ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ ಲೇವಡಿ ಶುರುವಾಗಿದೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವಿಟ್ಟರ್ ನಲ್ಲಿಯೇ ಕಿತ್ತಾಡುತ್ತಿದ್ದಾರೆ.
ಇದೀಗ ಬಿಜೆಪಿ ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಿ ನೆಹರು ಹಾಗೂ @INCIndia ಕಾಲಕ್ಕೂ, @narendramodi ಅವರ ನೇತೃತ್ವದ NDA ಕಾಲಕ್ಕೂ ಭಾರತ ಕಂಡ ಅಜಗಜಾಂತರ ವ್ಯತ್ಯಾಸ..!
* 2013ರ ಮೊದಲು ಮನಮೋಹನ್ ಸಿಂಗ್ ಅವರ ಸರ್ಕಾರ ಇಸ್ರೋಗೆ ಕೊಟ್ಟ ಅನುದಾನ ಕೇವಲ 5,615 ಕೋಟಿ ರೂ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನೀಡಿದ್ದು ಬರೋಬ್ಬರಿ 12,543 ಕೋಟಿ ರೂ..!
* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ನಮ್ಮ ದೇಶ ಲ್ಯಾಂಡ್ ಲೈನ್ ಫೋನ್ ಕೂಡ ತಯಾರಿಸುತ್ತಿರಲಿಲ್ಲ. ಈಗ ಭಾರತದಲ್ಲಿ ಮಾರಾಟವಾಗುವ ಶೇ.98 ರಷ್ಟು ಸ್ಮಾರ್ಟ್ ಫೋನ್‌ಗಳು ಮೇಡ್ ಇನ್ ಇಂಡಿಯಾ.
* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಆಹಾರ ಧಾನ್ಯಕ್ಕಾಗಿ ಭಾರತ ಅಮೆರಿಕದ ಬಾಗಿಲು ಬಡಿಯುತ್ತಿತ್ತು. ಇಂದು ಉಪಗ್ರಹಗಳನ್ನು ಹಾರಿಸಲು ಅಮೆರಿಕದ ಕಂಪನಿಗಳು ಇಸ್ರೋ ಬಾಗಿಲು ಬಡಿಯುತ್ತಿವೆ.
* ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ ಭಾರತದ ವಾರ್ಷಿಕ ಪ್ರಗತಿ 2.5 ಪರ್ಸೆಂಟ್ ಇತ್ತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾಲದಲ್ಲಿ 8.5 ಪರ್ಸೆಂಟ್ ಬೆಳವಣಿಗೆ ಕಂಡಿದೆ..!
* ಕಾಂಗ್ರೆಸ್ ಕಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು 2 ಲಕ್ಷ ಕೋಟಿ ರೂ. ನಷ್ಟದಲ್ಲಿದ್ದವು. ಈಗ 1.7 ಲಕ್ಷ ಕೋಟಿ ರೂ. ಲಾಭದಲ್ಲಿವೆ..!
* ನೆಹರು ಅವರ ಕಾಲದಲ್ಲಿ ಸೊನ್ನೆ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕೇವಲ 600 ಕೋಟಿ ರೂ. ಇದ್ದ ರಕ್ಷಣಾ ಸಾಮಾಗ್ರಿ ರಫ್ತು ವಹಿವಾಟು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾಲದಲ್ಲಿ 16 ಸಾವಿರ ಕೋಟಿ ರೂ.ಗೆ ತಲುಪಿದೆ.
* 1947 – 2014ರ ವರೆಗಿನ ನೆಹರು ಹಾಗೂ ಕಾಂಗ್ರೆಸ್ ಕಾಲದಲ್ಲಿ
ಐಐಟಿ- 16, ಐಐಎಂ – 13, ಐಐಐಟಿ – 9
2014ರ ನಂತರ ಪ್ರಧಾನಿ ಮೋದಿ ಅವರ ನೇತೃತ್ವದ ಭಾರತದ ಕಾಲದಲ್ಲಿ ಐಐಟಿ – 23, ಐಐಎಂ – 20, ಐಐಐಟಿ – 25!
* 1961ರಲ್ಲಿ ನೆಹರು ಅವರ ತಮ್ಮ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುತ್ತಿದ್ದರು ಆದರೆ ಇಸ್ರೋ ವಿಜ್ಞಾನಿಗಳು ಸೈಕಲ್‌ನಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಸಾಗಿಸಬೇಕಾದ ದುಸ್ಥಿತಿ ಇತ್ತು..!
Dear Congress, wake up and smell the coffee! ಎಂದು ಟ್ವೀಟ್ ಮಾಡಿದೆ.
ಬಜೆಟ್ ಲೆಕ್ಕಚಾರ ; ಜನರಿಗಿಂತ ಸಚಿವರಿಗೆ ನಿರೀಕ್ಷೆ, ತುಮಕೂರಿಗೆ ಹೆಚ್ಚು ಅನುದಾನ ತರುವ ತವಕ..!! ಬೆಂಗಳೂರು; ಮಾರ್ಚ್ 7 ರಾಜ್ಯ…
ಸುದ್ದಿಒನ್ ಪ್ರತಿದಿನ ಬೆಳಿಗ್ಗೆ ನಿಂಬೆರಸ ಮತ್ತು ಅರಿಶಿನ ಬೆರೆಸಿದ ಪಾನೀಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಂಬೆ ಮತ್ತು ಅರಿಶಿನ…
ಈ ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಈ ರಾಶಿಯವರು ಎಷ್ಟೇ ದುಡಿದರು ಹಣಕಾಸಿನ ಸಮಸ್ಯೆ ಬಗೆಹರಿಯುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ…
ಚಿತ್ರದುರ್ಗ. ಫೆ.21: ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಆದರೆ ಇದುವರೆಗೂ ಇ-ಖಾತಾ ಪಡೆಯದೇ ಇರುವ ಕಟ್ಟಡಗಳ…
ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ…
ಮೈಸೂರು: ತಾಯಿ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳಿಂದ ಅವಸ್ಥೆಯಾಗಿದೆ. ಮೊದಲೇ ಬಿಸಿಲಿಗೆ ಒಣಗಿದ ಬೆಟ್ಟಕ್ಕೆ ಕಿಡಿತಾಕಿಸಿದ್ದಾರೆ. ಇದೀಗ ಆ ಕಿಡಿ ಜೋರಾಗಿಯೇ…