ಬಳ್ಳಾರಿ: ಜಿಲ್ಲಾಸ್ಪತ್ರೆಯ ವೈದ್ಯ ಡಾ.ಸುನೀಲ್ ಕಿಡ್ನ್ಯಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ. ಜನವರಿ 25 ರಂದು ವಾಕಿಂಗ್ ಮಾಡುವಾಗ ವೈದ್ಯ ಸುನೀಲ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಈ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಕಾಂಗ್ರೆಸ್ ಮುಖಂಡನನ್ನ ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ರನ್ನ ಬಂಧಿಸಿದ್ದಾರೆ.
ಡಾ. ಸುನೀಲ್ ಅವರನ್ನ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು. ಇದರ ತನಿಖೆಯನ್ನು ಶುರು ಮಾಡಿದ ಪೊಲೀಸರಿಗೆ ಅಪಹರಣದ ಹಿಂದಿನ ಕಿಂಗ್ ಪಿನ್ ವಿಜಯ್ ಕುಮಾರ್ ಎಂಬುದು ತಿಳಿದು ಬಂದಿದೆ. ಹೀಗಾಗಿ ಆತನನ್ನು ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಿದ್ದಾರೆ. ಹಣದ ಆಸೆಗೆ ಈ ಕೃತ್ಯ ಮಾಡಲಾಗಿದೆ ಎನ್ನಲಾಗಿದೆ. ಒಟ್ಟು ಏಳು ಆರೋಪಿಗಳನ್ನ ಬಂಧಿಸಲಾಗಿದೆ. ಬಳಿಕ ಎ1 ಆರೋಪಿ ವಿಜಯ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಕಿಡ್ನ್ಯಾಪ್ ಮಾಡಿದ 4 ದಿನಗಳ ಬಳಿಕ ಪೊಲೀಸರ ಕೈಗೆ ವಿಜಯ್ ಕುಮಾರ್ ತಗಲಾಕಿಕೊಂಡಿದ್ದಾರೆ. ಸದ್ಯ ಪೊಲೀಸರು ಅರೆಸ್ಟ್ ಮಾಡಿ, ಜೈಲಿಗೆ ಹಾಕಿದ್ದಾರೆ.
ವಿಜಯ್ ಕುಮಾರ್ ಬಳ್ಳಾರಿ ನಗರಸಭೆಯ ಮಾಜಿ ಉಪಾಧ್ಯಕ್ಷರ ಮಗ ಆಗಿದ್ದಾರೆ. ಅಷ್ಟೇ ಅಲ್ಲ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಅತ್ಯಾಪ್ತರು ಆಗಿದ್ದರು. ಹೀಗಾಗಿ ಕಾಂಗ್ರೆಸ್ ಪ್ರಭಾವಿ ನಾಯಕರ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂಬ ಆರೋಪವಿದೆ. ಪಕ್ಷದ ಮುಖಂಡ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಆರೋಪಿ ರಕ್ಷಣೆಗೆ ನಿಂತಿದ್ದರು ಎನ್ನಲಾಗುತ್ತಿದೆ. ಹೀಗಾಗಿಯೇ ಪೊಲೀಸರ ಕೈಗೆ ವಿಜಯ್ ಕುಮಾರ್ ಸುಲಭಕ್ಕೆ ಸಿಕ್ಕಿರಲಿಲ್ಲ. ಹಣದ ಆಸೆಗೆ ಬಿದ್ದು ಸಂಚು ರೂಪಿಸಿ, ಕಿಡ್ನ್ಯಾಪ್ ಮಾಡಲಾಗಿತ್ತು.
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ…
ಪ್ರಯಾಗ್ ರಾಜ್ : ಈಗಾಗಲೇ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಇದೀಗ…
ಬೆಂಗಳೂರು: ಬಿಜೆಪಿಯಲ್ಲಿ ಮೊದಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯುದ್ಧ ಶುರುವಾಗಿದೆ. ಯತ್ನಾಳ್ ಬಣ ಪಣತೊಟ್ಟು ನಿಂತಿದ್ದು, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನ…
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ಹೀಗಾಗಿ ಚಳಿಗಾಲವೂ ಜಾಸ್ತಿ ಎಂದೇ ನಂಬಲಾಗಿತ್ತು. ಕೆರೆ ಕಟ್ಟೆಗಳೆಲ್ಲ ತುಂಬಿ ತುಳುಕುತ್ತಿದ್ದ ಕಾರಣಕ್ಕೆ…
ಸುದ್ದಿಒನ್ : ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಹಾಲಿನ ಉತ್ಪನ್ನಗಳು ಟೈಪ್ 2 ಮಧುಮೇಹಕ್ಕೆ ತಡೆಗಟ್ಟುವ ಕ್ರಮವಾಗಿ ಕಾರ್ಯನಿರ್ವಹಿಸುತ್ತವೆ. ಹಾಲಿನ ಉತ್ಪನ್ನಗಳಲ್ಲಿನ…
ಈ ರಾಶಿಯವರ ಅದೃಷ್ಟ ಕೈಹಿಡಿಯಲಿದೆ, ಭೂಮಿ ಮನೆ ಅಂಗಡಿ ವಾಹನ ಖರೀದಿಸಲು ಯೋಚಿಸುತ್ತಿದ್ದೀರಿ, ಬುಧವಾರದ ರಾಶಿ ಭವಿಷ್ಯ 05 ಫೆಬ್ರವರಿ…