in ,

ಈ ಮುಂಚೆಯೂ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನಗೊಂಡಿತ್ತು : ಆಗ ಪಾರಾಗಿದ್ದ ರಾವತ್ ಈಗ ಇನ್ನಿಲ್ಲ..!

suddione whatsapp group join

ನವದೆಹಲಿ: ಇಂದು ತಮಿಳುನಾಡಿನ ಕನೂರಿನ ಬಳಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನಗೊಂಡು ಆ ದುರ್ಘಟನೆಯಲ್ಲಿ ಬಿಪಿನ್ ರಾವತ್ ನಿಧನರಾಗಿದ್ದಾರೆ.

ರಾವತ್ ಅವರಿದ್ದ ಹೆಲಿಕಾಪ್ಟರ್ ಈ ಹಿಂದೆಯೊಮ್ಮೆ ಪತನಗೊಂಡಿತ್ತು. ಆದ್ರೆ ಆ ಸಮಯದಲ್ಲಿ ರಾವತ್ ಬದುಕುಳಿದಿದ್ದರು. 2015ರಲ್ಲಿ ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ಅವರು ಪ್ರಯಾಣಿಸುತ್ತಿದ್ದ ಚೀತಾ ಹೆಲಿಕಾಪ್ಟರ್ ದಿಮ್ನಾಪುರದಲ್ಲಿ ಪತನಗೊಂಡಾಗ ರಾವತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಟೇಕಾಫ್ ಮಾಡುವಾಗ ಆ ಹೆಲಿಕಾಪ್ಟರ್ ಎಂಜಿನ್ ಸಮಸ್ಯೆಯಿಂದಾಗಿ ಪತನಗೊಂಡಿತ್ತು. ಅದರಿಂದ ಬಿಪಿನ್ ರಾವತ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಪ್ರಾಣಾಪಾಯದಿಂದ ಪಾರಾಗಿದ್ದರು. ಆದ್ರೆ ಈ ಬಾರಿಯ ದುರಂತದಿಂದ ಬಿಪಿನ್ ರಾವತ್ ಸೇರಿದಂತೆ ಅವರ ಪತ್ನಿ ಹಾಗೂ ಇನ್ನಿತರ 13 ಮಂದಿ ಸಾವನ್ನಪ್ಪಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

399 ಹೊಸ ಸೋಂಕಿತರು.. 6 ಸಾವು..!

ಈ ರಾಶಿಯವರ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವರು!