ಸುದ್ದಿಒನ್, ಬೆಂಗಳೂರು, ಮಾರ್ಚ್. 26 : ಬಿಜೆಪಿಯ ಶಿಸ್ತು ಸಮಿತಿ ಸಾಕಷ್ಟು ಬಾರೀ ಎಚ್ಚರಿಕೆಯನ್ನು ನೀಡಿದರು ಸಹ ಎಚ್ಚೆತ್ತುಕೊಳ್ಳದೆ ಮತ್ತೆ ಅದೇ ರೀತಿಯ ಮಾತುಗಳನ್ನ ಆಡುತ್ತಿದ್ದರು. ಇದೀಗ ಯತ್ನಾಳ್ ಅವರನ್ನು ಬಿಜೆಪಿಯ ಪ್ರಾಥಮಿಕ ಸ್ಥಾನದಿಂದ ಉಚ್ಚಾಟನೆ ಮಾಡಿದ್ದಾರೆ. ಸುಮಾರು ಆರು ವರ್ಷಗಳ ಕಾಲ ಬಿಜೆಪಿ ಸದಸ್ಯತ್ವ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ.
ಶಾಸಕ ಯತ್ನಾಳ್ ಸದಾ ಕಾಲ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನಾಲಿಗೆ ಹರಿಬಿಟ್ಟು ಮಾತನಾಡುತ್ತಿದ್ದರು. ಪಕ್ಷದ ಶಿಸ್ತು ಉಲ್ಲಂಘಟನೆ ಮಾಡಿದ ಹಿನ್ನೆಲೆ ಉಚ್ಛಾಟನೆ ಮಾಡಲಾಗಿದೆ. ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಯಾವಾಗಲೂ ಆಕ್ರೋಶ ಹೊರ ಹಾಕುತ್ತಿದ್ದರು. ಇತ್ತೀಚೆಗಷ್ಟೇ ಬಿಜೆಪಿ ಹೈಕಮಾಂಡ್ ನೋಟೀಸ್ ಜಾರಿ ಮಾಡಿತ್ತು. ಅದಕ್ಕೆ ಯತ್ನಾಳ್ ಉತ್ತರವನ್ನು ನೀಡಿದ್ದರು. ಆದರೆ ಸರಿಯಾದ ಉತ್ತರ ನೀಡದೆ ಇದ್ದ ಕಾರಣ ಇದೀಗ ಉಚ್ಛಾಟನೆ ಮಾಡಲಾಗಿದೆ.
ಪಕ್ಷದಿಂದ ಉಚ್ಛಾಟನೆಯಾದ ಕಾರಣ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಚರ್ಚೆಯೂ ನಡೆಯುತ್ತಿದೆ. ಅಥವಾ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಯತ್ನಾಳ್ ಅವರೇ ಬಿಜೆಪಿ ಪಕ್ಷದಿಂದ ಸಿಕ್ಕಿರುವ ಶಾಸಕ ಸ್ಥಾನ ಬೇಡ ಎಂದು ರಾಜೀನಾಮೆ ನೀಡಬಹುದು. ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ…
ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…
ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…
ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…
ಬೆಂಗಳೂರು; ಒಂದನೇ ತರಗತಿಗೆ ಸೇರಿಸ ಬಯಸುವ ಮಕ್ಕಳನ್ನು ಶಾಲೆಗೆ ಸೇರಿಸುವ ಗೊಂದಲ ಸಾಕಷ್ಟು ಇದೆ. ಆರು ವರ್ಷ ಆಗಿರಲೇಬೇಕು ಎಂಬ…