ಬೆಂಗಳೂರು, ಮಾರ್ಚ್. 16 : ಕರ್ನಾಟಕ ವಕ್ಫ್ ಬೋರ್ಡ್ ಗೆ ನೂತನವಾಗಿ ಅಧ್ಯಕ್ಷರ ನೇಮಕವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ನಡುವೆ ಜಟಾಪಟಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ವಕ್ಫ್ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಸೈಯದ್ ಉಲ್ ಹುಸೇನಿಯವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾಗಿದ್ದಾರೆ. ಇವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರಾಗಿದ್ದಾರೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಜಮೀರ್ ತಮ್ಮ ಆಪ್ತನನ್ನು ಆಯ್ಕೆ ಮಾಡಬೇಕೆಂಬ ಹಠ ಹಿಡಿದಿದ್ದರು.
ಜಮೀರ್ ಅಹ್ಮದ್ ಖಾನ್ ಆಪ್ತ, ಚಿತ್ರದುರ್ಗದ ಅನ್ವರ್ ಪಾಷಾ ಅವರನ್ನು ಕೂರಿಸಲು ಬಾರೀ ಪ್ರಯತ್ನ ನಡೆದಿತ್ತು. ಇದು ಸಾಧ್ಯವಾಗಿಲ್ಲ. ಕಡೆಗೆ ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಿ 50/50 ಸೂತ್ರದ ಸಲಗೆಯನ್ನು ನೀಡಿದರು. ಇದಕ್ಕೆ ಡಿಕೆ ಶಿವಕುಮಾರ್ ಸಹ ಒಪ್ಪಲಿಲ್ಲ. ಹೀಗಾಗಿ ಹೈಕಮಾಂಡ್ ಕಡೆಗೆ ಸೈಯದ್ ಉಲ್ ಹುಸೇನಿ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದೆ.
ಇದರ ನಡುವೆ ಜಮೀರ್ ಅಹ್ಮದ್ ಖಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆದರೆ ಹೈಕಮಾಂಡ್ ಇದಕ್ಕೆ ಜಗ್ಗಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಜಮೀರ್, ಅಧ್ಯಕ್ಷ ಸ್ಥಾನಕ್ಕೆ ತಮ್ಮ ಆಪ್ತನನ್ನ ಕೂರಿಸಿ ಎಂಬ ಲಾಭಿ ಮಾಡುವ ಪ್ರಯತ್ನ ಮಾಡ್ತಾ ಇದಾರೆ. ಈಗಾಗಲೇ ಅಧಿಕೃತ ಮುದ್ರೆಯನ್ನು ಹೈಕಮಾಂಡ್ ಒತ್ತಿದೆ. ಹೀಗಿರುವಾಗ ಜಮೀರ್ ರಾಜೀನಾಮೆ ಕೊಡ್ತಾರಾ ಎಂಬುದನ್ನು ನೋಡಬೇಕಿದೆ. ಆದರೆ ತಮ್ಮ ಆಪ್ತನಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ, ಈ ರಾಶಿಯವರಿಗೆ ಆದಾಯ ಕುಂಠಿತ, ಸೋಮವಾರದ ರಾಶಿ ಭವಿಷ್ಯ 17 ಮಾರ್ಚ್…
ಬೆಂಗಳೂರು; ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನೆರವೇರಿದ್ದು, ಮೊಮ್ಮಗನಿಗೆ ತಾತನ…
ಸುದ್ದಿಒನ್ : ಪ್ರಧಾನಿ ಮೋದಿ ಮತ್ತು AI ಸಂಶೋಧಕ ಲೆಕ್ಸ್ ಫ್ರೀಡ್ಮನ್ ನಡುವೆ ಆಸಕ್ತಿದಾಯಕ ಪಾಡ್‌ಕ್ಯಾಸ್ಟ್ ನಡೆಯಿತು. ಸ್ವಲ್ಪ ಸಮಯದ…
ಸುದ್ದಿಒನ್, ಹಿರಿಯೂರು, ಮಾರ್ಚ್. 16 : ಆರತಕ್ಷತೆಯ ನಂತರ ಏರ್ಪಡಿಸಿದ್ದ ಭೋಜನದಲ್ಲಿ ಕೊನೆಗೆ ಬಂದ ಕೆಲವರಿಗೆ ಕುಡಿಯುವ ನೀರು ಸಿಗಲಿಲ್ಲ…
ಬೆಂಗಳೂರು; ಕಡೆಗೂ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ಸಮಯ ಹತ್ತಿರವಾಗಿದೆ. ಆದರೆ ಕಳೆದ…
ಸುದ್ದಿಒನ್, ಚಳ್ಳಕೆರೆ, ಮಾರ್ಚ್. 16 : ಮಧ್ಯ ಕರ್ನಾಟಕದ ಪವಾಡ ಪುರುಷ, ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಅದ್ದೂರಿಯಾಗಿ…