ಬೆಂಗಳೂರು: 40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ @nitin_gadkari ಅವರಿಗೆ ಸ್ವಾಗತ! ಪ್ರಧಾನಿ @narendramodi ಬಂದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ್ದ ರಸ್ತೆ ಕಿತ್ತು ಹೋದ ಸಂಗತಿ ರಾಜ್ಯದ ಜನತೆಗೆ ಗೊತ್ತಿದೆ. ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ, ಅದೇ ಪಕ್ಷದ ರಸ್ತೆ ಸಾರಿಗೆ ಹಾಗೂ ಹೆದ್ದಾರಿಯ ಕೇಂದ್ರ ಸಚಿವರಾಗಿರುವ ತಾವು ಯಾವ ಸಲಹೆ ಕೊಡಲು ಬಯಸುತ್ತೀರಿ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಕೇಳಿದೆ.
ಬೆಂಗಳೂರು-ಮೈಸೂರು ದಶಪಥ ಮುಖ್ಯ ಹೆದ್ದಾರಿಯು ಮಳೆಯ ಕಾರಣದಿಂದ ಜಲಾವೃತಗೊಂಡಾಗ ಜನರ ಸಂಕಷ್ಟ ಆಲಿಸಲು ಬಾರದ ಕೇಂದ್ರ ಸಚಿವರೆ, ಅದ್ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಿದ್ದೀರಿ? ಈಗ ಅದೇ ರಸ್ತೆ ಕಾಮಗಾರಿಯ ವೈಮಾನಿಕ ಸಮೀಕ್ಷೆ ಮಾಡಲು ಬಂದಿರುವ ತಮಗೆ ಅಲ್ಲಿನ ಅಸಮರ್ಪಕತೆ ವಿಷಯಗಳು ತಿಳಿದಿಲ್ಲವೆ?
ಸುರಕ್ಷತೆಗಿಂತ ಅಸುರಕ್ಷತೆಯೇ ಹೆಚ್ಚಾಗಿರುವ ಈ ರಸ್ತೆಯಲ್ಲಿ ಸಿಸಿಟಿವಿಗಳು ಯಾಕೆ ಅಳವಡಿಕೆಯಾಗಿಲ್ಲ? ಇವೇ ಕಾರಣಗಳಿಂದ ಸಂಭವಿಸಿರುವ ಹತ್ತಾರು ಅಪಘಾತಗಳಿಗೆ ಯಾರು ಜವಾಬ್ದಾರರು? ಅಪಘಾತ ತಡೆ ಸಂಬಂಧ ಪೆಟ್ರೋಲಿಂಗ್ ಯಾಕೆ ಇನ್ನೂ ಆರಂಭವಾಗಿಲ್ಲ? ಸರ್ವೀಸ್ ರಸ್ತೆಯಲ್ಲಿ ವೇಗ ಮಿತಿಗಾಗಿ ವೈಜ್ಞಾನಿಕವಾಗಿ ಹಂಪ್ ಗಳನ್ನು ನಿರ್ಮಿಸಿಲ್ಲ?
ಇದೇ ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ @hd_kumaraswamy ಅವರು ಮಾಡಿದ ಸಭೆಗಳು, ನೀಡಿದ ನೆರವು ಮರೆತುಬಿಟ್ರಾ? ಇದೆಲ್ಲ ಹೋಗಲಿ, ನೀವು ಮಾಡಿರುವ ಕೆಲಸವಾದರೂ ನೆಟ್ಟಗಿದೆಯಾ?.
ಬಿಜೆಪಿ ಆಡಳಿತ ಬಂದ ನಂತರ ಈ ಯೋಜನೆಗೆ ಅವೈಜ್ಞಾನಿಕವಾಗಿ ಭೂಸ್ವಾಧೀನ ಪಡಿಸಿಕೊಂಡು ಲೂಟಿ ಹೊಡೆದ ವಿಷಯಗಳು ತಮಗೆ ತಿಳಿದಿಲ್ಲವೇ, @nitin_gadkari ಅವರೆ? ಅಥವಾ 40% ಕಮಿಷನ್ ಹೊಡೆಯುವ ದಂಧೆಯಲ್ಲಿ ನಿರತರಾಗಿರುವ ನಿಮ್ಮದೇ ರಾಜ್ಯ ಸರ್ಕಾರದಿಂದ ತಮಗೂ ಏನಾದರೂ ಪಾಲು ಸಿಕ್ಕಿದೆಯಾ?
ಈ ರಸ್ತೆಯ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ಕಾರ್ಯಗಳಿಗೆ ಅನುಕೂಲವಾಗುವ ಹಲವು ನಿರ್ಧಾಗಳನ್ನು ತೆಗೆದುಕೊಂಡಿದ್ದು ಅಂದಿನ ಮುಖ್ಯಮಂತ್ರಿ @hd_kumaraswamy ಅವರು. ವೈಮಾನಿನ ಸಮೀಕ್ಷೆಗೆ ಬಂದಿರುವ ಗಡ್ಕರಿ ಅವರೆ, ಈ ರಸ್ತೆ ಕಾಮಗಾರಿಯಲ್ಲಿ ನಡೆದ ಅಕ್ರಮದ ಬಗ್ಗೆ ತುಟಿ ಬಿಚ್ಚುತ್ತೀರೋ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…