ಬಳ್ಳಾರಿ,ಮಾ.27 : ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ನಿಯಮ 108, 109 ಮತ್ತು 109ಎ ನಿಯಮಗಳಿಗೆ ತಿದ್ದುಪಡಿ ಮಾಡಿ ಆಯಾ ವರ್ಷಕ್ಕೆ ಉಪನೊಂದಣಾಧಿಕಾರಿ, ಉಪನೊಂದಣಿ ಕಚೇರಿ ಇವರ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳು ಪರಿಷ್ಕರಣೆ ಆಗದಿದ್ದಲ್ಲಿ ಕನಿಷ್ಠ ಶೇ.3 ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ ಶೇ.5 ಕ್ಕಿಂತ ಹೆಚ್ಚಿಗೆ ಮೀರದಂತೆ ಆಸ್ತಿ ತೆರಿಗೆಯನ್ನು ವಿಧಿಸಿ ವಸೂಲಿ ಮಾಡಲು ತಿದ್ದುಪಡಿ ಮಾಡಲಾಗಿದೆ.
2025-26ನೇ ಸಾಲಿಗೆ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆ ಪರಿಷ್ಕರಣೆ ಮಾಡಿರುವುದಿಲ್ಲ ಎಂದು ತಿಳಿಸಿರುವ ಪ್ರಯುಕ್ತ 2025 ರ ಏ.01 ರಿಂದ 2026 ರ ಮಾ.31 ರ ವರೆಗೆ 2024-25ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ.3 ರಷ್ಟು ನಿಗದಿಪಡಿಸಿ ಹೆಚ್ಚಿಸಿ, 2025-26ನೇ ಸಾಲಿಗೆ ಆಸ್ತಿ ತೆರಿಗೆಯನ್ನು ನಿಗದಿಪಡಿಸಿಕೊಳ್ಳಲು ಮಹಾಪೌರರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಹಾಜರಿದ್ದು ಸದಸ್ಯರ ಸರ್ವಾನುಮತದಿಂದ ಒಪ್ಪಿ ತೀರ್ಮಾನಿಸಲಾಗಿದೆ.
ಹಾಗಾಗಿ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿ ಬಳ್ಳಾರಿ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆಯುಕ್ತರು ಕೋರಿದ್ದಾರೆ.
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಹೃದಯ ಭಾಗದಲ್ಲಿರುವ ಬಿ.ಡಿ. ರಸ್ತೆಯ ಎಸ್.ಬಿ.ಐ. ಬ್ಯಾಂಕ್ ಸಮೀಪ, ಶಾರ್ಟ್ ಸರ್ಕ್ಯೂಟ್…
ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ…
ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…
ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…
ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…