
ಬೆಂಗಳೂರು: ಡ್ರಗ್ಸ್ ಕೇಸ್ ವಿಚಾರ ಅನುಶ್ರೀಗೆ ಮತ್ತೆ ತಗಲಾಕಿಕೊಂಡಿದೆ. ಕಿಶೋರ್ ಕೊಟ್ಟ ಹೇಳಿಕೆಯೆಂದು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೂಡ ರಾರಾಜಿಸುತ್ತಿದೆ. ಈ ಬೆನ್ನಲ್ಲೇ ಅನುಶ್ರೀ ತನ್ನ ಕುಟುಂಬ ಸಮೇತ ಬೆಂಗಳೂರು ಬಿಟ್ಟಿದ್ದಾರೆ. ಯಾವುದೋ ಕಾರ್ಯಕ್ರಮವೆಂದು ಮುಂಬೈಗೆ ಹಾರಿದ್ದಾರೆ. ಅಲ್ಲಿಂದಲೇ ವಕೀಲರಿಗೆ ಕರೆ ಮಾಡಿದ್ದಾರಂತೆ.

ಅಲ್ಲಿಂದಲೇ ತಮ್ಮ ವಕೀಲರ ಜೊತೆಗೆ ಮಾತನಾಡಿದ್ದು, ಪ್ರಕರಣ ಸಂಬಂಧ ಚರ್ಚೆ ಮಾಡಿದ್ದಾರಂತೆ. ಈ ಬಗ್ಗೆ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಹತ್ರತ್ರ ಒಂದು ವರ್ಷದಿಂದ ತಣ್ಣಗಾಗಿದ್ದ ಪ್ರಕರಣ ಇದೀಗ ಮತ್ತೆ ಆಕ್ಟೀವ್ ಆಗಿದೆ. ಅದರಲ್ಲಿ ಅನುಶ್ರೀ ಹೆಸರು ಕೂಡ ಕೇಳಿ ಬಂದಿದೆ. ನಂಗೂ ಕಿಶೋರ್ ಗೂ ಸಂಪರ್ಕವೇ ಇಲ್ಲ ಎಂದಿದ್ದ ಅನುಶ್ರೀ ಬಗ್ಗೆ ಎಲ್ಲವನ್ನು ಕಿಶೋರ್ ಬಾಯ್ಬಿಟ್ಟಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಮೆನ್ಶನ್ ಮಾಡಲಾಗಿದೆ. ಆದ್ರೆ ಮತ್ತೆ ಕಿಶೋರ್ ಕೂಡ ಉಲ್ಟಾ ಹೊಡೆದಿದ್ದು, ಪ್ರಕರಣ ಯಾವ ರೀತಿ ಅಂತ್ಯ ಕಾಣುತ್ತೆ ನೋಡಬೇಕಿದೆ.
GIPHY App Key not set. Please check settings