in

ಕಾಂಗ್ರೆಸ್ ಪಾಲಾಯ್ತು ಬಳ್ಳಾರಿ ಮಹಾನಗರ ಪಾಲಿಕೆ : ಚಿಕ್ಕ ವಯಸ್ಸಿಗೆ ಈಕೆ ಮೇಯರ್ ಆಗಿದ್ದೇಗೆ..?

suddione whatsapp group join

 

 

ಬಳ್ಳಾರಿ: ಇಂದು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. 44 ಮತದಾರರು ತಮ್ಮ ಮತವನ್ನು ಚಲಾಯಿಸಿ, ಕಾಂಗ್ರೆಸ್ ಗೆ ಬಹು ಮತ‌ ನೀಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಅತಿ ಚಿಕ್ಕ ವಯಸ್ಸಿನವರು ಮೇಯರ್ ಸ್ಥಾನ ಅಲಂಕರಿಸಿದ್ದಾರೆ.

23 ವರ್ಷದ ತ್ರಿವೇಣಿ ಸೂರಿ ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಸ್ಥಾನ ಅಲಂಕರಿಸಿದ್ದಾರೆ. ಬಿಜೆಪಿಯಿಂದ ನಾಗರತ್ನ ಸ್ಪರ್ಧೆ ಮಾಡಿದ್ದರು. ತ್ರಿವೇಣಿ ಅವರಿಗೆ 28 ಮತಗಳು ಬಂದ್ರೆ ನಾಗರತ್ನ ಅವರಿಗೆ 16 ಮತಗಳು ಬಂದಿತ್ತು. ಈ ಮೂಲಕ ಬಹುಮತ ಪಡೆದ ತ್ರಿವೇಣಿ ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.

ಈ ಬಗ್ಗೆ ತ್ರಿವೇಣಿ ಮಾತನಾಡಿದ್ದು, ಬಹಳ ಖುಷಿ ಎನಿಸುತ್ತಿದೆ. ಈ ಹಿಂದೆ ನಮ್ಮ ತಾಯಿ ಮೇಯರ್ ಆಗಿದ್ದರು. ಈಗ ನನಗೆ ಆ ಸ್ಥಾನ ಸಿಕ್ಕಿದೆ. ಬಳ್ಳಾರಿ ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ. ಚಿಕ್ಕ ವಯಸ್ಸಿಗೇನೆ ಮೇಯರ್ ಆಗಿರುವುದು ಸಂತಸ ತಂದಿದೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ ವಿಧಾನಸಭಾ ಚುನಾವಣೆ: ಸಹಾಯವಾಣಿ ಕೇಂದ್ರ ಸ್ಥಾಪನೆ

‘ಅಮೃತ ವರ್ಷಿಣಿ’ ಶರತ್ ಬಾಬು ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು..!