in

ಬಳ್ಳಾರಿ : ಸೆಪ್ಟೆಂಬರ್ 15 ರಂದು ವಿದ್ಯುತ್ ವ್ಯತ್ಯಯ

suddione whatsapp group join

 

ಬಳ್ಳಾರಿ, (ಸೆ. 14): ನಗರದ ತಾಳೂರು ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಅಡಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯಕೈಗೊಳ್ಳುತ್ತಿರುವುದರಿಂದ ಸೆ.15ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ 11 ಕೆ.ವಿ ಫೀಡರ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ (ವಿ) ಗಾಯತ್ರಿ ದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು: ಎಫ್-6 ಫೀಡರ್: ತಾಳೂರು ರಸ್ತೆ, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್‍ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್.ಪಿ.ವೃತ್ತ, ಶಾಸ್ತ್ರೀ ನಗರ, ಬ್ಯಾಂಕ್ ಕಾಲೋನಿ, ಬಸವನಕುಂಟೆ, ಸಿರುಗುಪ್ಪ ರಸ್ತೆ, ರಾಮನಗರ, ಅವಂಭಾವಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುಂತೆ ಅವರು ಕೋರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಲ್ಲೆ ಮಾಡಿ, ವಿಷ ಕುಡಿಸಿದ್ದಾರೆ : ರಾಜು ತಾಳಿಕೋಟೆ ಮೇಲೆ ಕೇಳಿ ಬಂದ ಆರೋಪ ಸತ್ಯವಾ..?

ಅಕ್ಟೋಬರ್ 2 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ; ಪ್ರತಿ ನಿತ್ಯ ಭಕ್ತರಿಗೆ ಕೋವಿಡ್ ಲಸಿಕೆ