in

ಬಸವ ಜಯಂತಿ ಪ್ರಯುಕ್ತ ವೀರಶೈವ ಸಮಾಜದ ವತಿಯಿಂದ ಬೈಕ್ ರ್ಯಾಲಿ

suddione whatsapp group join

ಚಿತ್ರದುರ್ಗ,(ಮೇ.02): ವಿಶ್ವಗುರು, ಭಕ್ತಿಭಂಡಾರಿ, ಕ್ರಾಂತಿಕಾರಿ, ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ಸಮಾಜದ ವತಿಯಿಂದ ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸೋಮವಾರ ಹೊರಟ ಬೈಕ್ ರ್ಯಾಲಿ ನಗರದಲ್ಲಿ ಸಂಚರಿಸಿತು.

ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ.ರಾಜಶೇಖರ್ ಬೈಕ್‍ರ್ಯಾಲಿಯನ್ನು ಉದ್ಘಾಟಿಸಿದರು.
ಗಾಂಧಿ ಸರ್ಕಲ್, ಪ್ರವಾಸಿ ಮಂದಿರ, ಜಿಲ್ಲಾಧಿಕಾರಿ ಬಂಗಲೆ ಮುಂಭಾಗ, ಬಸವೇಶ್ವರ ಸರ್ಕಲ್, ಕೋರ್ಟ್ ರಸ್ತೆ, ಮದಕರಿ ವೃತ್ತ, ರಂಗಯ್ಯನಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಸಂಗೊಳ್ಳಿರಾಯಣ್ಣ ವೃತ್ತ, ಕನಕ ಸರ್ಕಲ್ ಮಾರ್ಗವಾಗಿ ಸಾಗಿದ ಬೈಕ್ ರ್ಯಾಲಿ ನೀಲಕಂಠೇಶ್ವರಸ್ವಾಮಿ ದೇವಸ್ಥಾನ ತಲುಪಿತು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಎಂ.ಟಿ.ಮಲ್ಲಿಕಾರ್ಜುನಯ್ಯ, ವೀರಶೈವ ಸಮಾಜದ ಕಾರ್ಯದರ್ಶಿ ಎನ್.ಬಿ.ವಿಶ್ವನಾಥ್, ಖಜಾಂಚಿ ಷಡಾಕ್ಷರಯ್ಯ, ನಗರಸಭೆ ಸದಸ್ಯರುಗಳಾದ ಜಯಣ್ಣ, ಸುರೇಶ್, ವೀರಶೈವ ಸಮಾಜದ ನಿರ್ದೇಶಕರುಗಳಾದ ಜಿ.ಎಂ.ಪ್ರಕಾಶ್, ಮೋಕ್ಷರುದ್ರಸ್ವಾಮಿ, ವೀರೇಶ್, ಶಶಿಧರ್ ಬಾಬು, ವೀರಭದ್ರಸ್ವಾಮಿ, ಶಿವಣ್ಣ, ವಿಶ್ವನಾಥಯ್ಯ, ಚನ್ನಯ್ಯ, ರುದ್ರೇಶ್ ಐಗಳ್, ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಸಚಿನ್, ಹೆಚ್.ಎಂ.ಮಂಜುನಾಥ್, ಜಿತೇಂದ್ರ, ಮಹಡಿ ಶಿವಮೂರ್ತಿ, ಗಂಗಾಧರಪ್ಪ, ಗಿರೀಶ್, ಮನು, ನಾಗರಾಜ್ ಸಂಗಂ, ವೀರೇಂದ್ರ, ವಿಜಯಕುಮಾರ್, ಸಿದ್ದಣ್ಣ, ನಿರ್ಮಲ ಬಸವರಾಜ್, ನೇತ್ರ, ಆರತಿ ಮಹಡಿ ಶಿವಮೂರ್ತಿ ಸೇರಿದಂತೆ ವೀರಶೈವ ಸಮಾಜದ ಅನೇಕ ಮುಖಂಡರುಗಳು ಬೈಕ್‍ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ರಾಮನಗರ ಜಿಲ್ಲೆ ಕ್ಲೀನ್ ಮಾಡಲು ಬಂದಿದ್ದಾರೆ ಮಾಡಲಿ : ಅಶ್ವತ್ಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿಕೆಶಿ

ಕರುನಾಡಿನಲ್ಲಿ‌ ಕನ್ನಡವೇ ಮೊದಲು : ಹಿಂದಿ ರಾಷ್ಟ್ರ ಭಾಷೆ ವಿಚಾರಕ್ಕೆ ಯದುವೀರ್ ಒಡೆಯರ್ ಉತ್ತರ