in ,

ಮದ್ಯವರ್ತಿ, ಏಜೆಂಟ್ ರನ್ನು ದೂರವಿಟ್ಟಾಗ ಆರೋಪ ಸಹಜ; ಸಚಿವ ಬಿ.ಸಿ.ಪಾಟೀಲ್

suddione whatsapp group join

ಸುದ್ದಿಒನ್, ಚಿತ್ರದುರ್ಗ,(ಸೆ.11) : ಭ್ರಷ್ಟಾಚಾರ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ಧ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ನನ್ನ ವಿರುದ್ಧದ ಭ್ರಷ್ಟಾಚಾರ ದೂರು ದುರುದ್ದೇಶ ಪೂರಿತವಾಗಿದೆ. ಸಿದ್ಧರಾಮಯ್ಯ ವಿರುದ್ಧವೂ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಸಿಲ್ವರ್ ಬ್ರಿಡ್ಜ್ ನಿರ್ಮಾಣಕ್ಕೆ 500 ಕೋಟಿ ರು. ಕಿಕ್ ಬ್ಯಾಕ್ ಆರೋಪವಿತ್ತು. ಕೆಲಸದ ವಿಚಾರದಲ್ಲಿ ಮದ್ಯವರ್ತಿ, ಏಜೆಂಟ್ ರನ್ನು ದೂರವಿಟ್ಟಾಗ ಇಂತಹ ಆರೋಪಗಳು ಕೇಳಿ ಬರುತ್ತವೆ ಎಂದರು.

ನಾನು ಹಿರಿಯೂರಿನಲ್ಲಿ ಕಾರ್ಯಕ್ರಮ ನಡೆಸಲು ಬೇರೆ ಯಾವುದೇ ಉದ್ದೇಶವಿಲ್ಲ.‌ ಕ್ಷೇತ್ರದ ಶಾಸಕಿ ಪೂರ್ಣಿಮಾ ಆಹ್ವಾನದ ಮೇರೆಗೆ ಆಗಮಿಸಿದ್ದೇನೆ. ಜತೆಗೆ ಈ ಹಿಂದೆ ಹಿರಿಯೂರಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸಿದ್ದೆನು. ಹಿರಿಯೂರು ಜನರ ಮೇಲೆ ನನಗೆ ಪ್ರೀತಿ ಜಾಸ್ತಿ ಇದೆ.  ಆ ಕಾರಣಕ್ಕೆ ಬರುತ್ತಿದ್ದೇನೆ. ನನಗೆ  ನಾಲ್ಕು ಬಾರಿ ಗೆಲ್ಲಿಸಿದ ಹಿರಿಕೇರೂರು ಕ್ಷೇತ್ರ ಭದ್ರವಾಗಿದೆ ಸಾಕು ಎಂದು ಊಹಾಪೋಹಕ್ಕೆ ತೆರೆ ಎಳೆದರು

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಡೋಲು ಬಡಿಯುವುದನ್ನು ನಿಲ್ಲಿಸಿ ಎಂದ ಪೊಲೀಸರನ್ನೇ ತಳ್ಳಾಡಿದ ಯುವಕರು..!

ಶಿವತಾಂಡವ ನೃತ್ಯ ರೂಪಿಯಲ್ಲಿ ಬಂದ ಏಕತಾ ಹಿಂದು ಮಹಾಗಣಪತಿ