ಬೆಂಗಳೂರು: ಇಡೀ ಮನುಕುಲವನ್ನೇ ಬೆಚ್ಚಿಬೀಳುವಂತೆ ಮಾಡಿದ್ದು ಈ ಮಹಾಮರಿ ಕಿಲ್ಲರ್ ಕೊರೊನಾ ತೀವ್ರತೆ ಕಡಿಮೆ ಆಗುಗತ್ತಿದೆಯೆಂದು ನಿಯಮ ಪಾಲಿಸದೇ ಆಲಸ್ಯ ತೋರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಡೆಲ್ಟಾಗಿಂತಲೂ ವೇಗವಾಗಿ ಹರಡುವ ಕೊರೊನಾದ ಹೊಸ ರೂಪಾಂತರಿ ಪತ್ತೆಯಾಗಿದೆ.
ಇನ್ನೂ ಬ್ರಿಟನ್, ಯೂರೋಪ್, ರಷ್ಯಾ ಹಾಗೂ ಅಮೇರಿಕಾದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ AY 4.2 ಸೋಂಕು ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದೆ. ರಾಜ್ಯದಲ್ಲಿ 7 ಕೊರೊನಾ ರೂಪಾಂತರಿ AY 4.2 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 3 ಹಾಗೂ ಇತರೆ ಜಿಲ್ಲೆಗಳಲ್ಲಿ 4 ಪ್ರಕರಣ ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್, ಬೆಂಗಳೂರಿನಲ್ಲಿ 3 ಹಾಗೂ ಬೇರೆ ಭಾಗದಲ್ಲಿ 4 AY 4.2 ಸೋಂಕು ಪ್ರಕರಣಗಳು ಕಂಡುಬಂದಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಅನ್ನು ಕಡ್ಡಾಯ ಮಾಡಿದ್ದೇವೆ.
ಈ ಹಿಂದೆ ಇದ್ದ ಕ್ವಾರಂಟೈನ್ ನಿಯಮವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಬೇರೆ ದೇಶದಲ್ಲಿ ಸೋಂಕು ಹೆಚ್ಚಾದರೆ ಕೇಂದ್ರದಿಂದ ಮಾರ್ಗಸೂಚಿ ಹಾಗೂ ರಾಜ್ಯದಿಂದಲೂ ಹೊಸ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು..
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…