Connect with us

Hi, what are you looking for?

ಪ್ರಮುಖ ಸುದ್ದಿ

ಹೀಗೆ ಬಾಳೆ ಬೆಳೆಯಿರಿ… ಅಧಿಕ ಲಾಭ ಪಡೆಯಿರಿ….ಬಾಳೆ ಬೆಳೆಯ ಬೇಸಾಯ ಕ್ರಮ ಹೇಗೆ ಗೊತ್ತಾ…?

ಭಾರತದ ಕೃಷಿ ವ್ಯವಸಾಯದೊಂದಿಗೆ ಸಾವಿರಾರು ವರ್ಷಗಳಿಂದಲೂ ಬಾಳೆ ಬೆಸೆದುಕೊಂಡಿದೆ. ರಾಜ್ಯದಲ್ಲಿ ತೋಟದ ಬೆಳೆಗಳ ಕ್ಷೇತ್ರ ಹೆಚ್ಚುತ್ತಿದ್ದು, ಅದರಲ್ಲಿ ಬಾಳೆಯಂಥ ಅಲ್ಪಾವಧಿ ವಾಣಿಜ್ಯ ಬೆಳೆಗಳು ಎಲ್ಲೇಡೆ ಕಾಣುತ್ತಿವೆ. ರಸಗೊಬ್ಬರಗಳಿಗೆ ಉತ್ತಮವಾಗಿ ಸ್ಪ೦ದಿಸಿ ಬಂಪರ್ ಇಳುವರಿ ಕೊಡಬಲ್ಲತಳಿಗಳು ರೈತರ ಮನಗೆಲ್ಲುತ್ತಿವೆ. ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ ಬಾಳೆ.ಇಸ್ಟೆಲ್ಲಾ ಬೆಳೆಯಿದ್ದರೂ ನಮ್ಮ ಗ್ರಾಹಕರಿಗೆ ಸ್ಥಳೀಯ ಉತ್ಪಾದನೆ ಸಾಕಾಗದೇ ಸುತ್ತಾಣ ಎಲ್ಲ ರಾಜ್ಯಗಳಿಂದ ಬಾಳೆಹಣ್ಣು ಆಮದಾಗುತ್ತಿದೆ. ಹಣ್ಣುಗಳ ಪಟ್ಟಿಯಲ್ಲಿ ಮಾವಿನ ನಂತರದ ಸ್ಥಾನ ಈ ಬಾಳೆಯದು. ತಾಜಾ ಹಣ್ಣು, ಚಿಪ್ಸು,ಒಣಹಣ್ಣು, ತರಕಾರಿ ಹೀಗೆ ವಿವಿಧ ರೂಪಗಳಲ್ಲಿ ನಮ್ಮ ಆಹಾರದ ಪಟ್ಟಿಯಲ್ಲೂ ಬಾಳೆಗೆ ಅಗ್ರಸ್ಥಾನ. ಇನ್ನು ಗ್ರಾಮೀಣ ಬದುಕಿನಲ್ಲಿ ಕೃಷಿ ಉದೇಶಕ್ಕೆ ಬಾಳೆ ನಾರು, ಊಟಕ್ಕೆ ಬಾಳೆ ಎಲೆ, ಹೈನು ರಾಸುಗಳಿಗೆ ಹಸಿಮೇವಾಗಿಕೂಡ ಈ ಬಾಳೆಗೆ ಪ್ರಾಮುಖ್ಯತೆ ಇದೆ. ಅಡಿಕೆಯ ಚಿಕ್ಕ ಸಸಿಗಳಿಗೆ ನೆರಳು ನೀಡಲು ಬಾಳೆ ಬೆಳೆಸಲಾಗುತ್ತದೆ. ಈ ಸಸ್ಯದ ಉಗಮ ಸ್ಥಾನ ದಕ್ಷಿಣ ಪೂರ್ವ ಏಷ್ಯಾ ಪ್ರದೇಶ. ಹಾಗಾಗಿ ನಮ್ಮ ನಾಗರೀಕತೆಯ ಆರಂಭದ ಕಾಲದಿಂದಲೂ ಈ ಬಾಳೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ ಎನ್ನಬಹುದು. ಹಾಗಿದ್ರೆ ಬಾಳೆ ಬೆಳವಣಿಗೆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಗಿಡಗಳ ಆಯ್ಕೆ
1 ಕತ್ತಿಕಂದು: ಇದು ಅಗಲ, ಗಟ್ಟಿಯಾದ ಬುಡ ಹೊಂದಿದ್ದು ತುದಿಯ ಕಡೆ ಚಿಕ್ಕದಾಗುತ್ತಾ ಹೋಗಿ ತುದಿಯಲ್ಲಿ ಕತ್ತಿ ಆಕಾರದ ಒಂದೆರಡು ಎಲೆಗಳನ್ನು ಹೊಂದಿ ಶಂಖಾಕೃತಿಯನ್ನು ಹೋಲುತ್ತದೆ. ಇದು ಕನಿಷ್ಠ ಎಂದರೂ 1.5 ಕೆ.ಜಿ. ತೂಕವಿರಬೇಕು.
2 ನೀರು ಕಂದು: ಇದು ಸಣ್ಣದಾದ ಬುಡ ಹೊಂದಿದ್ದು ಗಟ್ಟಿ ಇರುವುದಿಲ್ಲ. ಇದರ ಎಲೆಗಳು ಅಗಲವಾಗಿರುತ್ತವೆ. ಇವುಗಳು ನಾಟಿಗೆ ಸೂಕ್ತವಲ್ಲ.

ನಾಟಿ ಪದ್ಧತಿ
ಕತ್ತಿ ಕಂದುಗಳನ್ನು ಹರಿತವಾದ ಸಲಾಕೆ ಅಥವಾ ಗುದ್ದಲಿ ಯನ್ನು ಉಪಯೋಗಿಸಿ ತಾಯಿ ಮರಕ್ಕೆ ಅಪಾಯವಾಗದಂತೆ ಬೇರ್ಪಡಿಸಬೇಕು. ಮರಿ ಕಂದುಗಳನ್ನು ತೆಗೆದು ಅಗೆದ ಗುಂಡಿಯನ್ನು ಮುಚ್ಚಿ ಗಿಡಕ್ಕೆ ನೀರು ಹಾಕಬೇಕು. ಇದರಿಂದ ತಾಯಿ ಮರ ಬಾಗುವುದನ್ನು ತಡೆಯುತ್ತದೆ. 20 ಸೆಂ.ಮೀ. ಅನಂತರದ ತುದಿಭಾಗವನ್ನು ಕತ್ತರಿಸಿ ಕಂದುಗಳನ್ನು ಶೇ. 2ರ ಬ್ಯಾವಿಸ್ಟಿನ್ ದ್ರಾವಣದಲ್ಲಿ 20 ನಿಮಿಷ ಕಾಲ ನೆನೆಸಿ ಅನಂತರ ಸೆಗಣಿ ಅಥವಾ ಮಣ್ಣಿನ ರಾಡಿಯಲ್ಲಿ ಮತ್ತೂಮ್ಮೆ ನೆನೆಸಿ ನೆರಳಿನಲ್ಲಿ ಒಣಗಿಸಿ ಪ್ರತಿ ಗುಣಿಗೆ ನಾಟಿಗೆ ಮುನ್ನ 10 ಗ್ರಾಂ ಫ್ಲೋರೇಟ್ ಹರಳು ಹಾಕಿ ನಾಟಿ ಮಾಡಬೇಕು.

ಅಂತರ 2 2 ಮೀ. ಗಿಡಗಳ ಸಂಖ್ಯೆ 2,500 ಪ್ರತಿ ಹೆಕ್ಟೇರ್ಗೆ. ಪಚ್ಚ ಬಾಳೆ ತಳಿಗಳಿಗೆ: 18 18 ಮೀ., 3,000 ಪ್ರತಿ ಹೆಕ್ಟೇರ್ಗೆ. 2. ಜೋಡಿ ಸಾಲು ಪದ್ಧತಿ: 12 12 ಮೀ. ಎರಡು ಜೋಡಿ ಸಾಲಿನ ನಡುವೆ 2 ಮೀ. ಮತ್ತು ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ 12 ಮೀ., 5,200 ಪ್ರತಿ ಹೆಕ್ಟೇರ್ಗೆ.

45 ಘನ ಸೆಂ.ಮೀ. ಗುಂಡಿಗೆ 3 ಕೆ.ಜಿ. ಕೊಟ್ಟಿಗೆ ಗೊಬ್ಬರ, 100 ಗ್ರಾಂ ಬೇವಿನ ಹಿಂಡಿ, 20 ಗ್ರಾಂ ಫ್ಲೋರೇಟ್ ಹರಳು ಪುಡಿ ಮಾಡಿ ಬೆರೆಸಿ ನಾಟಿ ಮಾಡಬೇಕು. ಬಾಳೆ ಗಿಡದ ಬೆಳವಣಿಗೆ ಮತ್ತು ಇಳುವರಿ ಹೆಚ್ಚಿಸಲು ಸೂಕ್ತ ಪೋಷಕಾಂಶ ಮಿಶ್ರಣ “ಬಾಳೆ ಸ್ಪೆಶಲ್’ ನ್ನು ಸಿಂಪಡಿಸಿ ಮಾಡುವುದರಿಂದ ಹೆಚ್ಚಿನ ಗುಣಮಟ್ಟದ ಫಸಲು, ಅಧಿಕ ಇಳುವರಿ ಪಡೆಯಲು ಸಾಧ್ಯ.
ಉತ್ತಮ ಗುಣಮಟ್ಟದ ಆಕರ್ಷಕ ಹಣ್ಣಿನ ಗಾತ್ರ ಹೆಚ್ಚಿಸಲು ಬಾಳೆಯ ಮಿಡಿ ಕಟ್ಟಿದ ಅನಂತರ ಹೂ ಮೊಗ್ಗನ್ನು ಕಡಿದು ಹಾಕಿ ಅದರ ದೇಟಿನ ತುದಿಯಿಂದ ಪೋಷಕಾಂಶ ಒದಗಿಸಬೇಕು. ಬಾಳೆಗೊನೆ ಬಿಟ್ಟ ಅನಂತರ ಎಲ್ಲ ಕಾಯಿಗಳನ್ನು ಕಟ್ಟಿ 8ರಿಂದ 10 ಹೂ ಪಕಳೆಗಳು ಉದುರಿದ ಅನಂತರ ಸುಮಾರು 6 ಇಂಚು ಉದ್ದದ ದಿಂಡನ್ನು ಹೂಮೊಗ್ಗಿನ ಮೇಲ್ಭಾಗದಲ್ಲಿ ಸಣ್ಣದಾಗಿ ಹರಿತವಾದ ಚಾಕುವಿನಿಂದ ಕತ್ತರಿಸಬೇಕು. ಅನಂತರ ಪ್ಲಾಸ್ಟಿಕ್ ಚೀಲದಲ್ಲಿ ಸೆಗಣಿಯನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ರಾಸಾಯನಿಕ ಪೋಷಕಾಂಶ ಕರಗಿಸಿ ದಿಂಡಿನ ತುದಿಯನ್ನು ಮಿಶ್ರಣದಲ್ಲಿ ಮುಳುಗಿಸಿ ಗಟ್ಟಿಯಾದ ದಾರದಿಂದ ಕಟ್ಟಬೇಕು.

ರೋಬಸ್ಟಾ ಜಾತಿಯ ಬಾಳೆಗೆ ಅರ್ಧ ಕಿ.ಗ್ರಾಂ ತಾಜಾ ಹಸುವಿನ ಸೆಗಣಿಯನ್ನು 7.5 ಕಿ.ಗ್ರಾಂ. ಯೂರಿಯಾ, 7.5 ಗ್ರಾಂ ಪೊಟ್ಯಾಶ್ನ್ನು ಸುಮಾರು 100 ಮಿ.ಲೀ. ನೀರು ಸೇರಿಸಿ ಚೆನ್ನಾಗಿ ಕದಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಟ್ಟಬೇಕು. ಏಲಕ್ಕಿ ಬಾಳೆಯಲ್ಲಿ ಪ್ರತಿ ಗೊನೆಗೆ ತಲಾ 10 ಗ್ರಾಂ ಯೂರಿಯಾ, 10 ಗ್ರಾಂ ಪೊಟ್ಯಾಶ್ ಉಪಯೋಗಿಸಬೇಕು.

ಅನುಸರಿಸಬೇಕಾದ ಪ್ರಮುಖ ಚಟುವಟಿಕೆಗಳು
1 ಕಂದುಗಳನ್ನು ನಿಯಂತ್ರಿಸುವುದು: ನಾಟಿಯಾದ 3-4 ತಿಂಗಳ ಅನಂತರ ಮರಿಕಂದು ಬೆಳೆಯಲು ಆರಂಭವಾಗುತ್ತದೆ. ಇವುಗಳನ್ನು ಕಾಲ ಕಾಲಕ್ಕೆ ಗೊನೆ ಬರುವವರೆಗೂ ತೆಗೆಯಬೇಕು. ಗೊನೆ ಕಟಾವಿನ ಅನಂತರ ಮತ್ತೂಂದು ಕತ್ತಿಯಾಕಾರದ ಮರಿಕಂದನ್ನು ಬೆಳೆಯಲು ಬಿಡಬೇಕು.

2 ಮಣ್ಣು ಏರಿಸುವುದು: ನಾಟಿ ಮಾಡಿದ ಮೂರು ತಿಂಗಳಿಗೆ ಮಣ್ಣನ್ನು ಸಡಿಲಗೊಳಿಸಿ ಗಿಡದ ಸುತ್ತಲೂ ಏರಿಸಬೇಕು. ಇದರಿಂದ ಬುಡಗಳಿಗೆ ಆಧಾರ ಸಿಕ್ಕಿ ಗಾಳಿಯ ಒತ್ತಡ ತಡೆದುಕೊಳ್ಳುತ್ತದೆ.

3 ಪ್ಲಾಸ್ಟಿಕ್ ಹೊದಿಕೆ: 30ರಿಂದ 50 ಮೈಕ್ರಾನ್ ದಪ್ಪದ ಪ್ಲಾಸ್ಟಿಕ್ ಹೊದಿಕೆ ಹಾಕುವುದರಿಂದ ಕಳೆ ನಿಯಂತ್ರಿಸಿ ಗಾಳಿಯ ಒತ್ತಡ ತಡೆದುಕೊಳ್ಳಲು ಸಹಾಯಕವಾಗುತ್ತದೆ.

4 ಆಧಾರಕ್ಕೆ ಕೋಲು ಕೊಡುವುದು: ಬಾಳೆ ನಿಜವಾದ ಕಾಂಡ ಹೊಂದಿರದೆ ಇರುವುದರಿಂದ ಗೊನೆಯಲ್ಲಿ ಹೆಚ್ಚು ಭಾರ ಇರುವುದರಿಂದ ಗಾಳಿಗೆ ಮುರಿಯಬಹುದು. ಬಿದಿರಿನ ಕೋಲು ಅಥವಾ ಬೇರೆ ಕೋಲುಗಳಿಂದ ಆಧಾರ ನೀಡಬಹುದು.

5 ಒಣ ಎಲೆಯನ್ನು ಕಾಲ ಕಾಲಕ್ಕೆ ತೆಗೆಯುವುದರಿಂದ ರೋಗ ಮತ್ತು ಕೀಟಗಳ ತೀವ್ರತೆ ಕಡಿಮೆ ಮಾಡಬಹುದು. ಇದನ್ನು ಹೊದಿಕೆಯಾಗಿಯೂ ಉಪಯೋಗಿಸಬಹುದು.

6 ಗೊನೆಯನ್ನು ಮಸ್ಲಿನ್ ಬಟ್ಟೆಯಿಂದ ಮುಚ್ಚಬೇಕು.

ಗೊನೆ ಕಟಾವು: ಮಾಗಿದ ಗೊನೆ ಕಟಾವು ಮಾಡಿದ ಅನಂತರ ಒಂದು ಮರಿ ಕಂದುವನ್ನು ಬೆಳೆಯಲು ಬಿಡಬೇಕು. ಹಣ್ಣಿನ ಗೊನೆ ಕಟಾವಿನ ಅನಂತರ ತಾಯಿಗಿಡ ಒಂದೇ ಬಾರಿ ಕತ್ತರಿಸಿ ಹಾಕದೆ ಹಂತ ಹಂತವಾಗಿ 15ರಿಂದ 20 ದಿನಗಳ ಅಂತರದಲ್ಲಿ ಕತ್ತರಿಸಿ ಹಾಕಬೇಕು. ಇದರಿಂದ ಬೆಳೆಯುತ್ತಿರುವ ಮರಿಗಿಡಗಳಿಗೆ ಪೋಷಕಾಂಶ ದೊರೆಯುತ್ತದೆ.

ಕೊಯ್ಲು ಮಾಡುವ ವಿಧಾನ
ಬಾಳೆಗೊನೆಗಳು ನಾಟಿ ಮಾಡಿದ 12ರಿಂದ 14 ತಿಂಗಳುಗಳಲ್ಲಿ ಕೊಯ್ಲಿಗೆ ಬರುತ್ತದೆ. ಕೊಯ್ಲು ಮಾಡುವ ಒಂದು ವಾರದ ಮುಂಚಿತವಾಗಿ ನೀರು ಕೊಡುವುದನ್ನು ನಿಲ್ಲಿಸಬೇಕು. ಗೊನೆ ಹೊರ ಬಂದ 90ರಿಂದ 120 ದಿನಗಳಲ್ಲಿ ಬಾಳೆ ಗೊನೆ ಕೊಯ್ಲಿಗೆ ಸಿದ್ಧವಾಗುತ್ತದೆ. ಇಳುವರಿ ತಳಿ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!