in

ತಿ.ನರಸೀಪುರದಲ್ಲಿ ಸಂಯುಕ್ತ ಕಿಸಾನದ್ ಮೋರ್ಚಾ ನೇತ್ರತ್ವದಲ್ಲಿ ಕರೆ ಕೊಟ್ಟಿದ್ದ ಭಾರತ್ ಬಂದ್ ಯಶಸ್ವಿ

suddione whatsapp group join

ವರದಿ : ಶಿವರಾಜು. ಎಂ ( ವಿಕಾಟ್ ಶಿವು )

ಮೊ : +91 97419 09020

ತಿ.ನರಸೀಪುರ.(ಸೆ.27): ರೈತ ವಿರೋಧಿ ಕೃಷಿ ಕಾಯ್ದೆ ರದ್ದಾಗಬೇಕು ಅಡುಗೆ ಅನಿಲ, ಪೆಟ್ರೊಲ್, ಡೀಸೆಲ್‌ ಸೇರಿದಂತೆ ಇನ್ನಿತರ ಅತಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ರೈತಪರ ಸಂಘಟನೆಗಳು ಸಂಯುಕ್ತ ಕಿಸನ್ ಮೋರ್ಚಾ ನೇತ್ರತ್ವದಲ್ಲಿ ಕರೆ ಕೊಟ್ಟಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲೂ ಪ್ರತಿಭಟನೆ ನೆಡಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ
ರೈತ ಸಂಘ ಮತ್ತು ದಲಿತ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಪಟ್ಟಣದಲ್ಲಿ ಯಶಸ್ವಿಯಾಗಿ ಪ್ರತಿಭಟನೆ ನೆಡಸಿದರು.

ಭಗಾವನ್ ಚಿತ್ರಮಂದಿರದ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನೆಡಸಿದರು ತದ ನಂತರ ಲಿಂಕ್ ರಸ್ತೆ ಮೂಲಕ ಮೇರವಣಿಗೆ ಹೊರಟು ವಿದ್ಯೋದಯ ಕಾಲೇಜ್ ವೃತ್ತ ತಲುಪಿ ಪ್ರತಿಭಟನೆಯನ್ನು ಅಂತ್ಯ ಗೊಳಿಸಿದರು ಪ್ರತಿಭಟನೆ ಉದ್ದಕ್ಕೊ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು .

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಜನತೆಗೆ ಅಚ್ಛೇ ದಿನಗಳು ಬರುತ್ತವೆ ಎಂದು ಹೇಳಿ ಮಧ್ಯಮ ವರ್ಗದವರಿಗೆ ಅತಿ ಅವಶ್ಯಕವಾದ ವಸ್ತುಗಳಾದ ಗ್ಯಾಸ್, ಪೆಟ್ರೋಲ್ ಡೀಸಲ್, ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆಗಳನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಲೇ ಹೊರಟಿರುವುದು ಅತ್ಯಂತ ಖಂಡನೀಯ ಹಾಗೂ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಹಿತ ಶಕ್ತಿಗೆ ಮರಣ ಶಾಸನ ಬರೆದಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ ಕಬ್ಬಿನ ಎಫ್ ಆರ್ ಪಿ ಬೆಲೆಯನ್ನು ಎರಡು ವರ್ಷಗಳಿಂದ ಏರಿಕೆ ಮಾಡದೆ ಈಗ ಕ್ವಿಂಟಾಲ್ ಕಬ್ಬಿಗೆ ಕೇವಲ 5 ರೂಪಾಯಿ ಏರಿಸಿ ರೈತರಿಗೆ ದ್ರೋಹ ಬಗೆದಿದೆ ಕಳೆದ 10 ತಿಂಗಳಿಂದ ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಒಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರಿನಲ್ಲಿ 10 ತಿಂಗಳಿದ್ದ ನಿರಂತರ ಹೋರಾಟ ಮಾಡಿ 600 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ಬಲಿದಾನ ಗೈದಿದ್ದಾರೆ ಇಷ್ಟಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ದಲಿತ ಸಂಘಷ ಸಮಿತಿಯ ಚಂದ್ರಶೇಖರ್ , ತಾ. ಸಂಚಾಲಕ ಕುಕ್ಕೂರು ರಾಜು ,ಬನ್ನಹಳ್ಳಿ ಸೋಮಣ್ಣ , ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ಒಕ್ಕೂಟದ ಅಧ್ಯಕ್ಷ ಮಣಿಕಂಠರಾಜ್ ಗೌಡ , ಶಿವಪ್ರಸಾರ್ ,ರೈತ ಸಂಘದ ಟೌನ್‌ ಅಧ್ಯಕ್ಷ ಕುರುಬೂರು ಶಾಂತರಾಜು, ನಾಗರೀಕ ವಿಚಾರ ವೇದಿಕೆಯ ಆರೀಪ್, ವಿಮಲ್ ಮತ್ತಿತರರು ಹಾಜರಿದ್ದರು

ಪ್ರತಿಭಟನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನೆಡಯದಂತೆ ಪೋಲಿಸ್ ನಿರೀಕ್ಷಕ ಕೃಷ್ಣಪ್ಪ ನೇತೃತ್ವದಲ್ಲಿ ಸೂಕ್ತ ಬಂದುಬಸ್ತು ಏರ್ಪಡಿಸಲಾಗಿತ್ತು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗದಲ್ಲಿ ರೈತಪರ ಸಂಘಟನೆಗಳಿಂದ ಭಾರತ್ ಬಂದ್

ಕೃಷಿ ಕಾಯ್ದೆ ವಿರುದ್ಧ ರೈತರ ಆಕ್ರೋಶ : ಬಂದ್ ಬಗ್ಗೆ ಸಿಎಂ ಬೊಮ್ಮಾಯಿ ಏನಂದ್ರು ಗೊತ್ತಾ..?