ಶೋಷಿತ ಸಮುದಾಯಗಳಿಗೆ ಧ್ವನಿ ನೀಡಿದ ಧೀಮಂತ ನಾಯಕ “ಬಾಬೂಜಿ” : ಸಚಿವ ಡಿ.ಸುಧಾಕರ್

 

ಚಿತ್ರದುರ್ಗ. ಏ.05: ಡಾ.ಬಾಬು ಜಗಜೀವನ್ ರಾಮ್ ಅವರದು ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ವ್ಯಕ್ತಿತ್ವ. ಅವರು ಕೇವಲ ರಾಜಕಾರಣಿ ಅಲ್ಲ, ಒಂದು ಚಳುವಳಿಯೇ ಆಗಿದ್ದರು. ತಮ್ಮ ಜೀವನದ  ಎಲ್ಲಾ ಹಂತಗಳಲ್ಲಿ ದಲಿತ, ಹಿಂದುಳಿದ ವರ್ಗ, ಶೋಷಿತ ಸಮುದಾಯಗಳಿಗೆ ಧ್ವನಿ ನೀಡಿದ  ಧೀಮಂತ ನಾಯಕ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‍ರಾಮ್‍ರವರ 118ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ “ಬಾಬೂಜಿ’ ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ದೇಶದ ಮೊದಲ ದಲಿತ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಬಾಬೂಜಿ ಅವರು 1908 ರ ಏಪ್ರಿಲ್ 05 ರಂದು ಬಿಹಾರದ ಸಣ್ಣ ಗ್ರಾಮವಾದ ಚಾಂದ್ವದ, ಭೋಜಪುರ ಜಿಲ್ಲೆಯಲ್ಲಿ ಒಂದು ಹಿಂದುಳಿದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಜಾತಿ ಮೂಲದ ಭೇದಭಾವದ ನೋವು ಅನುಭವಿಸಿದ ಜಗಜೀವನ್ ರಾಮ್ ಅವರು, ಅದರ ವಿರುದ್ಧ ಧೈರ್ಯವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಾ ಶಿಕ್ಷಣ, ಸಾಮಾಜಿಕ ಚಟುವಟಿಕೆ ಹಾಗೂ ರಾಜಕೀಯದ ಮೂಲಕ ತಮ್ಮನ್ನು ತಾವೇ ರೂಪಿಸಿಕೊಂಡರು. ಬಡತನ, ಹಿಂಸೆಯ ನಡುವೆಯೂ ಅವರು ಸಾಧನೆಯ ಶಿಖರ ತಲುಪಿದರು ಎಂದು ಹೇಳಿದರು.

 

ಜಗಜೀವನ್ ರಾಮ್ ಅವರು ಗಾಂಧೀಜಿಯಯವರ ತತ್ವ, ಆದರ್ಶಗಳಿಂದ ಪ್ರಭಾವಿತರಾಗಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.    ಅವರ ನಿμÉ್ಠ ಮತ್ತು ನಾಯಕತ್ವದಿಂದ ಹಲವು ಬಾರಿ ಸಂಸತ್ತಿಗೆ ಆಯ್ಕೆಯಾದರು ಮತ್ತು ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದರು. ಡಾ. ಬಾಬು ಜಗಜೀವನರಾಂ ಅವರು ದಲಿತರ ಸಾಮಾಜಿಕ ಸಮಾನತೆ ಮತ್ತು ಸಮಾನ ಹಕ್ಕುಗಳಿಗಾಗಿ ಹೋರಾಡಿದರು. 1967 ರಿಂದ 1970 ರವರೆಗೆ ಇಂದಿರಾಗಾಂಧಿ ಸರ್ಕಾರದಲ್ಲಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಭಾರತದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ಮೂಲಕ “ಹಸಿರುಕ್ರಾಂತಿ ಹರಿಕಾರ” ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ಅಲ್ಲದೇ 1979 ರಲ್ಲಿ ಭಾರತದ ಪ್ರಥಮ ದಲಿತ  ಉಪಪ್ರಧಾನ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ದೇಶದ ಜನತೆಗೆ ನೀಡಿದ ನಿರಂತರ ಕೊಡುಗೆಗಳಿಂದಾಗಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಅವರು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಪ್ರತಿನಿಧಿಯಾಗಿದ್ದರು. ಅಲ್ಲದೇ ಅತ್ಯಂತ ನೀತಿವಂತ, ಶ್ರಮಜೀವಿ, ಹಾಗೂ ಪ್ರಜಾಪ್ರಭುತ್ವದ ಸತ್ಯವಾದ ಆರಾಧಕರಾಗಿದ್ದರು ಎಂದು ಹೇಳಿದರು.

ಬಾಬು ಜಗಜೀವನ್ ರಾಮ್ ಅವರ ಕೊಡುಗೆಗಳನ್ನು ಕೇವಲ ಒಂದು ದಿನದಲ್ಲಿ ನೆನೆಯಲು ಸಾಕಾಗುವುದಿಲ್ಲ. ಅವರ ತತ್ವಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರವೇ ನಿಜವಾದ ಗೌರವ. ಬಾಬೂಜಿಯವರ ಕನಸುಗಳಾದ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಸಮೃದ್ಧ ಭವಿಷ್ಯ, ಮಹಿಳೆಯರಿಗೆ ಗೌರವದ ಬದುಕು ಹಾಗೂ ಶೋಷಿತರಿಗಾಗಿ ನ್ಯಾಯ ಇವುಗಳನ್ನು ನಿಜವಾಗಿಸೋಣ, ಜಾತಿ-ಭೇದಭಾವಗಳ ವಿರುದ್ಧ ಮೆಟ್ಟಿ ನಿಲ್ಲೋಣ, ಸಮಾನತೆಯ ಸಮಾಜ ನಿರ್ಮಿಸೋಣ ಎಂದರು.

ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ದೇಶಕಂಡ ಅಪ್ರತಿಮ ನಾಯಕ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದರು. ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದವರಿಗಾಗಿ ಒಳ ಮೀಸಲಾತಿ ಕಲ್ಪಿಸುವಂತೆ ದೇಶದ ಹಲವು ರಾಜ್ಯಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. 2024 ಆಗಸ್ಟ್ 1 ರಂದು ಸರ್ವೋಚ್ಛ ನ್ಯಾಯಾಲಯ ರಾಜ್ಯ ಸರ್ಕಾರಗಳು ಪರಿಶಿಷ್ಟರ ಪಟ್ಟಿಯಲ್ಲಿ ಉಪವರ್ಗೀಕರಣ ಮಾಡಿ, ಈಗ ನೀಡಿರುವ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಹಂಚಿಕೆ ಮಾಡಬಹುದು ಎಂದು ತೀರ್ಪು ನೀಡಿದೆ. ಇದೊಂದು ಐತಿಹಾಸಿಕ ತೀರ್ಪು ಎನಿಸಿದೆ. ಕೇಂದ್ರ ಸರ್ಕಾರವು ಸಹ ಒಳ ಮೀಸಲಾತಿ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಒಳ ಮೀಸಲಾತಿ ಜಾರಿಗೆ ಪ್ರಯತ್ನಿಸಬೇಕಿದೆ. ಈ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಬಗ್ಗೆ ಡಾ.ಬಾಬು ಜಗಜೀವನ್ ರಾಮ್ ಕಂಡಿದ್ದ ಕನಸನ್ನು ಸಾಕಾರ ಮಾಡಬೇಕಿದೆ ಎಂದರು.

 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ, ಜಗಜೀವನ್‍ರಾಮ್ ದೇಶ ಕಂಡ ಅಪ್ರತಿಮ ರಾಜಕಾರಣಿ. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದು, ಹಸಿರು ಕ್ರಾಂತಿ ಮೂಲಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು ಆಹಾರ ಉತ್ಪಾದನೆ ಹೆಚ್ಚಿಸಿದರು ಎಂದು ತಿಳಿಸಿದ ಅವರು, ಬಾಬೂಜಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಅವರು ಇಡೀ ಪ್ರಪಂಚಕ್ಕೆ ಮಾದರಿ ಎಂದು ಹೇಳಿದರು.

ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಎಲ್ಲರ ಹೋರಾಟಕ್ಕೆ ಪ್ರತಿಫಲ ಸಿಗಲಿದೆ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಡಾ. ವಿ.ಬಸವರಾಜ್ ಉಪನ್ಯಾಸ ನೀಡಿ, ರಾಜಕಾರಣಿ ಹೇಗೆ ಇರಬೇಕು ಎಂಬುದಕ್ಕೆ ಮಾದರಿ ಬಾಬೂಜಿ. ಅವರು ಮೇಲು-ಕೀಳೆಂಬ ತಾರತಮ್ಯ, ಜಾತಿಪದ್ಧತಿ, ಅಸ್ಪøಶ್ಯತೆಯನ್ನು ತೊಡೆದುಹಾಕಲು ಶ್ರಮಿಸುವ ಮೂಲಕ ಸಾಮಾಜಿಕ ಬದಲಾವಣೆಗಾಗಿ ಹೋರಾಡಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು,  ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ದಲಿತ ಮುಖಂಡರಾದ ಎಸ್.ಜಯಣ್ಣ, ಬಿ.ರಾಜಪ್ಪ, ನಿರಂಜನಮೂರ್ತಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

 

ಅದ್ಧೂರಿ ಮೆರವಣಿಗೆ:
ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‍ರಾಮ್‍ರವರ 118ನೇ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಡಾ.ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

ನಗರದ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ನೀಲಕಂಠೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆಯು ಗಾಂಧಿವೃತ್ತ, ಎಸ್‍ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದಿಂದ ವೇದಿಕೆ ಕಾರ್ಯಕ್ರಮ ನಡೆಯುವ ನಗರದ ತರಾಸು ರಂಗಮಂದಿರದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಮುಖಂಡರು, ಗಣ್ಯರು, ವಿದ್ಯಾರ್ಥಿಗಳು ಇದ್ದರು.

suddionenews

Recent Posts

ಆಲಪ್ಪುಳ ಜಿಮ್ಖಾನಾ’ ಕರ್ನಾಟಕ ಜನರ ಮನಸ್ಸು ಗೆದ್ದ ಕ್ರೀಡಾ ಹಾಸ್ಯ ಚಿತ್ರ!

  ಅಲಪ್ಪುಳ ಜಿಮ್ಖಾನಾ ಎಂಬುದು ಮಲಯಾಳಂ ಆಕ್ಷನ್ ಚಿತ್ರ, ಖಲೀದ್ ರೆಹಮಾನ್ ನಿರ್ದೇಶಿಸಿದ್ದಾರೆ, ಇದರಲ್ಲಿ ನಾಸ್ಲಿನ್ ಗಫೂರ್ ಮತ್ತು ಲುಕ್ಮಾನ್…

2 hours ago

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ, ಈ ರಾಶಿಯವರ ಭಾಗ್ಯ ಎನ್ನಬೇಕೋ ಪುಣ್ಯ…

9 hours ago

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

19 hours ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

19 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

19 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

19 hours ago