ಜಮ್ಮು-ಕಾಶ್ಮೀರ : ಕಣಿವೆಯಲ್ಲಿ ಉಗ್ರರ ಅಟ್ಟಾಹಾಸ ನಿಂತಂತೆ ಕಾಣುತ್ತಿಲ್ಲ. ಒಂದು ತಿಂಗಳ ಅಂತರದಲ್ಲೇ 11 ಜನರನ್ನು ಹತ್ಯೆ ಮಾಡಿದ್ದಾರೆ. ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಈ ವೇಳೆಯೂ ಉಗ್ರರು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ.
ಬಂಡಿಪೋರಾದಲ್ಲಿ ಮತ್ತೊಬ್ಬ ನಾಗರಿಕನಿಗೆ ಗುಂಡಿಟ್ಟು ಕೊಂದಿದ್ದಾರೆ. ಈ ಮೂಲಕ ತಿಂಗಳ ಅಂತರದಲ್ಲಿ 11 ಮಂದಿಯನ್ನು ಕೊಲೆ ಮಾಡಲಾಗಿದೆ. ಸಾವನ್ನಪ್ಪಿದ 11 ಮಂದಿಯಲ್ಲಿ ಬಿಹಾರ ಮೂಲದವರು 5 ಜನ, ಇಬ್ಬರು ಶಿಕ್ಷಕರನ್ನು ಹತ್ಯೆ ಮಾಡಲಾಗಿದೆ. ಇನ್ನುಳಿದವರು ಕಾಶ್ಮೀರದ ಅಲ್ಪಸಂಖ್ಯಾತರಾಗಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಉಗ್ರರ ಗುಂಡಿಗೆ ಬಲಿಯಾದ ಪೊಲೀಸ್ ಅಧಿಕಾರಿಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉಗ್ರರು ನಾಗರಿಕರನ್ನ ಹತ್ಯೆ ಮಾಡುತ್ತಿರುವ ವಿಷಯ ಸುದ್ದಿಯಾದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಆದರೂ ಹತ್ಯೆ ಮಾಡುವ ಚಾಳಿಯನ್ನ ಉಗ್ರರು ನಿಲ್ಲಿಸಿಲ್ಲ.