in ,

ಅಂಬೇಡ್ಕರ್ ಅವರು ಈ ಜಗದ ಇರುವಿಕೆಯ ಅರಿವು : ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ್

suddione whatsapp group join

 

ಚಿತ್ರದುರ್ಗ, (ಮೇ.01) : ವಿಕಾರಗೊಂಡ ಸಮಾಜವನ್ನು ಸುಸ್ವರೂಪಕ್ಕೆ ತರುವ ಬಹು ಪ್ರಯತ್ನಕ್ಕೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ಅಂಬೇಡ್ಕರ್ ಅವರು ಈ ಜಗದ ಇರುವಿಕೆಯ ಅರಿವನ್ನು ಬಿತ್ತಿದವರು.

ಸಮ ಸಮಾಜ ನಿರ್ಮಾಣವಾಗಬೇಕು, ಸರ್ವರೂ ಒಂದಾಗಿ ಬಾಳಬೇಕು. ಶತೃವನ್ನೂ ಪ್ರೀತಿಯಿಂದ ನೋಡಿ ಎಂದು ಹೇಳಿದವರು ಅಂಬೇಡ್ಕರ್ ಅವರು. ತನ್ನನ್ನು ತಾನು ಯಾರೆಂಬುದನ್ನು ಅರಿತು, ಆ ಅರಿವಿನೊಳಗೆ ಬೆರೆತು ಜ್ಞಾನಬೆಳಕಿನ ಬೆಟ್ಟವಾಗಿದ್ದಾರೆಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ತಿಳಿಸಿದರು.

ತಾಲ್ಲೂಕಿನ ಯಳಗೋಡು ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮ ಜಯಂತೊತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಜಾತಿ ಎಂಬುದು ದೊಡ್ಡ ಸುಳ್ಳು ಈ ಹೊತ್ತು ಜಾತಿ ಪದದ ಬದಲು ನೀತಿ ಪದ ಬಳಸುವ ಅಗತ್ಯವಿದೆ. ಜಾತಿ ಎಂಬ ಕ್ಯಾನ್ಸರ್ ರೋಗಕ್ಕೆ ತಕ್ಕ ಮದ್ದು ಆಧ್ಯಾತ್ಮಿಕ ಬದುಕು. ಇದು ಸರ್ವರ ಸ್ವತ್ತಾಗಬೇಕು. ಆದಿ ಮತ್ತು ಆತ್ಮ ಎಂಬೆರಡು ಪದಗಳ ಸಂಯೋಜಿತ ರೂಪವೇ ಆಧ್ಯಾತ್ಮ. ಆದಿ ಎಂದರೆ ಒಳಗೆ, ಒಳಗಿನ, ನಮ್ಮೊಳಗಿನ ಎಂದರ್ಥ. ನಮ್ಮೊಳಗಿನ ಆತ್ಮಕ್ಕೆ ಸಂಬಂಧಿಸಿದ್ದೇ ಆಧ್ಯಾತ್ಮ. ತಲ್ಲೀನತೆಯಿಂದ ಸೇವೆ ಸಲ್ಲಿಸುವುದೇ ಆಧ್ಯಾತ್ಮ. ಇಂತಹ ಆಧ್ಯಾತ್ಮಿಕ ಜೀವಿಯಾಗಿದ್ದವರು ಡಾ. ಬಿ. ಆರ್. ಅಂಬೇಡ್ಕರ್ ಅವರು. ಹಾಗಾಗಿಯೇ ಸಹಸ್ರ ಸಹಸ್ರ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಈ ದೇಶದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಅಂಬೇಡ್ಕರ್ ಅವರೆಂದು ಅಭಿಪ್ರಾಯಪಟ್ಟರು.

ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ “ಅಂಬೇಡ್ಕರ್ ಮತ್ತು ಆಧ್ಯಾತ್ಮ” ಕೃತಿಯನ್ನು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಆರ್. ಬಸವರಾಜಪ್ಪ ಅವರು ಲೋಕಾರ್ಪಣೆಗೊಳಿಸಿದರು.

ಕೃತಿ ಕುರಿತು ಮಾತನಾಡಿದ ನಾಗರಾಜ ಕಣಿವೆಬಿಳಚಿ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮಹಾಮಾರ್ಗಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅಂಬೇಡ್ಕರ್ ಅವರು ನೀಡಿದ ಬಗೆಯನ್ನು ಇಲ್ಲಿ ದಾಖಲಿಸಲಾಗಿದೆ. ಅವರ ಬದುಕು ಬರಹಕ್ಕೆ ಆಧ್ಯಾತ್ಮವೇ ತಹಳದಿಯಾಗಿರುವುದನ್ನು ಅನಾವರಣಗೊಳಿಸಲಾಗಿದೆ. ಅಂಬೇಡ್ಕರ್ ಅವರು ಆ ಆಧ್ಯಾತ್ಮದ ಮಾರ್ಗವೇ ಅವರ ಜಾÐನ ಶಕ್ತಿಗೆ ಪ್ರೇರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೊಳಲ್ಕೆರೆ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್. ಶ್ರೀನಿವಾಸ್ ಅವರು ಮಾತನಾಡುತ್ತಾ ಅಂಬೇಡ್ಕರ್ ಅವರು ಅಗಾಧವಾದ ಜ್ಞಾನ ಸಂಪಾದನೆಗೆ ಮತ್ತು ಭಾರತದ ಸಹಸ್ರ ಸಮಸ್ಯೆಗಳ ಫರಿಹಾರಕ್ಕೆ ತಕ್ಕ ಮಾರ್ಗತೋರಿಸಲು ಅವರೊಳಗಿದ್ದ ಆಧ್ಯಾತ್ಮಿಕ ಶಕ್ತಿಯೇ ಮೂಲಧಾತುವಾಗಿರುವುದನ್ನು `ಅಂಬೇಡ್ಕರ್ ಮತ್ತು ಆಧ್ಯಾತ್ಮ’ ಕೃತಿಯು ಅನಾವರಣಗೊಳಿಸುತ್ತದೆ. ಹಾಗಾಗಿ ಅಂಬೇಡ್ಕರ್ ಅಭಿವೃದ್ಧಿಗೆ, ಅಸಮಾನತೆಯ ವಿನಾಶಕ್ಕೆ ದಿವ್ಯ ಸಾಧನವಾಗಿದ್ದಾರೆ ಎಂದರು.

ಡಾ. ರಮೇಶ್ ಚೀಳಂಗಿ ಅವರು ಮಾತನಾಡಿ ಅಂಬೇಡ್ಕರ್ ಅವರು ತೋರಿದ ಮಾರ್ಗದಿಂದ ಶೋಷಣೆಗ ಒಳಗಾದ ಸಮುದಾಯವು ಎಚ್ಚೆತ್ತುಕೊಂಡು ಬದುಕಲು ಸಾಧ್ಯವಾಗಿದೆ ಎಂದರು. ಯಲ್ಲಪ್ಪನವರು ಮಾತನಾಡುತ್ತಾ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಸರ್ವರನ್ನೂ ಪ್ರೀತಿಸುವ ಸಾಧನವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಸಿ. ಶರಣಪ್ಪ ವಹಿಸಿದ್ದರು. ಆರ್.ಟಿ ಮಾಹಾಂತೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಲಯ ಅರಣ್ಯಾಧಿಕಾರಿ ಆರ್.ಟಿ ಮಂಜುನಾಥ ಅವರು ನಿವೃತ್ತ ನೌಕರರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.  ಗ್ರಾಮ ಪಂಚಾಯತಿ ಸದಸ್ಯರಾದ ಪಾರ್ವತಮ್ಮ, ಬಸಮ್ಮ, ಅನಿತಾ ಮತ್ತು ಪಿ.ಡಿ.ಓ. ಮಲ್ಲಿಕಾರ್ಜುನ, ಪೋಲೀಸ್ ಉಪಠಾಣಾಧಿಕಾರಿ ಸಿದ್ದರಾಮಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಣಶ್ರೀ ಎಂ. ಪ್ರಾರ್ಥಿಸಿದರು. ಅಜ್ಜಯ್ಯ ಅವರು ಸ್ವಾಗತಿಸಿದರು, ವಿಜಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

15 ಸಾವಿರ ಕೋಟಿ ತಂದದ್ದು ಸಾಮರ್ಥ್ಯವೋ ಅಸಾಮರ್ಥ್ಯವೋ : ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ತಿರುಗೇಟು

ವಿಶ್ವಗುರು ಬಸವೇಶ್ವರ ಜಯಂತಿಯ ಪ್ರಯುಕ್ತ ಬೈಕ್ ರ್ಯಾಲಿ ಮತ್ತು ಬಸವೇಶ್ವರ ಬಾವಚಿತ್ರ ಮೆರವಣಿಗೆ : ಎಲ್.ಬಿ ರಾಜಶೇಖರ್