ಚೆನ್ನೈ : ಐಪಿಎಲ್ 2021 ಮಿನಿ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮೌನ ಮುರಿದಿದ್ದಾರೆ.
ಚೆನ್ನೈನಲ್ಲಿ ನಡೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಮೇಶ್ ಅವರನ್ನು 1 ಕೋಟಿ ರೂ.ಗಳಿಗೆ ಪಡೆದುಕೊಂಡಿತು.
ಭಾರತದ ಅಗ್ರ ಬೌಲರ್ಗಳಲ್ಲಿ ಒಬ್ಬರಾಗಿ ಮುಂದುವರಿಯುತ್ತಿರುವ ಉಮೇಶ್ ಯಾದವ್ ಬಗ್ಗೆ
ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಇತರೆ ಫ್ರಾಂಚೈಸಿಗಳು ಆಸಕ್ತಿ ವಹಿಸದಿರುವುದು ಆಶ್ಚರ್ಯಕರವಾಗಿದೆ ಎಂದು ನೆಹ್ರಾ ಹೇಳಿದ್ದಾರೆ.
ತಪ್ಪಾಗಿ ಅರ್ಥೈಸಿಕೊಳ್ಳದಿದ್ದರೆ ಒಂದು ಮಾತು ಹೇಳಬೇಕಾಗಿದೆ. ಹೆಸರಿಲ್ಲದ ಬೌಲರ್ಗಳಿಗಾಗಿ ಇಷ್ಟು ಖರ್ಚು ಮಾಡಿ, ಬಹಳ ಅನುಭವಿ ಉಮೇಶ್ಗೆ ಇಷ್ಟು ಕಡಿಮೆ ಬೆಲೆ ಕೊಡುವುದು ಒಳ್ಳೆಯದಲ್ಲ. ವಾಸ್ತವವಾಗಿ ಜೇ ರಿಚರ್ಡ್ಸನ್ ಮತ್ತು ಕೈಲ್ ಜಾಮಿಸನ್ ಅವರಿನ್ನೂ ತಮ್ಮ ಸಾಧನೆಯನ್ನು ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಟೆಸ್ಟ್ ವಿಷಯದಲ್ಲಿ ಜೇಮೀಸನ್ ಸತತವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಪರ್ತ್ನಲ್ಲಿ ರಿಚರ್ಡ್ಸನ್ ಸಾಧಾರಣ ಎನಿಸಿಕೊಂಡಿದ್ದಾರೆ. ಆದರೆ ವೇಗದ ಬೌಲರ್ ಉಮೇಶ್ ಯಾದವ್ ಈಗಾಗಲೇ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಉಮೇಶ್ ಯಾದವ್ಗೆ ಹೋಲಿಸಿದರೆ .. ಜಾಮಿಸನ್ ಮತ್ತು ರಿಚರ್ಡ್ಸನ್ಗೆ ಎಷ್ಟು ಅನುಭವವಿದೆ ? ಹರಾಜಿನಲ್ಲಿ ಅವರು ಹೆಚ್ಚಿನ ಬೆಲೆಗೆ ಮಾರಾಟವಾಗಿರುವುದು ಹೇಗೆ ಎಂದು ಅರ್ಥವಾಗುತ್ತಿಲ್ಲ.
ಹರಾಜಿನಲ್ಲಿ ಉಮೇಶ್ಗೆ ಕಡಿಮೆ ಬೆಲೆಗೆ ಖರೀದಿಸಿದ್ದಾರೆಂಬ ನೋವಿಗಿಂತ ಹೆಸರಿಸದ ಬೌಲರ್ಗಳಿಗೆ ಇಷ್ಟೊಂದು ದುಬಾರಿ ಮೊತ್ತ ನೀಡಲಾಗುತ್ತಿರುವುದು ಆಶ್ಚರ್ಯವಾಯಿತು. ಮಿಚೆಲ್ ಸ್ಟಾರ್ಕ್ ಮತ್ತು ಲಸಿತ್ ಮಾಲಿಂಗರಂತಹ ಬೌಲರ್ಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದು ಅರ್ಥಪೂರ್ಣವಾಗಿದೆ. ಏಕೆಂದರೆ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಮಾಜಿ ನಾಯಕ ಗೌತಮ್ ಗಂಭೀರ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಉಮೇಶ್ ಅವರನ್ನು ಕನಿಷ್ಠ ಬೆಲೆಗೆ ಪಡೆದುಕೊಂಡಿದ್ದಾರೆ ಎಂದು ಈಗಾಗಲೇ ಆರೋಪಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರನ್ನು ಹರಾಜಿನಲ್ಲಿ 16.25 ಕೋಟಿ ರೂ.ಗೆ ಪಡೆದರೆ, ಆರ್ಸಿಬಿ ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜಾಮಿಸನ್ ಅವರನ್ನು 15 ಕೋಟಿ ರೂ.ಗೆ ಮತ್ತು
ಪಂಜಾಬ್ ಕಿಂಗ್ಸ್ ಆಸ್ಟ್ರೇಲಿಯಾದ ವೇಗದ ಬೌಲರ್ ಜೇ ರಿಚರ್ಡ್ಸನ್ 14 ಕೋಟಿ ರೂ.ಗೆ ಪಡೆದುಕೊಂಡರು.


