
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.10) : ಡಾನ್‍ಬೋಸ್ಕೋ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಲಾ ಸಂಭ್ರಮ-2023 ಚಿತ್ರಕಲಾ ಪ್ರದರ್ಶನ ಶುಕ್ರವಾರ ನಡೆಯಿತು.
ಕಲಾವಿದ ಅಂಬಣ್ಣ ಮಹಿಪತಿ ತಮ್ಮ ಕಲಾ ಕುಂಚದಿಂದ ನಿಸರ್ಗದ ಜಲವರ್ಣ ಮಾದರಿ ಚಿತ್ರ ಬಿಡಿಸುವ ಮೂಲಕ ಕಲಾ ಸಂಭ್ರಮ ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣದ ಜೊತೆ ಮಕ್ಕಳಲ್ಲಿ ಇಂತಹ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ತಮ್ಮಲ್ಲಿರುವ ಕಲೆಯನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.
ಡಾನ್‍ಬೋಸ್ಕೋ ಶಾಲೆಯ ಪ್ರಾಂಶುಪಾಲರಾದ ಫಾದರ್ ಲಾರೆನ್ಸ್, ಫಾದರ್ ವಿಜಯ ಮಾರ್ಟಿನ್, ಸಜ್ಜಿ ಜಾರ್ಜ್, ಕಲಾ ಶಿಕ್ಷಕರುಗಳಾದ ವೆಂಕಟೇಶ್ ಮತ್ತು ಪ್ರಜ್ಞ ಸಮಾರಂಭದಲ್ಲಿದ್ದರು.
ಮಕ್ಕಳ ಕಲಾ ಕುಂಚದಿಂದ ಅರಳಿದ ವಿವಿಧ ಬಗೆಯ ಬಣ್ಣ ಬಣ್ಣದ ಚಿತ್ತಾರದಿಂದ ಕೂಡಿದ ಚಿತ್ರಪ್ರದರ್ಶನಗಳು ಎಲ್ಲರ ಕಣ್ಮನ ಸೆಳೆಯಿತು.
ವಿವಿಧ ಶಾಲೆಯ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಮಕ್ಕಳ ಪೋಷಕರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
GIPHY App Key not set. Please check settings