ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಹೊಸದೊಂದು ಟಾಸ್ಕ್ ಶುರುವಾಗಿದೆ. ಮನೆಗೆ ಹಳೆಯ ಅತಿಥಿಗಳು, ಪಾರ್ಟಿ ಮಾಡುವುದಕ್ಕೆ ಅಂತ ಬಂದಿದ್ದಾರೆ. ಹೀಗಾಗಿ ಮನೆಯ ಸದಸ್ಯರು ಅವರನ್ನೆಲ್ಲಾ ಚೆನ್ನಾಗಿಯೇ ನೋಡಿಕೊಳ್ಳಬೇಕಾಗಿದೆ. ಈ ಟಾಸ್ಕ್ ನಲ್ಲಿ ಗಿಲ್ಲಿ ಹಾಗೂ ಉಗ್ರಂ ಮಂಜು, ರಜತ್ ನಡುವೆ ಗಲಾಟೆಯೇ ನಡೆಯುತ್ತಿದೆ. ಆದರೆ ಇದು ಕೂಡ ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಗಿದೆ. ಇದರ ನಡುವೆ ರಕ್ಷಿತಾ ತನ್ನ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಉಗ್ರಂ ಮಂಜು, ಚೈತ್ರಾ, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಜೊತೆಗೆ ರಕ್ಷಿತಾ ಕೂತು ಮಾತನಾಡುತ್ತಾ ಇದ್ದರು. ಆಗ ಹುಡುಗನ ಬಗ್ಗೆ ಬಂದಾಗ ರಕ್ಷಿತಾ ಹೇಳಿದ್ದು, ನಾನು ರೈತನನ್ನ ಮದುವೆ ಆಗ್ಬೇಕು ಅಂತ ಆಸೆ ಇದೆ ಎಂಬುದನ್ನ. ಈಗಿನ ಕಾಲದಲ್ಲಿ ರೈತರು ಅಂದ್ರೆ ಹೆಣ್ಣು ಕೊಡಲ್ಲ ಎಂಬ ಮಾತಿದೆ. ಅದರಲ್ಲೂ ಪಕ್ಕ ಹಳ್ಳಿಯಲ್ಲಿ ಇದ್ದು, ಬರೀ ವ್ಯವಸಾಯ ಎಂಬ ನೀತಿ ಫಾಲೋ ಮಾಡುವವರಿಗೆ ಹೆಣ್ಣು ಸಿಗುವುದು ಬಹಳ ಕಷ್ಟಕರ. ಇಂಥಹ ಪರಿಸ್ಥಿತಿಯಲ್ಲಿ ರಕ್ಷಿತಾ ಹೇಳಿದ ಮಾತಂತು ರೈತರಿಗೆ ಭಲೇ ಇಷ್ಟವಾಗಿದೆ.
ಆದರೆ ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ಅದೇನಂದ್ರೆ ರೈತನನ್ನ ಮದುವೆ ಆದ್ರೆ ತಾನೂ ಬ್ಲಾಗ್ ಮಾಡುವುದಕ್ಕೆ ಸುಲಭ ಅಂತ. ಪ್ರತಿದಿನ ಕಂಟೆಂಟ್ ಸಿಗುತ್ತೆ, ಪ್ರತಿದಿನ ಆತ ಮಾಡುವ ಕೆಲಸವನ್ನೆಲ್ಲ ವಿಡಿಯೋ ಮಾಡಬಹುದು ಎಂಬುದನ್ನ ರಕ್ಷಿತಾ ಹೇಳಿದ್ರು. ಅದಕ್ಕೆ ಮಂಜು ಮತ್ತೊಂದು ಪ್ರಶ್ನೆಯನ್ನ ಕೇಳಿದ್ರು. ಬ್ಲಾಗ್ ಮಾಡೋದು ಬೇಡ ಅಂತ ಅಂದ್ರೆ ಏನ್ ಮಾಡ್ತೀಯ ಅಂದಾಗ, ಅವನನ್ನೇ ಬಿಟ್ಟು ಬರ್ತೀನಿ ಎಂಬಂತ ಮಾತನ್ನ ಹೇಳಿದ್ದಾರೆ.
