
ಚಿಕ್ಕಮಗಳೂರು: ಜೆಡಿಎಸ್ ಪಕ್ಷದಲ್ಲಿ ಸದ್ಯ ಕುಟುಂಬಸ್ಥರಲ್ಲಿಯೇ ಟಿಕೆಟ್ ವಾರ್ ಶುರುವಾಗಿದೆ. ಹಾಸನ ಜಿಲ್ಲೆಯಲ್ಲಿ ನಾನೇ ಅಭ್ಯರ್ಥಿ. ನನ್ನನ್ನೇ ಆಯ್ಕೆ ಮಾಡಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅದಾದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ, ಈ ಹೇಳಿಕೆಗೆ ಭವಾನಿ ರೇವಣ್ಣ ಅವರೇ ನಿಲ್ಲಬೇಕು ಎಂಬ ಅಗತ್ಯವೇನು ಇಲ್ಲ ಎಂದಿದ್ದರು. ಇದೀಗ ಈ ವಿಚಾರಕ್ಕೆ ಬಿಜೆಪಿ ಎಂಟ್ರಿಯಾಗಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿದ್ದು, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನನ್ನ ಮನಸ್ಸಲ್ಲಿ ಭವಾನಿ ಅಕ್ಕ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಬೇಕು ಎಂಬ ಆಸೆ ಇದೆ. ಆದರೆ ಕುಟುಂಬದಲ್ಲಿ ನಾನು ಜಗಳ ಹಚ್ಚಿಸಲು ಬಯಸುವುದಿಲ್ಲ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಹಾಸನ ಜಿಲ್ಲೆಯ ರಾಜಕಾರಣವನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಭವಾನಿಯವರು ನಮ್ಮ ಪಕ್ಷದಿಂದ ಹೊಳೆನರಸೀಪುರದಿಂದ ಅಭ್ಯರ್ಥಿಯಾಗಲಿ. ಅವರಿಗಿಂತ ಹೊಳೆನರಸೀಪುರಕ್ಕೆ ಉತ್ತಮ ಅಭ್ಯರ್ಥಿ ಮತ್ತೊಬ್ಬರಿಲ್ಲ. ನಮ್ಮ ಪಕ್ಷಕ್ಕೆ ಕರೆದು ಭವಾನಿ ಮತ್ತು ರೇವಣ್ಣ ನಡುವೆ ಜಗಳ ಹಚ್ಚಿಸಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.

GIPHY App Key not set. Please check settings