ಸೂರಿಗಾಗಿ ಸಮರ : ಕಮ್ಯುನಿಸ್ಟ್ ಪಕ್ಷದಿಂದ ಪಿಡಿಒಗಳಿಗೆ ಮನವಿ

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 05 : ನಿವೇಶನ ಮತ್ತು ವಸತಿರಹಿತರಿಗೆ ಸೂರಿಗಾಗಿ ಸಮರ ಹೋರಾಟವನ್ನು ಹಮ್ಮಿಕೊಂಡಿದ್ದ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಶನಿವಾರ ಗುಡ್ಡದ ರಂಗವ್ವನಹಳ್ಳಿ ಹಾಗೂ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಠದ ಕುರುಬರಹಟ್ಟಿ ಹಾಗೂ ಗುಡ್ಡದರಂಗವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಬರುವ ಹಳ್ಳಿಗಳಲ್ಲಿ ಸ್ವಂತ ನಿವೇಶನ ಮತ್ತು ಮನೆಗಳಿಲ್ಲದವರನ್ನು ಗುರುತಿಸಿ ವಸತಿ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ತಾಲ್ಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ಈ.ಸತ್ಯಕೀರ್ತಿ, ಜಿಲ್ಲಾ ಸಹ ಕಾರ್ಯದರ್ಶಿ ಬಿ.ಹೆಚ್.ಹನುಮಂತಪ್ಪ, ಕಟ್ಟಡ ಕಾರ್ಮಿಕರ ಸಂಘದ ಬಾಬು, ರಫಿ, ಶಿವು, ಬಿಸಿಯೂಟದ ಫರ್ವಿನ್‍ತಾಜ್, ಸುವರ್ಣಮ್ಮ, ನಿವೇಶನ ವಸತಿ ರಹಿತರ ಹೋರಾಟ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

Recent Posts

ಚಿತ್ರದುರ್ಗ : ರಾಜಬೀದಿಗಳಲ್ಲಿ ಅದ್ದೂರಿಯಾಗಿ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…

7 minutes ago

ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯಿಂದ ಡಾ.ಕೋಮಲ ವಿ.ಮರೆಗುದ್ದಿಗೆ ಸನ್ಮಾನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…

51 minutes ago

ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಬೇಕು : ಯೋಗೀಶ್ ಸಹ್ಯಾದ್ರಿ

ಚಿತ್ರದುರ್ಗ : ವಿದ್ಯಾರ್ಥಿಗಳು ಓದಿನ ಸಮಯದಲ್ಲೇ ಆರ್ಥಿಕವಾಗಿ ಸಬಲೀಕರಣವಾಗಬೇಕು, ಆ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಮಾರ್ಪಾಡು ಆದರೆ ಮಾತ್ರ ವಿದ್ಯಾರ್ಥಿಗಳು ಮುಂದಿನ…

1 hour ago

ಒಳಮೀಸಲು ಶೀಘ್ರ ಜಾರಿ ಮಾಡಿ, ಉದ್ಯೋಗ ನೇಮಕಾತಿ ಕೈಬಿಡಿ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ಏ.11 ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಬಹಳಷ್ಟು ವಿಳಂಬ ನೀತಿ ಮಾಡಿದೆ ಎಂಬ ಆತಂಕವಿದ್ದು, ಅದನ್ನು…

1 hour ago

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ; ಹೇಳಿದ್ದೇನು ಡಿಕೆ ಶಿವಕುಮಾರ್..?

  ಬೆಂಗಳೂರು; ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆಯ ಚರ್ಚೆ ನಡೆಯುತ್ತಲೆ ಇದೆ. ಸಿಎಂ…

2 hours ago

ಜಾತಿ ಗಣತಿ ವರದಿ ವಿಚಾರ ; ಇಂದಿನ ಸಂಪುಟದಲ್ಲಿ ಏನಾಯ್ತು..?

  ಬೆಂಗಳೂರು; ಇಂದು ಬೆಳಗ್ಗೆಯಿಂದಾನೇ ಎಲ್ಲರ ಚಿತ್ತ ಸಚಿವ ಸಂಪುಟದತ್ತ ನೆಟ್ಟಿತ್ತು. ಯಾಕಂದ್ರೆ ಜಾತಿ ಗಣತಿ ವರದಿ ಜಾರಿಯಾಗುತ್ತದೆ ಎಂಬ…

2 hours ago