ನವದೆಹಲಿ: ನಿನ್ನೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಸೇನೆಯ ಮುಖ್ಯಸ್ಥನನ್ನೇ ಕಳೆದುಕೊಂಡಿದ್ದೇವೆ. ಅದರ ಜೊತೆಗೆ ಸೇನಾಧಿಕಾರಿಗಳನ್ನು ಹೆಲಿಕಾಪ್ಟರ್ ದುರಂತ ಬಲಿಪಡೆದಿದೆ. ಇದೀಗ ಆ ದುರಂತದ ತನಿಖೆಯನ್ನ ಇಲಾಖೆ ತೀವ್ರಗೊಳಿಸಿದೆ.
ಸೇನಾಧಿಕಾರಿಗಳು ಕೂಡ ದುರಂತದ ಜಾಗದಲ್ಲಿ ಅವಶೇಷಗಳನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಮುಖ್ಯವಾಗಿ ಬ್ಯ್ಲಾಕ್ ಬಾಕ್ಸ್ ಪತ್ತೆಯಾಗಿದೆ. ಅದನ್ನ ಭದ್ರವಾಗಿ ತೆಗೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ತನಿಖೆಗೆ ಅದು ಸಾಕಷ್ಟು ಮಹತ್ವ ವಹಿಸುತ್ತದೆ.
ಪ್ರಯಾಣಿಕರ ವಿಮಾನದಲ್ಲಿ ಸಾಮಾನ್ಯವಾಗಿ ಎರಡು ಬ್ಲ್ಯಾಕ್ ಬಾಕ್ಸ್ ಇರುತ್ತವೆ. ಒಂದು ಬಾಕ್ಸ್ ವಿಮಾನ ಹಾರಾಟಕ್ಕೆ ಸಂಬಂಧಿಸಿದ್ದು, ಇನ್ನೊಂದರಲ್ಲಿ ಕಾಕ್ ಪಿಟ್ ಧ್ವನಿ ಮುದ್ರಣ ಇರಲಿದೆಯಂತೆ. ವಿಮಾನದ ಯಾವುದೇ ಎಲೆಕ್ಟ್ರಾನಿಕ್ ವ್ಯವಸ್ಥೆಗೆ ಕಳುಹಿಸುವ ಪ್ರತಿ ಸಂದೇಶವನ್ನು ಈ ಎಲೆಕ್ಟ್ರಾನಿಕ್ ಬಾಕ್ಸ್ ಸಂಗ್ರಹಿಸಿಟ್ಟುಕೊಳ್ಳುತ್ತದೆಯಂತೆ.
ಸದ್ಯ ಈಗ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚಿರುವ ಸೇನಾಧಿಕಾರಿಗಳು, ಅದರಲ್ಲಿರುವ ಮಾಹಿತಿ ಕಲೆ ಹಾಕಲಿದ್ದಾರೆ. ಆ ಬಳಿಕ ದುರಂತಕ್ಕೂ ಮುನ್ನ ಯಾವ ಸಂಭಾಷಣೆ ನಡೆಯಿತು…? ದುರಂತ ನಡೆಯಲು ಕಾರಣ ಏನು..? ಎಂಬುದೆಲ್ಲಾ ಮಾಹಿತಿ ಸಿಗಲಿದೆ ಎಂದಿದ್ದಾರೆ.