in

ನಗರದಲ್ಲಿ ಮತ್ತೊಂದು ಕಟ್ಟಡ ಕುಸಿತ : ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ..!

suddione whatsapp group join

ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ನಗರದ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತಗೊಂಡು ವಿಡಿಯೋ ವೈರಲ್ ಆಗಿತ್ತು. ಆ ಘಟನೆ ಮಾಸುವ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಅಂಥದ್ದೇ ಮತ್ತೊಂದು ಘಟನೆ ಸಂಭವಿಸಿದೆ.

ಹೌದು, ಕೆಎಂಎಫ್ ಕ್ವಾರ್ಟರ್ಸ್ ಒಳಗಡೆ ಇರುವಂತೆ ಬಹುಮಹಡಿ ಕಟ್ಟಡ ಕುಸಿದಿದೆ. ಸದ್ಯಕ್ಕೆ ಆ ಕಟ್ಟಡ ಇನ್ನು ಕಂಪ್ಲೀಟ್ ಆಗಿ ನೆಲಸಮ ಆಗಿಲ್ಲ. ಯಾವಾಗ ಬೇಕಾದರೂ ಮತ್ತೆ ಕುಸಿಯಬಹುದು.

ಅದೃಷ್ಟವಶಾತ್ ಕಟ್ಟಡ ಕುಸಿತದಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕಟ್ಟಡ ಸಾಕಷ್ಟು ಹಳೆಯದ್ದಾದರಿಂದ ಈ ದರ್ಘಟನೆ ನಡೆದಿದೆ. ಆದಷ್ಟು ಬೇಗ ಇನ್ನುಳಿದ ಕಾರ್ಯಾಚರಣೆ ಮಾಡಿದ್ರೆ ಮತ್ತಾಗುವ ಅಪಾಯ ತಪ್ಪಿಸಬಹುದು ಎನ್ನಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ : ಕ್ಯಾದಿಗೆರೆ ಬಳಿ ಅಪಘಾತ ; ಇಬ್ಬರು ಸಾವು

ಕಟ್ಟಡ ಕುಸಿತ : 18 ಕುಟುಂಬಗಳ ಸ್ಥಳಾಂತರ