ಬೆಂಗಳೂರು; ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಅನ್ನ ಮಂಡನೆ ಮಾಡಿದ್ದಾರೆ. ಅದರಲ್ಲಿ ಬೆಂಗಳೂರು ವಿವಿ ಹೆಸರು ಬದಲಾವಣೆಯ ವಿಚಾರವೂ ಸೇರಿಕೊಂಡಿದೆ. ಡಾ.ಮನಮೋಹನ್ ಸಿಂಗ್ ಹೆಸರನ್ನಿಡಲು ನಿರ್ಧಾರ ಮಾಡಲಾಗಿದೆ. ಇದಕ್ಕೆ ಪರ ವಿರೋಧ ಚರ್ಚೆ ಎದ್ದಿದೆ. ಅದರಲ್ಲೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ವಿರೋಧ ವ್ಯಕ್ಯವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ದೇಶಕ್ಕೆ ಮನಮೋಹನ್ ಸಿಂಗ್ ಕೊಡುಗೆ ಇಲ್ವಾ..? ಮೊದಲು ಅದು ಸೆಂಟ್ರಲ್ ಯೂನಿವರ್ಸಿಟಿ ಆಗಿತ್ತು. ಬಿಜೆಪಿಯವರು ಬೌರಿಂಗ್ ಗೆ ವಾಜಪೇಯಿ ಹೆಸರಿಟ್ಟಿರಲಿಲ್ವಾ ಎಂದು ಕಿಡಿಕಾರಿದರೆ, ಡಿಕೆ ಶಿವಕುಮಾರ್, ಅವರು ದೀನ್ ದಯಾಳ್ ಹೆಸರು ಇಟ್ಟಿದ್ದಾರೆ. ನಾವೂ ಮನಮೋಹನ್ ಸಿಂಗ್ ಹೆಸರಿಡಬಾರದಾ..? ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ಲೈ ಓವರ್, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್, ನೆಲಮಂಗಲ ಫ್ಲೈ ಓವರ್, ನರೇಗಾ ಯೋಜನೆ, ರೈಟ್ ಟು ಎಜುಕೇಷನ್, ಫುಡ್ ಸೆಕ್ಯೂರಿಟಿ, ಅಶಾ ಕಾರ್ಯಕರ್ತೆ ಮಾಡಿದ್ದು ಯಾರು..? ಇಷ್ಟೆಲ್ಲಾ ಕೊಡುಗೆ ನೀಡಿದ್ರು ಅವರ ಹೆಸರಿಡಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಮನಮೋಹನ್ ಸಿಂಗ್ ಬಗ್ಗೆ ತಿಳಿದ ಹಲವರು ಮನಮೋಹನ್ ಸಿಂಗ್ ವಿವಿ ಎಂದು ಹೆಸರಿಟ್ಟರೆ ತಪ್ಪೇನು ಇಲ್ವಲ್ಲಾ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಇದೇ ಸೋಷಿಯಲ್‌ಮೀಡಿಯಾದಲ್ಲಿ ಸಾಮಾನ್ಯ ಜನರು ಹಲವರು ವಿರೋಧಿಸಿದ್ದು, ಕರ್ನಾಟಕದಲ್ಲಿ ಸಾಕಷ್ಟು ಸಾಧನೆ ಮಾಡಿರುವವರು ಇದ್ದಾರೆ. ಆದರೆ ಅವರನ್ನು ಬಿಟ್ಟು ಮನಮೋಹನ್ ಸಿಂಗ್ ಹೆಸರಿಡೋದು ಅವಮಾನ ಎಂದಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನಿ ಸೈನಿಕರ ಬೆಂಗಾವಲು ಪಡೆಯ ಮೇಲೆ…
ಸುದ್ದಿಒನ್ : ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ವೇದಿಕೆ ಸಜ್ಜಾಗಿದೆ. ಇಡೀ ವಿಶ್ವವೇ ಕಾಯುತ್ತಿದ್ದ ಸಮಯ ಕೊನೆಗೂ ಬಂದಿದೆ. ಸುನೀತಾ…
ಬೆಂಗಳೂರು, ಮಾರ್ಚ್. 16 : ಕರ್ನಾಟಕ ವಕ್ಫ್ ಬೋರ್ಡ್ ಗೆ ನೂತನವಾಗಿ ಅಧ್ಯಕ್ಷರ ನೇಮಕವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರ…
ಬೆಂಗಳೂರು; ಚಿನ್ನದ ಸ್ಮಗ್ಲಿಂಗ್ ವಿಚಾರದಲ್ಲಿ ಈಗ ಸಾಕಿದ ಮಗಳಿಂದಾನೇ ತಂದೆಗೂ ಸಂಕಟ ಎದುರಾಗಿದೆ. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಡಿಜಿಪಿ ರಾಮಚಂದ್ರ…
ಸುದ್ದಿಒನ್, ಹೊಸದುರ್ಗ, ಮಾರ್ಚ್. 16 : ತಾಲ್ಲೂಕಿನ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳರು ಕೊನೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ.…
ಸುದ್ದಿಒನ್ : ಬಹಳಷ್ಟು ಜನರು ತುಪ್ಪವನ್ನು ಚಪಾತಿ ಮತ್ತು ಬೇಳೆ ಸಾರಿನೊಂದಿಗೆ ಬೆರೆಸಿಕೊಂಡು ತಿನ್ನುತ್ತಾರೆ. ಇದು ಭಕ್ಷ್ಯಗಳ ಪೌಷ್ಟಿಕಾಂಶದ ಮೌಲ್ಯವನ್ನು…