in

ಭಾರತ್ ಬಂದ್ : ಎಲ್ಲೆಲ್ಲಿ ಏನೇನ್ ಆಗ್ತಿದೆ..? ಏನೇನ್ ವ್ಯವಸ್ಥೆ ಇದೆ..?

suddione whatsapp group join

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ರೈತರ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಸಿಲಿಕಾನ್ ಸಿಟಿಯ ನಾಲ್ಕು ಮೂಲೆಗಳಿಂದ ರೈತರ ರ್ಯಾಲಿ ಹೊರಡಲಿದೆ.

ಆದ್ರೆ ನಗರದಲ್ಲಿ ಎಂದಿನಂತೆ ಬಸ್ ಗಳ ಸಂಚಾರ, ಹೊಟೇಲ್ ವ್ಯವಸ್ಥೆ, ಆಟೋ ಕ್ಯಾಬ್ ಓಡಾಟ ಇದೆ. ಆದ್ರೆ ನಾಲ್ಕು ಕಡೆಯಿಂದ ರ್ಯಾಲಿ ಹೊರಡೋ ಕಾರಣ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ ಆಗುವ ಸಾಧ್ಯತೆ ಇದೆ.

ಇನ್ನು ರೈತ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಯಾರಿಗೂ ತೊಂದರೆಯಾಗದಂತೆ ರ್ಯಾಲಿ ಮಾಡಲು ಸೂಚಿಸಿದೆ. ಇನ್ನು ರೈತರ ಪ್ರತಿಭಟನೆ ಜಿಲ್ಲೆಗಳಲ್ಲೂ ಶುರುವಾಗಿದೆ. ಕೋಲಾರದ ಬಂಗಾರ ಪೇಟೆಯಲ್ಲಿ ಬೈಕ್ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ಮೂಲಕ ಗ್ರಾಮೀಣ ಭಾಗದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಇನ್ನು ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡೋದಕ್ಕೆ ಕಾಂಗ್ರೆಸ್ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಾಜ್ಯ ಸರ್ಕಾರಿ ನೌಕರರು ಸೆ. 30 ರೊಳಗೆ ಆರೋಗ್ಯ ಸಂಜೀವಿನಿಗೆ ನೋಂದಾಯಿಸಿ ; ಜಿಲ್ಲಾಧ್ಯಕ್ಷ ಕೆ. ಮಂಜುನಾಥ

ಬೆಲೆ ಏರಿಕೆ, ಕೃಷಿ ಕಾಯ್ದೆಗೆ ವಿರೋಧ : ತಳ್ಳೋ ಗಾಡಿಯಲ್ಲಿ ಮೋದಿ, ಅದಾನಿ ಫೋಟೋ ಇಟ್ಟು ಆಕ್ರೋಶ..!