 hours ago

ಫೆಬ್ರವರಿ 10ಕ್ಕೆ ಕರ್ನಾಟಕದಲ್ಲಿ ಕುಂಭಮೇಳ : ಹೇಗಿದೆ ತಯಾರಿ..?

  144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…

20 hours ago