Connect with us

Hi, what are you looking for?

ಪ್ರಮುಖ ಸುದ್ದಿ

ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ; ಮುಖ್ಯಮಂತ್ರಿ ರಾಜೀನಾಮೆ ?

ಬಲ ಪರೀಕ್ಷೆಗೆ ಮೊದಲೇ ಶಾಸಕರ ರಾಜೀನಾಮೆ

ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ

ಸಿಎಂ ರಾಜೀನಾಮೆ ಸಾಧ್ಯತೆ

ಯಾನಂ:  ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ
ರಾಜಕೀಯ ಚಟುವಟಿಕೆಗಳು ತೀವ್ರ ವೇಗ ಪಡೆದು ಕೊಳ್ಳುತ್ತಿವೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರ ಬಗ್ಗೆ ಅಸಮಾಧಾನ ಹೊಂದಿರುವ ಕಾಂಗ್ರೆಸ್ ಶಾಸಕರು ಸತತವಾಗಿ ರಾಜೀನಾಮೆ ನೀಡುತ್ತಿದ್ದಾರೆ.

ಐವರು ಶಾಸಕರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಭಾನುವಾರ
ಇನ್ನೂ ಇಬ್ಬರು ಶಾಸಕರು ಸಿಎಂಗೆ ಆಘಾತ ನೀಡಿದ್ದಾರೆ. ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಶಾಸಕರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ರಾಜೀನಾಮೆ ಪತ್ರಗಳನ್ನು ಸ್ಪೀಕರ್‌ಗೆ ಕಳುಹಿಸಲಾಗಿದೆ.

ವಿಧಾನಸಭೆಯಲ್ಲಿ ಬಲ ಪರೀಕ್ಷೆಗೆ ಮುಂಚಿತವಾಗಿ ಶಾಸಕರು ರಾಜೀನಾಮೆ ನೀಡುತ್ತಿರುವುದು ಸರ್ಕಾರದಲ್ಲಿ ಆತಂಕ ಉಂಟುಮಾಡುತ್ತಿದೆ.

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ತಮಿಳುಸಾಯಿ ಸೌಂದರಾಜನ್ ಅವರು ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮೇ 22 ರಂದು ಬಲ ಪರೀಕ್ಷೆಗೆ ಸಿದ್ಧರಾಗುವಂತೆ ಗುರುವಾರ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

22 ರಂದು ಸಂಜೆ 5 ಗಂಟೆಯೊಳಗೆ ಬಲ ಪರೀಕ್ಷೆ ಕೊನೆಗೊಳ್ಳಬೇಕು ಮತ್ತು ಬಲ ಪರೀಕ್ಷೆ ನಡೆಯಲಿರುವ ಈ ಸಭೆಯನ್ನು ಬೆಂಬಲಿಸಿ ಸದಸ್ಯರು ಕೈ ಎತ್ತಬೇಕು ಎಂದು ರಾಜ್ಯಪಾಲರು ಹೇಳಿದ್ದರು.

ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ಶಾಸಕರ ರಾಜೀನಾಮೆ ನೀಡುವ ಮೂಲಕ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡಿದೆ.

30 ಸದಸ್ಯರ ವಿಧಾನಸಭೆಯಲ್ಲಿ 15 ಸದಸ್ಯರೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಇತ್ತೀಚೆಗೆ ಒಬ್ಬ ಕಾಂಗ್ರೆಸ್ ಶಾಸಕರ ಅನರ್ಹತೆ ಮತ್ತು ಇತರ ನಾಲ್ವರ ರಾಜೀನಾಮೆಯೊಂದಿಗೆ ಈ ಸಂಖ್ಯೆ 10 ಕ್ಕೆ ಕುಸಿಯಿತು.
ಇಂದು ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡಿದ್ದರಿಂದ, ಕೇವಲ 9 ಮಂದಿ ಮಾತ್ರ ಕಾಂಗ್ರೆಸ್ ಪರವಾಗಿ ಉಳಿದಿದ್ದಾರೆ. ಆದರೆ, ಇಬ್ಬರು ಡಿಎಂಕೆ ಮತ್ತು ಓರ್ವ ಪಕ್ಷೇತರ ಸದಸ್ಯರ ಆಡಳಿತ ಪಕ್ಷದ ಪರವಾಗಿದ್ದಾರೆ.

ಅದೇ ರೀತಿ ಪ್ರತಿಪಕ್ಷದಲ್ಲಿ ಎನ್‌ಆರ್ ಕಾಂಗ್ರೆಸ್ 7, ಅನ್ನಾ ಡಿಎಂಕೆ 4, ನಾಮಿನೇಟೆಡ್ (ಬಿಜೆಪಿ) 3 ಶಾಸಕರು ಸೇರಿದಂತೆ ಒಟ್ಟು 14 ಸದಸ್ಯರನ್ನು ಹೊಂದಿದೆ. ಇದರೊಂದಿಗೆ, ವಿಧಾನಸಭೆ ಬಲ ಪರೀಕ್ಷೆಗೆ ಮುಂಚಿತವಾಗಿ ನಾರಾಯಣಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ವಿಧಾನಸಭೆಯಲ್ಲಿ ಬಲ ಪರೀಕ್ಷೆ ನಡೆಸಲು ಸಾಕಷ್ಟು ಸಂಖ್ಯಾಬಲ ಇಲ್ಲದ ಕಾರಣ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಳಗಾವಿ : ಕಾಂಗ್ರೆಸ್ ನವರಿಗಿಂತ ದನ ಕುರಿಗಳೇ ಮೇಲೂ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು. ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದನಕುರಿಗಳಂತೆ ಶಾಸಕರ ಖರೀದಿಸಿ ಸರ್ಕಾರ...

ಪ್ರಮುಖ ಸುದ್ದಿ

ಚಿತ್ರದುರ್ಗ :ನೆಹರು ಕುಟುಂಬ ಯಾರ ಮೇಲೂ ದ್ವೇಷ ಮಾಡಲಿಲ್ಲ. ಇಂತಹ ನಾಯಕರ ಆದರ್ಶಗಳನ್ನಿಟ್ಟುಕೊಂಡು ರಾಜಕಾರಣ ಮಾಡಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಕೋಆರ್ಡಿನೇಟರ್ ವಿಜಯಕುಮಾರ್ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ...

ಪ್ರಮುಖ ಸುದ್ದಿ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಡಿ.ಸುಧಾಕರ್‍ಗೆ ಎಸ್‍ಐಟಿ ನೋಟಿಸ್ ನೀಡಿದೆ. ಸಿಡಿ ಯುವತಿ ಜತೆ ಸುಧಾಕರ್ ಕಳೆದ 6 ತಿಂಗಳಿಂದ ನಿರಂತರ...

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್,(ಮಾ.31) : ಹಿರಿಯೂರು ನಗರಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 6,7,15, ಮತ್ತು 16 ನೇ ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಯನ್ನು...

ಪ್ರಮುಖ ಸುದ್ದಿ

ದಾವಣಗೆರೆ: ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಮಹಾನಗರ ಪಾಲಿಕೆ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎರಡು ಪಕ್ಷಗಳ ಅಭ್ಯರ್ಥಿಗಳು ತಲಾ ಒಂದೊಂದು ವಾರ್ಡಿನಲ್ಲಿ ಗೆಲುವು ಕಂಡಿದ್ದಾರೆ. ಇಂದು ನಗರದ ಡಿಆರ್ ಆರ್...

ಪ್ರಮುಖ ಸುದ್ದಿ

ಚೆನ್ನೈ: ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ವಿಡಿಯೋವೊಂದನ್ನ ಮಾಡಿದೆ. ಆ ವಿಡಿಯೋದಲ್ಲಿ ಕಾಂಗ್ರೆಸ್ ಸಂಸದ ಕಾರ್ತೀ ಚಿದಂಬರಂ ನೃತ್ಯ ಬಳಕೆ ಮಾಡಿಕೊಳ್ಳಲಾಗಿದೆ. ಇದು ಕಾಂಗ್ರೆಸ್ ಅವರ ಕೋಪಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಹಿಂದೆ ತಮಿಳುನಾಡು...

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್ : ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ಹೊಳಲ್ಕೆರೆ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರನ್ನಾಗಿ ಪುರುಷೋತ್ತಮ್ ಇವರನ್ನು ನೇಮಕ ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ , ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್,...

ಪ್ರಮುಖ ಸುದ್ದಿ

ದಾವಣಗೆರೆ: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರಾಮನ ಹೆಸರಲ್ಲಿ ರಾವಣ ರಾಜ್ಯ ನಡೆಸುತ್ತಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು. ಮಹಿಳೆಯರ ರಕ್ಷಕರು ಎನ್ನುತ್ತಾ ರಾಕ್ಷಸರ...

ಪ್ರಮುಖ ಸುದ್ದಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಾಯಕ ಅನ್ನೋ ಪದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಈ‌ಮಹಾನಾಯಕನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಿಡಿ ತಯಾರಿಕೆ, ಬಿಡುಗಡೆ ಹಿಂದೆ...

error: Content is protected !!