ಚಿತ್ರದುರ್ಗ ನಗರಸಭೆಯ ಆಸ್ತಿ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಗೆ ಅವಕಾಶ : ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ. ಏ.19:  ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್ ಪೇ, ಪೇಟಿಎಂ, ಗೂಗಲ್ ಪೇ ಗಳ ಮುಖಾಂತರ ಸಾರ್ವಜನಿಕರು ಕರ ಪಾವತಿಸಬಹದು. ಇಲ್ಲವಾದರೆ ಖಜಾನೆ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.ಇದರ ಹೊರತಾಗಿ ನಗರಸಭೆ ಕಚೇರಿಯಲ್ಲಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಕೌಂಟರ್‍ನಲ್ಲಿಯು ಸಹ ಕರ ಪಾವತಿಸಬಹುದಾಗಿದೆ.

ಸಾರ್ವಜನಿಕರು ಈ ಅವಕಾಶಗಳನ್ನು ಬಳಸಿ ಸುಗಮವಾಗಿ ನಗರಸಭೆಯ ಕರಗಳನ್ನು ಪಾವತಿಸುವಂತೆ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

suddionenews

Recent Posts

ಮೈಸೂರಿನ ಘಟನೆ ಮಾಸುವ ಮುನ್ನವೇ ವಿಸಿ ನಾಲೆಗೆ ಹಾರಿದ ಒಂದೇ ಕುಟುಂಬದ ಮೂವರು..!

ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…

1 hour ago

ಮಾರ್ಚ್ 01 ರಂದು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…

2 hours ago

ನರೇಗಾ : ಕರ್ತವ್ಯಕ್ಕೆ ಗೈರಾದ ತಾಂತ್ರಿಕ ಸಹಾಯಕರ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…

3 hours ago

ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ : ಮೂವರು ಪಿಡಿಒ ಗಳ ವಾರ್ಷಿಕ ವೇತನ ಬಡ್ತಿಗೆ ತಡೆ

ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…

3 hours ago

ಮೈಸೂರಲ್ಲಿ ವಿಜಯೇಂದ್ರ : ಭೇಟಿಗೆ ಓಡಿ ಬಂದ ಪ್ರತಾಪ್ ಸಿಂಹ : ಇವರ್ಯಾರ ಬಣ ಎಂಬುದೇ ದೊಡ್ಡ ಪ್ರಶ್ನೆ..!

    ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…

3 hours ago

ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 24 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…

3 hours ago