in ,

ಬಸವಣ್ಣ ಕಂಡ ಸಮಸಮಾಜದ ಕನಸು ನನಸಾಗಬೇಕು : ಕೆಪಿಎಂ.ಗಣೇಶಯ್ಯ

suddione whatsapp group join

 

ಚಿತ್ರದುರ್ಗ : ವಿಶ್ವಗುರು ಬಸವಣ್ಣ ಅನುಭವ ಮಂಟಪದಿಂದ ವರ್ಗರಹಿತ, ಜಾತಿರಹಿತ ಸಮಾಜವನ್ನು ನಿರ್ಮಿಸಿದರು. ಕಾಯಕ ಮತ್ತು ದಾಸೋಹದ ಪರಿಕಲ್ಪನೆಯಲ್ಲಿ ಸಂಘಟಿಸಿದರು. ಆದರೆ ಇಂದು ಜಾತಿಜಾತಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಆಜಾತಿ ಈಜಾತಿ, ತಾನು ಮೇಲು ತಾನು ಕೀಳು, ಅವನು ಶ್ರೀಮಂತ ಇವನು ಬಡವ ಎಂಬ ತಾರತಮ್ಯ ಮುಗಿಲುಮುಟ್ಟಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆಪಿಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.

ನಗರದ ಬಸವಮಂಟಪದಲ್ಲಿ ಭಾನುವಾರ ಏರ್ಪಡಿಸಿದ 890ನೇ ಬಸವ ಜಯಂತಿ ಅಂಗವಾಗಿ ಇಷ್ಟಲಿಂಗಪೂಜಾ, ದೀಕ್ಷೆ, ಧ್ವಜಾರೋಹಣ, ಬಸವತೊಟ್ಟಿಲು, ವಚನ ಚಿಂತನೆ ಹಾಗೂ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವಾದಿ ಶಿವಶರಣರ ವಚನಗಳು ಪ್ರತಿಯೊಬ್ಬರ ಬದುಕಿಗೆ ಮೌಲ್ಯಾಧಾರಿತವಾಗಿವೆ. ಸರಳ ರೂಪದಲ್ಲಿರುವ ವಚನಗಳು ಭವಿಷ್ಯದ ಕುಡಿಗಳಿಗೆ ಬಿತ್ತುವುದರಿಂದ ಭಾವೈಕ್ಯತೆ, ಸಹಬಾಳ್ವೆ, ವಿಧೇಯತೆ, ಕಾಯಕನಿಷ್ಠೆ ಬೆಳೆಸಬಹುದು. ಬಸವಣ್ಣ ಕಂಡ ಸಮಸಮಾಜದ ಕನಸು ನನಸಾಗಬೇಕು. ಜಾತಿ, ಮತಪಂಥ ಬೇಧಗಳನ್ನು ತೊರೆದು ಒಟ್ಟಾದಲ್ಲಿ ಜೀವನದಲ್ಲಿ ಸಂತೋಷ ನೆಮ್ಮದಿ ಕಾಣಬಹುದು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆಂಚವೀರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಲು ನಾವೆಲ್ಲಾ ಒಟ್ಟಾಗಿ ಶ್ರಮಿಸಬೇಕು ಎಂದರು. ಉಳವಿ ಅಕ್ಕ ನಾಗಲಾಂಬಿಕ ಯೋಗಪೀಠದ ಪೀಠಾಧ್ಯಕ್ಷೆ ಮಾತೆ ದಾನೇಶ್ವರಿ ತಾಯಿ, ಬಸವಮಂಟಪದ ಬಸವಮಣಿ ಮಾತಾಜಿ, ಸಾಸಲಹಟ್ಟಿ ಅಕ್ಕಮಹಾದೇವಿ ಪೀಠದ ಬಸಮ್ಮ ಮಾತಾಜಿ ದಿವ್ಯಸಾನಿಧ್ಯ ವಹಿಸಿದ್ದರು. ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಜೆಸಿ.ಮನೋಹರ ಧ್ವಜಾರೋಹಣ ನೆರವೇರಿಸಿದರು.

ರಾ.ಬ.ದಳದ ಡಾ.ಇಂಧುದರ ಲಲಿತಮ್ಮ, ನಿವೃತ್ತ ಇಂಜಿನೀಯರ್ ಚಂದ್ರಶೇಖರ್, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಸುಶೀಲಮ್ಮ ಸಾಂಬಶಿವಯ್ಯ, ಎಪಿಎಂಸಿ ಮಾರುಕಟ್ಟೆ ಮೇಲ್ವಿಚಾರಕ ಎಜಿ ಸುರೇಂದ್ರಬಾಬು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಈ.ಅರುಣ್‍ಕುಮಾರ್, ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಈ. ಅಶೋಕ್‍ಕುಮಾರ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಆರ್.ಶ್ರೀನಿವಾಸ್, ನಿವೃತ್ತ ಸೈನಿಕ ಟಿ.ಸತ್ಯನಾರಾಯಣ ಹಾಗೂ ಆರೋಗ್ಯವೇ ಭಾಗ್ಯ ಯುವಕರ ಸಂಘದ ಎಸ್‍ಎನ್. ಅಖಿಲದೇವಿ ಇವರಿಗೆ ರಾಷ್ಟ್ರೀಯ ಬಸವದಳದಿಂದ ಬಸವಾತ್ಮಜೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಕ್ಕಮಹಾದೇವಿ, ಈರಮ್ಮ, ವನಜಾ ಪ್ರಾರ್ಥಿಸಿದರು. ಬಸವಜ್ಯೋತಿ ಸ್ವಾಗತಿಸಿದರು, ಕುಮಾರಿ ತರಂಗಿಣಿ ವಚನನೃತ್ಯ ಪ್ರದರ್ಶನ ನೀಡಿದರು. ವಚನಸುಧಾ ಶಿವಾನಂದ್ ನಿರೂಪಿಸಿದರು.

ಕಲ್ಮೇಶ್ ಲಿಂಗಾಯತ್ ವಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಬಸವಣ್ಣನವರ ಪ್ರತಿಮೆ ಹಾಗೂ ಭಾವಚಿತ್ರವನ್ನು ಭಾಜಾಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಲಾಯಿತು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ : ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ವಾಗ್ದಾಳಿ

ನನ್ನನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ : ಕೆ.ಸಿ.ವೀರೇಂದ್ರಪಪ್ಪಿ