ನವದೆಹಲಿ: ಬೆಂಗಳೂರಿನಿಂದ ಧಾರವಾಡಕ್ಕೆ ವಂದೇ ಭಾರತ್ ಟ್ರೈನ್ ಅನ್ನು ಇಂದಿನಿಂದ ಬಿಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ವಂದೇ ಭಾರತ್ ಟ್ರೈನ್ ಗೆ ಭೋಪಾಲ್ ನ ರಾಣಿ ಕಮಲಪಾಟಿ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಐಷರಾಮಿ ರೈಲು ಬಿಡುಗಡೆ ಮಾಡಿದಂತೆ ಆಗುತ್ತದೆ. ಈಗಾಗಲೇ ಬೆಂಗಳೂರು ಟು ಮೈಸೂರು ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ.
ಇಂದು ಬೆಳಗ್ಗೆ 10.30ಕ್ಕೆ ಟ್ರೈನ್ ಸಂಚಾರಕ್ಕೆ ಚಾಲನೆ ಸಿಗಲಿದೆ. ವಂದೇ ಭಾರತ್ ಟ್ರೈನ್ ಬೆಂಗಳೂರು – ಧಾರವಾಡ, ಗೋವಾ – ಮುಂಬೈ, ಇಂಧೋರ್ – ಭೋಪಾಲ್ ನಡುವೆ ಸಂಚಾರ ನಡೆಸಲಿದೆ. ಪ್ರಧಾನಿ ಮೋದಿ ಅವರು ಇಂದಿನಿಂದ ಚಾಲನೆ ನೀಡಲಿದ್ದಾರೆ.
ಇನ್ನು ಸಾರ್ವಜನಿಕ ಸಂಚಾರಕ್ಕೆ ವಂದೇ ಭಾರತ್ ಬೆಂಗಳೂರು ಟು ಧಾರವಾಡ ನಾಳೆಯಿಂದ ಅವಕಾಶ ಸಿಗಲಿದೆ. ಈ ಟ್ರೈನು ಬೆಂಗಳೂರಿನಿಂದ ಬೆಳಗ್ಗೆ 5.57ಕ್ಕೆ ಹೊರಟೆರೆ ಮಧ್ಯಾಹ್ನ 12.10ಕ್ಕೆ ಧಾರವಾಡಕ್ಕೆ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಮತ್ತೆ ಧಾರವಾಡ ಬಿಡಲಿದೆ. ಸಂಜೆ 7 ಗಂಟೆಗೆಲ್ಲಾ ಬೆಂಗಳೂರಿಗೆ ಬಂದು ತಲುಪಲಿದೆ. ದಿನವಿಡೀ ಸಂಚಾರ ಮಾಡಬೇಕಲ್ಲ ಎಂಬುವವರಿಗೆ ವಂದೇ ಭಾರತ್ ತುಂಬಾ ಅನುಕೂಲಕರವಾಗಲಿದೆ. ಆದರೆ ಟಿಕೆಟ್ ಚಾರ್ಜ್ ಕೇಳಿದ್ರೆ ಶಾಕ್ ಆಗ್ಬೇಕು.
AC ಚೇರ್ಕಾರ್ನಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ 1165 ರೂಪಾಯಿ. ಬೆಂಗಳೂರಿನಿಂದ ಧಾರವಾಡ (ಎಕ್ಸಿಕ್ಯೂಟಿವ್ ಕ್ಲಾಸ್) 2245 ರೂಪಾಯಿ. ಧಾರವಾಡದಿಂದ ಬೆಂಗಳೂರು (AC ಚೇರ್ಕಾರ್) 1130 ರೂಪಾಯಿ.ಧಾರವಾಡದಿಂದ ಬೆಂಗಳೂರು (ಎಕ್ಸಿಕ್ಯೂಟಿವ್ ಕ್ಲಾಸ್) 2240 ರೂಪಾಯಿ ಇರಲಿದೆ.
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…