ಬೆಂಗಳೂರು; ಅಡಿಕೆ ಬೆಳೆಗಾರರಿಗೆ ಬೆಲೆ ಏರಿಕೆಯಾದಷ್ಟು ಖುಷಿಯೋ ಖುಷಿ. ಇದೀಗ ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದರೆ ಅಡಿಕೆಧಾರಣೆ ಮಾರ್ಚ್ ನಲ್ಲಿ ತುಸು ಏರಿಕೆಯಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಸೇರಿದಂತೆ ಹಲವು ಭಾಗದಲ್ಲಿ ಅಡಿಕೆಯ ಬೆಲೆ ಹೆಚ್ಚಾಗಿದೆ. ಹಬ್ಬದ ಸಂಭ್ರಮದಲ್ಲಿರೋ ಬೆಳೆಗಾರರಿಗೆ ಈಗ ಮತ್ತೆ ಅಡಿಕೆ ಬೆಲೆ ಹೆಚ್ಚಳ ಮತ್ತಷ್ಟು ಸಿಹಿಸ ತಿನ್ನುವಂತೆ ಮಾಡಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕ್ವಿಂಟಾಲ್ ಅಡಿಕೆ ಬೆಲೆ ಗರಿಷ್ಠ ದರ 53,589 ರೂಪಾಯಿ ಆಗಿದೆ. ಚನ್ನಗಿರಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್ ಗೆ ಗರಿಷ್ಠ ದರ 53,589 ರೂಪಾಯಿ, ಕನಿಷ್ಠ ದರ 49,212 ರೂಪಾಯಿ ಇದ್ದು, ಸರಾಸರಿ ಬೆಲೆ 51,810 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 25,786 ರೂಪಾಯಿ, ಕನಿಷ್ಠ ದರ 18,387 ರೂಪಾಯಿ, ಸರಾಸರಿ ದರ 23,267 ರೂಪಾಯಿ ಆಗಿದೆ. ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಇನ್ನು ಮಾರ್ಚ್ ಎರಡನೇ ವಾರವೂ 53,000 ಗಡಿ ದಾಟಿದ್ದು, ಬಳಿಕ ಇಳಿಕೆಯಾಗಿತ್ತು. ಆದರೆ ಇದೀಗ ಮತ್ತೆ ಮಾರ್ಚ್ ಅಂತ್ಯದಲ್ಲಿ ಏರಿಕೆಯಾಗಿದೆ.
ಈ ಬಾರಿ ಉತ್ತಮ ಮಳೆಯಾಗಿದ್ದ ಕಾರಣ ಬೆಳೆಯನ್ನ ರೈತರು ಕಾಪಾಡಿಕೊಂಡರು. ಆದರೆ ಮಳೆಯೇ ಇಲ್ಲದ ಸಮಯದಲ್ಲಿ ಗಿಡಗಳನ್ನ ಕಾಪಾಡಿಕೊಳ್ಳುವುದಕ್ಕೆ ರೈತರು ಕೂಡ ಹರಸಾಹಸ ಸಿನಿಮಾಗಳನ್ನು ಪಟ್ಟಿದ್ದಾರೆ. ಅದರಲ್ಲೂ ತೆಂಗಿಗೆ ಕೀಟಗಳ ಸಮಸ್ಯೆಯೂ ಸಾಕಷ್ಟು ಕಾಟಕೊಟ್ಟಿದೆ. ಈ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಿ ರೈತರು ಬೆಳೆಯನ್ನು ಬೆಳೆದಿದ್ದಾರೆ.
ಸುದ್ದಿಒನ್ : ಖರ್ಜೂರ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ, ಇದರಿಂದ ಕೇವಲ ಪ್ರಯೋಜನಗಳು ಮಾತ್ರ ಇದೆ ಎಂದು ನೀವು…
ಈ ರಾಶಿಯವರಿಗೆ ಲೇಟ್ ಆದರೂ ಪರವಾಗಿಲ್ಲ ಒಳ್ಳೆ ಸಂಗಾತಿ ಸಿಗುವರು, ಈ ರಾಶಿಯ ದಂಪತಿಗಳಿಗೆ ಸಂತಾನ ಫಲ, ಬುಧವಾರದ ರಾಶಿ…
ಬೆಂಗಳೂರು; ಇಂದಿನಿಂದ ರಾಜ್ಯದಲ್ಲಿ ಹಲವು ಬದಲಾವಣೆಗಳು ಆಗಿವೆ. ಹಲವು ವಸ್ತುಗಳ ದರ ಏರಿಕೆಯೂ ಆಗಿದೆ. ಇದರ ಬೆನ್ನಲ್ಲೇ ಡಿಸೇಲ್ ದರವೂ…
ಬಳ್ಳಾರಿ,ಏ.01 : ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದಲ್ಲಿ ಏ.04 ರಂದು ನಡೆಯುವ ಶ್ರೀ ಸದ್ಗುರು ಎರ‍್ರಿತಾತನವರ ವಾರ್ಷಿಕ ಜಾತ್ರೆ/ರಥೋತ್ಸವವನ್ನು ಕರ್ನಾಟಕ…
ಚಿತ್ರದುರ್ಗ.ಎಪ್ರಿಲ್.01: ಮುಂಬರುವ ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಲು ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ…
ಸುದ್ದಿಒನ್ : ಮಂಗಳವಾರ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನದ…