ಪಾದಯಾತ್ರೆ ಮೂಲಕ ಕೊರೊನಾ ಹರಡಿಸುತ್ತಾರೆ : ಕಾಂಗ್ರೆಸ್ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಆಕ್ರೋಶ..!

suddionenews
1 Min Read

ರಾಮನಗರ : ಹನ್ನೊಂದು ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಐದನೇ ದಿನಕ್ಕೆ ಮುಕ್ತಾಯ ಮಾಡಿದ್ದಾರೆ. ಕೊರೊನಾ ಹೆಚ್ಚಳ, ಹೈಕೋರ್ಟ್ ಚಾಟಿ ಈ ಎಲ್ಲದರ ನಡುವೆ ಕಾಂಗ್ರೆಸ್ ತನ್ನ ಪಾದಯಾತ್ರೆಯನ್ನ ನಿಲ್ಲಿಸಿದೆ. ಈ ಬೆನ್ನಲ್ಲೇ ಶಾಸಕಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ತಾಲೂಕಿನ ಕೊರೊನಾ ಸೋಂಕಿನ ಪ್ರಮಾಣ ತೀರಾ ಕಡಿಮೆ ಇದೆ‌. ಒಂದು ವೇಳೆ ಕೊರೊನಾ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನವರೇ ಕಾರಣವಾಗುತ್ತೆ. ಪಾದಯಾತ್ರೆ ಮೂಲಕ ಕೊರೊನಾ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹೆಚ್ಚಾಗುತ್ತಿದೆ. ಆದ್ರೆ ಇಂಥ ಸಮಯದಲ್ಲಿ ಪಾದಯಾತ್ರೆ ಮಾಡುವಂತ ಅವಸರವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಎರಡ್ಮೂರು ತಿಂಗಳು ಬಿಟ್ಟೆ ಪಾದಯಾತ್ರೆ ಮಾಡಬೇಕಿತ್ತು. ಖಂಡಿತ ನಮಗೆ ಕೊರಿನಾ ಬಗ್ಗೆ ಭಯ ಶುರುವಾಗಿದೆ. ಇವರು ಕೊರೊನಾ ಹರಡಿಸುತ್ತಾರೆ. ನಮ್ಮ ತಾಲೂಕಿನಲ್ಲಿ ಕೊರೊನಾ ಹೆಚ್ಚಸದರೆ ಇವರೇ ಕಾರಣವೆಂದು ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *