ಚಿತ್ರದುರ್ಗ, (ಏ.21): ಅತ್ಯುನ್ನತ ಸೇವೆ ಹಾಗೂ ಸಾಧನೆ ತೋರಿದ ಜಿಲ್ಲೆಯ 18 ಜನ ಸರ್ಕಾರಿ ನೌಕರರಿಗೆ 2020 -21 ಮತ್ತು 2021-22 ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
2020-21 ಸಾಲಿನ ಪ್ರಶಸ್ತಿ ಪಡೆದವರ ವಿವರ:
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ.ವಿ, ಪಶು ವೈದ್ಯಾಧಿಕಾರಿ ಡಾ.ಮುರುಗೇಶ.ವಿ.ಟಿ . ತೋಟಗಾರಿಕೆ ಇಲಾಕೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜು.ಬಿ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ಪ್ರದೀಪ್ ಕುಮಾರ್.ಎಂ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವ್ಯವಸ್ಥಾಪಕ ಆರ್.ನಾಗೇಂದ್ರಬಾಬು , ಆಹಾರ ಶಿರಸ್ತೇದಾರ್ ಶಿವಾಜಿ.ಟಿ, ತೋಟಗಾರಿಕೆ ಸಹಾಯಕ ಅಂಜುಂ.ಎನ್.ಎಂ .
*2021-22 ಸಾಲಿನ ಪ್ರಶಸ್ತಿ ಪಡೆದವರ ವಿವರ:*
ಕೃಷಿ ಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ, ಪಶು ಇಲಾಖೆ ಉಪನಿರ್ದೇಶಕ ಡಾ.ಬಿ.ಪ್ರಸನ್ನ ಕುಮಾರ್, ಭೂ ದಾಖಲೆಗಳ ಉಪನಿರ್ದೇಶಕ ಹಾಗೂ ತಾಂತ್ರಿಕ ಸಹಾಯಕ ಎಂ.ಎಸ್.ಕೃಷ್ಣಪ್ರಸಾದ್, ಜಿಲ್ಲಾ ಆಸ್ಪತ್ರೆ ಸಲಹಾ ವೈದ್ಯ ಹಾಗೂ ನೆಫ್ರಾಲಜಿಸ್ಟ್ ಡಾ.ಡಿ.ಪ್ರಕಾಶ್, ರಾಜಸ್ವ ನಿರೀಕ್ಷಕ ಎನ್.ಪಾಲಾಕ್ಷಪ್ಪ, ಪಿಡಿಓ ಆರ್.ಪಾತಣ್ಣ, ಎಫ್.ಡಿ.ಎ ಹೆಚ್.ಆರ್.ದಿವಾಕರ್, ಪರಿಸರ ಅಭಿಯಂತರ ತಿಮ್ಮರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ.ಎ, ವಾಹನ ಚಾಲಕ ಆರ್.ರಮೇಶ್.






GIPHY App Key not set. Please check settings