ಚಿತ್ರದುರ್ಗದಲ್ಲಿ ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ : ಜೂನ್ 28 ಕೊನೆ ದಿನ…!

suddionenews
1 Min Read

ಚಿತ್ರದುರ್ಗ,(ಜೂನ್.16) : ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಲಕ್ಷ್ಮೀ ಸಾಗರದ ಕಂದಾಯ ವೃತ್ತದಲ್ಲಿ  ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 28 ಅರ್ಜಿ ಸಲ್ಲಿಸಲು ಕೊನೆದಿನ.

ಲಕ್ಷ್ಮೀ ಸಾಗರದ ಕಂದಾಯ ವೃತ್ತದ ಓಬಪ್ಪ ಬಿನ್ ಬೋರಪ್ಪ ಅವರು 2022ರ ಮೇ 31 ರಂದು ನಿವೃತ್ತಿಗೊಳಿಸಲಾಗಿರುತ್ತದೆ. ಇವರ ನಿವೃತ್ತಿಯಿಂದ ಖಾಲಿ ಇರುವ ಹಿರೇಗುಂಟನೂರು  ಹೋಬಳಿ ಲಕ್ಷ್ಮೀ ಸಾಗರ ಕಂದಾಯ ವೃತ್ತದ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಈ ಹುದ್ದೆಯು ತಾತ್ಕಾಲಿಕವಾಗಿರುತ್ತದೆ.

ಅರ್ಹತೆಗಳು: ಅಭ್ಯರ್ಥಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕೆ 25 ವರ್ಷ ಪೂರ್ಣಗೊಂಡಿರಬೇಕು,  ಕನ್ನಡ ಓದಲು ಮತ್ತು ಮಾತನಾಡಲು ಬರಬೇಕು. ವಿದ್ಯಾಭ್ಯಾಸದ ಬಗ್ಗೆ ಅಂಕಪಟ್ಟಿ, ಟಿ.ಸಿ. ಲಗತ್ತಿಸುವುದು, ಈ ಹಿಂದೆ ಬರಾವರ್ದ ವಂಶಸ್ಥರಾಗಿದದ್ದಲ್ಲಿ ದಾಖಲೆ ಸಲ್ಲಿಸುವುದು,  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೊದಲ ಅದ್ಯತೆ, ಯಾವುದೇ ಕ್ರಿಮಿನಲ್ ಮೊಕದ್ದಮೆಯ ಹಿನ್ನೆಲೆಯುಳ್ಳವರಾಗಿರಬಾರದು. (ಪೊಲೀಸ್ ಇಲಾಖೆಯಿಂದ ದೃಢೀಕರಣ ಪತ್ರ ಲಗತ್ತಿಸುವುದು) ಕಂದಾಯ ವೃತ್ತದ ನಿವಾಸಿಯಾಗಿರಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *