ಚಿತ್ರದುರ್ಗ : ಭಗೀರಥ ಗುರುಪೀಠದ ಪೀಠಾಧ್ಯಕ್ಷರಾದ ಡಾ. ಪುರಷೋತ್ತಮಾನಂದ ಪುರಿ ಸ್ವಾಮಿಗಳ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅವಿರತವಾದ ಸೇವೆಯನ್ನು ಸಲ್ಲಿಸಿರುವವರು. ಅವರ ಸೇವೆಯ ಅನನ್ಯತೆಯನ್ನು ಗುರುತಿಸಿ, ಬೆಳಗಟ್ಟದ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠವು 2022ರ ಮಾರ್ಚ್ 03ರಂದು ಬೆಳಿಗ್ಗೆ 11ಗಂಟೆಗೆ ಏರ್ಪಡಿಸಿರುವ ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿಯ 21ನೇ ಮಹಾರಥೋತ್ಸವದ ಸಂದರ್ಭದಲ್ಲಿ “ಸಮನ್ವಯ ಸದ್ಗುರು” ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಶ್ರೀಕ್ಷೇತ್ರ ಬೆಳಗಟ್ಟ ಶ್ರೀಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ಪೀಠಾಧ್ಯಕ್ಷರು ಹಾಗೂ ಶ್ರೀಗುರುಕರಿಬಸವೇಶ್ವರಜ್ಜಯ್ಯ ಸ್ವಾಮಿ ವ್ಯಕ್ತಿತ್ವ ವಿಕಸನ ಸಂಸ್ಥೆಯ ಅಧ್ಯಕ್ಷರಾದ ಅಮ್ಮ ಮಹದೇವಮ್ಮ ತಿಳಿಸಿದ್ದಾರೆ.


