Connect with us

Hi, what are you looking for?

ಪ್ರಮುಖ ಸುದ್ದಿ

ಅರವಿಂದ್ ಗೆ ಬಿಗ್ ಬಾಸ್ ತೋರಿಸಿದರು ಪ್ರಶಾಂತ್ ಸಂಬರ್ಗಿ ಅಸಲಿ ಮುಖವಾಡ….! ಆ ಸೀಕ್ರೆಟ್ ವಿಡಿಯೋ ನೋಡಿ ಅರವಿಂದ್ ಹೇಳಿದ್ದೇನು….?

ಬಿಗ್ ಬಾಸ್ ಆಟ 50 ದಿನ ಕಂಪ್ಲೀಟ್ ಆಗ್ತಿದ್ದ ಸ್ಪರ್ಧಿಗಳ ಅಸಲಿ ಮುಖವಾಡ ಬಟಾಬಯಲಾಗುತ್ತಿದೆ. ಸತ್ಯವನ್ನೇ ಸುಳ್ಳು.. ತಾವು ತಪ್ಪು ಮಾಡಿದ್ರು ಮಾಡಿಲ್ಲ ಎಂದು ವಾದ ಮಾಡುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರ ಅಸಲಿ ಮುಖವಾಡವನ್ನು ಬಿಗ್ ಬಾಸ್ ಅರವಿಂದ್ ಮುಂದೆ ನಿನ್ನೆ ತೆರೆದಿಟ್ಟಿದ್ದಾರೆ. ಬಿಗ್ ಬಾಸ್ ತೋರಿಸಿದ ಆ ರಿಯಾಲಿಟಿ ವಿಡಿಯೋ ನೋಡಿ ಅರವಿಂದ್ ಶಾಕ್ ಆಗಿದ್ದಾರೆ.

*ಆಗಿದ್ದೇನು…?*

ಕಳೆದ ವಾರ ಬಿಗ್ ಬಾಸ್ ಹಾಸ್ಟೆಲ್ ಸದಸ್ಯರಿಗೆ ಲವ್ ಲೆಟರ್ ನೀಡುವ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಅತಿ ಹೆಚ್ಚು ಪ್ರೇಮ ಪತ್ರಗಳನ್ನು ಸಂಗ್ರಹಿಸುವ ಮೂಲಕ ದಿವ್ಯಾ ಸುರೇಶ್ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾಗವಹಿಸುವ ಅಹರ್ತೆ ಪಡೆದುಕೊಂಡಿದ್ದರು. ಲವ್ ಲೆಟರ್ ಗೇಮ್ನಲ್ಲಿ ಯಾರು ವಿನ್ನರ್ ಆಗ್ತಾರೋ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸುವ ಅವಕಾಶ ಇತ್ತು. ಅತ್ಯುತ್ತಮ ಟಾಸ್ಕ್ ಆಡಿದ ಮತ್ತು ಅತ್ಯುತ್ತಮ ಆಟಗಾರ್ತಿಯನ್ನಾಗಿ ದಿವ್ಯಾ ಸುರೇಶ್ರ್ನೇ ಆಯ್ಕೆ ಮಾಡಲಾಗಿತ್ತು. ಎರಡು ಪಟ್ಟಗಳನ್ನು ದಿವ್ಯಾ ಸುರೇಶ್ ಗೆ ನೀಡಿದ್ದರಿಂದ, ಮನೆಯ ಮತ್ತೊಬ್ಬ ಸದಸ್ಯರಿಗೆ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪಿತ್ತು. ಇದು ಉಳಿದ ಸದಸ್ಯರಿಗೆ ಬೇಸರಕ್ಕೆ ಕಾರಣವಾಗಿತ್ತು.

ದಿವ್ಯಾ ಸುರೇಶ್ ಅವರಿಗೆ ಎರಡು ಪಟ್ಟ ನೀಡಿರುವುರ ಬಗ್ಗೆ ವಾರ್ಡನ್ ಆಗಿದ್ದ ಪ್ರಶಾಂತ್ ಸಂಬರ್ಗಿ ಬಳಿ ಅರವಿಂದ್ ಚರ್ಚೆ ನಡೆಸಿದ್ದರು. ಈ ವೇಳೆ ಪ್ರಶಾಂತ್ ಸಂಬರ್ಗಿ, ಇದ್ರಲ್ಲಿ ನನ್ನದು ಏನು ತಪ್ಪಿಲ್ಲ. ಎಲ್ಲಾ ನಿಧಿದ್ದೂ ತಪ್ಪು. ನನಗೆ ಮಾತಾಡಲು ಅವಳು ಅವಕಾಶ ನೀಡಲಿಲ್ಲ. ಅವಳು ಮೊದಲೇ ದಿವ್ಯಾ ಸುರೇಶ್ ಹೆಸ್ರು ಫಿಕ್ಸ್ ಮಾಡಿದ್ದಳು ಎಂದೆಲ್ಲಾ ಆರೋಪಗಳನ್ನು ನಿಧಿ ಮೇಲೆ ಹಾಕಿದ್ದರು. ಆದ್ರೆ ಅದ್ಯಾವಾಗ ಬಿಗ್ ಬಾಸ್ ಅರವಿಂದ್ ಗೆ ರಿಯಾಲಿಟಿ ವಿಡಿಯೋ ತೋರಿಸಿದರೋ ಆಗ ಅರವಿಂದ್ ಗೆ ಅಸಲಿ ವಿಚಾರ ಗೊತ್ತಾಗಿದೆ.

ಆ ವಿಡಿಯೋ ನೋಡಿ ಪ್ರಶಾಂತ್ ಸಂಬರ್ಗಿ ಅವರದ್ದೇ ತಪ್ಪು ಎಂದು ತಿಳಿದುಕೊಂಡ ಅರವಿಂದ್ ನಿಧಿ ಸುಬ್ಬಯ್ಯ ಬಳಿ ಕ್ಷಮೆಯಾಚಿಸಿದ್ದಾರೆ. ಬಿಗ್ ಬಾಸ್ ತಮಗೆ ರಹಸ್ಯ ವಿಡಿಯೋ ತೋರಿಸಿರುವುದರ ಬಗ್ಗೆ ನಿಧಿ ಬಳಿ ಚರ್ಚೆ ನಡೆಸಿದ್ದಾರೆ. ಸತ್ಯ ನಿನಗೆ ಗೊತ್ತಾಗಿದೆ ಅಲ್ವಾ ಅದು ನನಗೆ ಖುಷಿ ಕೊಟ್ಟಿದೆ ಎಂದು ನಿಧಿ ಅರವಿಂದ್ ಗೆ ಹೇಳಿದ್ದಾರೆ. ಒಟ್ನಲ್ಲಿ ತನ್ನ ತಪ್ಪು ಮುಚ್ಚಿಡಲು ಬೇರೆಯವರ ಮೇಲೆ ಆರೋಪ ಮಾಡುವ ಪ್ರಶಾಂತ್ ಸಂಬರ್ಗಿ ಅವರ ಅಸಲಿ ಮುಖವಾಡವನ್ನು ಬಿಗ್ ಬಾಸ್ ತೆರೆದಿಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!