ಚಿಕ್ಕಬಳ್ಳಾಪುರ: ಇಲ್ಲಿನ ವಿದುರಾಶ್ವತ್ಥ ಗ್ರಾಮಕ್ಕೆ ನಾಳೆ ಹಿಂದೂಪರ ಸಂಘಟನೆಗಳು ರ್ಯಾಲಿ ಹೊರಟಿದ್ದಾರೆ. ಸಂಘಟನೆಗಳ ರ್ಯಾಲಿಯಿಂದಾಗಿ ವಿದುರಾಶ್ವತ್ಥ ವೀರಸೌಧ ಚಿತ್ರಗ್ಯಾಲರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕಾಗಿ ಹಿಂದೂಪರ ಸಂಘಟನೆಗಳು, ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಚಿಕ್ಕಬಳ್ಳಾಪುರದಲ್ಲಿನ ವಿದುರಾಶ್ವತ್ಥ ವೀರಸೌಧ ಚಿತ್ರಗ್ಯಾಲರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಹುತಾತ್ಮ ವೀರ ಯೋಧರ ಸ್ಮಾರಕ ಮತ್ತು ಸ್ತೂಪಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಈ ವೇಳೆ ಕೆಲವರ ಫೋಟೋಗಳ ದಾಳಿ ನಡೆಯುವ ಸಾಧ್ಯತೆಯು ಇರುವ ಅನುಮಾನದ ಕಾರಣದಿಂದಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ವಿದುರಾಶ್ವತ್ಥ ಐತಿಹಾಸಿಕ ಪುಣ್ಯ ಕ್ಷೇತ್ರವೇ ಸರಿ. ಒಂದು ಕಡೆ ದೇವರಿದ್ದರೆ ಮತ್ತೊಂದು ಕಡೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಸ್ತೂಪವೂ ಇದೆ. ಆದರೆ ಕಳೆದ ಕೆಲವು ದಿನಗಳಿಂದ ಈ ಗ್ಯಾಲರಿ ವಿವಾದಿತ ಕೇಂದ್ರಬಿಂದುವಾಗಿದೆ. ಅಲ್ಲಿರುವ ಫೋಟೋಗಳ ಬಗ್ಗೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಕೋಮುವಾದ, ಬಲಪಂಥೀಯ, ಮುಸ್ಲಿಂ ಕೋಮುವಾದ, ಮಹಾತ್ಮಗಾಂಧಿ ಹತ್ಯೆಯಾದವರು ಹೀಗೆ ಹಲವು ಫೋಟೋಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಈಗ ಹಿಂದೂ ಪರ ಸಂಘಟನೆಗಳು ದಾಳಿ ನಡೆಸುವ ಆತಂಕ ಮನೆ ಮಾಡಿದೆ. ಹೀಗಾಗಿ ಬಿಗಿ ಭದ್ರತೆ ಒದಗಿಸಲಾಗಿದೆ.