ಬೆಂಗಳೂರು: ಇಂದು ರಾಜ್ಯಸಭಾ ಚುನಾವಣೆ ನಡೆದಿದ್ರಿ, ಫಲಿತಾಂಶವೂ ಹೊರ ಬಿದ್ದಿದೆ. ಇಂದಿನ ಚುನಾವಣೆ ಕುತೂಹಲದತ್ತ ಸಾಗಿತ್ತು. ಜೆಡಿಎಸ್ ನಿಂದ ಐದನೇ ಅಭ್ಯರ್ಥಿ ಸ್ಪರ್ಧಿಸಿದ್ದ ಕಾರಣ ಒಂದಿಷ್ಟು ಆತಂಕವೂ ಕಾಂಗ್ರೆಸ್ ಗೆ ಶುರುವಾಗಿತ್ತು. ಆದರೆ ಈ ಎಲ್ಲದರ ನಡುವೆ ಆಡತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಮೂವರು ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಂತ ಅಜಯ್ ಮಾಕನ್ -48, ನಾಸೀರ್ ಹುಸೇನ್ – 46, ಜಿ ಸಿ ಚಂದ್ರಶೇಖರ್ – 46 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಮೈತ್ರಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ನಾರಾಯಣ ಸಾ ಬಾಂಢಾಗೆ 47 ಮತ, ಕುಪೇಂದ್ರ ರೆಡ್ಡಿಗೆ 36 ಮತಗಳು ಸಿಕ್ಕಿವೆ. 47 ಮತ ಪಡೆದ ನಾರಾಯಣ ಬಾಂಢಾ ರಾಜ್ಯಸಭೆಗೆ ಮೊದಲ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದರೆ, ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಈ ಗೆಲುವನ್ನು ಕಾಂಗ್ರೆಸ್ ಸಂಭ್ರಮಿಸಿದೆ. ಸಿಹಿ ತಿನ್ನಿಸಿ, ಗೆದ್ದವರಿಗೆ ಹಾರ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ಗೆದ್ದವರ ಪರ ಘೋಷಣೆಗಳು ಕೇಳಿ ಬಂದಿವೆ. ಈ ಬಾರಿ ಕಾಂಗ್ರೆಸ್ ವಿರುದ್ಧ ಗೆಲ್ಲಲರೆಬೇಕೆಂದು ಸ್ಟಾಟರ್ಜಿ ರೂಪಿಸಿದ್ದ ಜೆಡಿಎಸ್ ಲೆಕ್ಕಚಾರ ಉಲ್ಟಾ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಕ್ಕಿದೆ. ವಿಧಾನಸಭಾ ಹಾಗೂ ರಾಜ್ಯಸಭೆಯಲ್ಲಿ ಗೆಲುವು ಪಡೆದು ಸಂತಸದಲ್ಲಿರುವ ಕಾಂಗ್ರೆಸ್ ಈಗ ಲೋಕಸಭೆಗೆ ತಯಾರಿ ನಡೆಸಬೇಕಿದೆ. ಅಲ್ಲಿಯೂ ಗೆಲ್ಲುವ ತಂತ್ರಗಾರಿಕೆ ಬಳಕೆ ಮಾಡುತ್ತಾ ನೋಡಬೇಕಿದೆ.
ಸುದ್ದಿಒನ್ : ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಇಂದು ಮಧ್ಯಾನ್ಹ 2.30 ಕ್ಕೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ vs ಪಾಕಿಸ್ತಾನ…
ಸುದ್ದಿಒನ್ ಬ್ಲಾಕ್ ಕಾಫಿ ಹೃದಯದ ಆರೋಗ್ಯವನ್ನು ರಕ್ಷಿಸುವುದಲ್ಲದೆ, ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.…
ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ, ಈ ರಾಶಿಗಳ ಮದುವೆಗೆ ತುಂಬಾ ಅಡಚಣೆ, ಭಾನುವಾರ ರಾಶಿ ಭವಿಷ್ಯ 23 ಫೆಬ್ರವರಿ…
ಸುದ್ದಿಒನ್, ಹಿರಿಯೂರು, ಫೆಬ್ರವರಿ. 22 : ಅಬ್ಬಿನಹೊಳೆ ಮತ್ತು ಹೊಸದುರ್ಗ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಗಂಧ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 22 : ಮಹಾರಾಷ್ಟ್ರದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನಿಗೆ ಮರಾಠಿಗರು ಕನ್ನಡದಲ್ಲಿ ಟಿಕೆಟ್ ಕೇಳಿದ…