ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ವಿಚಾರಕ್ಕೆ ಬಂಡಾಯದ ಕಿಚ್ಚು ಜೋರಾಗಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಇದರ ಬೆನ್ನಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ದೊಡ್ಡ ಸ್ಪರ್ಧೆ ಕೂಡ ಎದುರಾಗಿದೆ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಕೂಡ ಒಬ್ಬರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲೆ ಸದಾ ಕಿಡಿಕಾರುತ್ತಿದ್ದ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಈಗ ಬಿಜೆಪಿ ನಾಯಕರ ಒಳ ಜಗಳವೂ ಇದಕ್ಕೆ ಸಪೋರ್ಟ್ ಆಗಲಿದೆ ಎನ್ನಲಾಗ್ತಾ ಇದೆ.
ಇಲ್ಲಿಯವರೆಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ಸ್ಥಾನ ಭದ್ರ ಎಂದೇ ಹೇಳಲಾಗುತ್ತಿತ್ತು. ಆದರೆ ದಿನಕ್ಕೊಬ್ಬ ನಾಯಕರು ವಿಜಯೇಂದ್ರ ವಿರುದ್ಧವಾಗಿಯೇ ಮಾತನಾಡುತ್ತಿದ್ದಾರೆ. ಇಂದು ಮಾಜಿ ಸಚಿವ ಕೆ.ಸುಧಾಕರ್ ಆಕ್ರೋಶದ ಮಾತುಗಳನ್ನ ಆಡಿದ್ದಾರೆ. ಹೈಕಮಾಂಡ್ ನಾಯಕರಿಗೆ ಎಲ್ಲಾ ವಿಚಾರವನ್ನ ತಿಳಿಸುತ್ತೀನಿ ಅಂತಾನೇ ಹೇಳಿದ್ದಾರೆ.ಯತ್ನಾಳ್ ಅವರ ಬಣ ಮೊದಲಿನಿಂದಾನೂ ವಿಜಯೇಂದ್ರ ಅವರನ್ನ ಟಾರ್ಗೆಟ್ ಮಾಡಿದೆ.
ಶಾಸಕ ಸುನಿಲ್ ಕುಮಾರ್ ಅವರು ಪಕ್ಷದ ನೀಡಿರುವ ಜವಾಬ್ದಾರಿಯಿಂದ ಕೆಳಗಿಳಿಯುವ ನಿರ್ಧಾರ, ಸಭೆಯಲ್ಲೇ ಶ್ರೀರಾಮುಲು ಅವರ ಅಸಮಾಧಾನ, ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಹಾಗೂ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆಗಳು ಕೂಡ ವಿಜಯೇಂದ್ರ ಅವರಿಗೆ ಮುಳುವಾಗಿವೆ. ಪಕ್ಷದಲ್ಲಿಯೇ ವಿಜಯೇಂದ್ರ ಅವರಿಗೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಯತ್ನಾಳ್ ಬಣವೇ ಸ್ಟ್ರಾಂಗ್ ಆಗುತ್ತಿದ್ದು, ಯತ್ನಾಳ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶ್ರೀರಾಮುಲು ಅವರು ಕೂಡ ಯತ್ನಾಳ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆಯ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವುದಾಗಿ ಹೈಕಮಾಂಡ್ ಸೂಚಿಸಿದೆ. ಯಾರೂ ಮುಂದಿನ ರಾಜ್ಯಾಧ್ಯಕ್ಷರಾಗುತ್ತರೆ ನೋಡಬೇಕಿದೆ.
ಚಿತ್ರದುರ್ಗ. ಫೆ.17: ಕೃಷಿ ಚಟುವಟಿಕೆಗಳನ್ನು ಸ್ವಲ್ಪ ಕಡಿಮೆ ಮಾಡಿ ತೋಟಗಾರಿಕೆ ಬೆಳೆಗಳಾದ ಹೂವು, ಹಣ್ಣು, ತರಕಾರಿ ಬೆಳೆಗಳಿಗೆ ಹೆಚ್ಚಿನ ಒತ್ತು…
ಬೆಂಗಳೂರು: ಕಳೆದ ಡಿಸೆಂಬರ್ ನಲ್ಲಿ 384 ಪ್ರೊಬೆಷನರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಚೆ ನಡೆದಿತ್ತು. ಆದರೆ ಈ ಪರೀಕ್ಷೆಯಲ್ಲಿ ಕನ್ನಡದ ಕಗ್ಗೊಲೆ…
ಸುದ್ದಿಒನ್ ನೀವು FASTag ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರುತ್ತದೆ. ಇಂದಿನಿಂದ ಟೋಲ್ ಪ್ಲಾಜಾಗಳನ್ನು ದಾಟಲು ಫಾಸ್ಟ್‌ಟ್ಯಾಗ್ ಬಳಸುವ…
ವರದಿ ಮತ್ತು ಫೋಟೋ ಕೃಪೆ ಕೋಡಿಹಳ್ಳಿ ಟಿ.ಶಿವಮೂರ್ತಿ, ಚಳ್ಳಕೆರೆ ಮೊ : 97427 56304 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 17…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 17…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…