in ,

ಎಲ್ಲಾ ನಿರುದ್ಯೋಗಿಗಳಿಗೂ ಉದ್ಯೋಗ ದೊರಕುವವರೆಗೂ ನಿರುದ್ಯೋಗ ಭತ್ಯೆ ನೀಡಬೇಕು : ಎಐಡಿವೈಓ ಒತ್ತಾಯ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ.26) :  ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆಯನ್ನು ಅವರಿಗೆ ಉದ್ಯೋಗ ದೊರಕುವವರೆಗೂ ನೀಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಚಿತ್ರದುರ್ಗ ಜಿಲ್ಲಾ ಘಟಕವು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತದೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ, ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ನಿಧಿ ಯೋಜನೆ ಪ್ರಕಾರ, 2012-23  ಶಿಕ್ಷಣ ತೇಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆ, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡುವುದು ಎಂಬ ನಿಬಂಧನೆ ವಿಧಿಸಲಾಗಿದೆ, ಆದ್ದರಿಂದ, ಈ ಅವಧಿಗೆ ಮುನ್ನ ಪದವಿ ಇತರ ವೃತ್ತಿಪರರ ಕೋರ್ಸ್‍ಗಳನ್ನು ಪೂರ್ಣಗೊಳಿಸಿ  ಉದ್ಯೋಗಕ್ಕಾಗಿ ಹಗಲಿರುಳು ಶ್ರಮಿಸುತ್ತ, ಚಾತಕಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸ್ವಾವಲಂಬಿಗಳಾಗಿ ಬದುಕಲು ತಕ್ಕದಾದ ಒಂದು ಉದ್ಯೋಗಕ್ಕಾಗಿ ಹತ್ತು-ಹದಿನೈದು ವರ್ಷಗಳಿಂದ ಮನೆಬಿಟ್ಟು ನಗರಗಳಿಗೆ ಒಂದು ಸ್ವಂತ  ಖರ್ಚಿನಲ್ಲಿ ಬಾಡಿಗೆ ಕೊಠಡಿಗಳಲ್ಲಿದ್ದುಕೊಂಡು ಊಟ, ನಿದ್ರೆ ಬಿಟ್ಟು ಖಾಸಗಿ ಗ್ರಂಥಾಲಯಗಳಲ್ಲಿ ಸಾವಿರಾರು ಖರ್ಚು ಮಾಡಿಕೊಂಡು ಓದುತ್ತಿರುವವರು ನಿರುದ್ಯೋಗಿಗಳಲ್ಲವೇ?  ಅಥವಾ ಈಗಲೇ ಸರ್ಕಾರ, ಉದ್ಯೋಗ ನೀಡಿಬಿಟ್ಟಿದೆಯೇ?  ನಿಜವಾಗಿಯೂ ನಿರುದ್ಯೋಗದ ಬಿಸಿ ತಟ್ಟುತ್ತಿರುವುದು ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ ಸಮುದ್ಯೋಗಿಗಳೆಂದು ಗುರುತಿಸಿ ನಿರುದ್ಯೋಗ ಭತ್ಯೆ ನೀಡಬೇಕಾಗಿರುವುದು ಅತ್ಯವಶ್ಯಕ ಎಂದಿದ್ದಾರೆ.

ಕಾಂಗ್ರೆಸ್ ಚುನಾವಣೆಗೆ ಮುಂಚಿತವಾಗಿ ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ನೀಡಿದ್ದ ಭರವಸೆಯಿಂದ, ತಮ್ಮ ಬಹುಕಾಲದ ಬೇಡಿಕೆಯನ್ನು ನಿರೀಕ್ಷಿಸಲು ಈಗಲಾದರೂ ಒಂದು ರಾಜಕೀಯ ಪಕ್ಷ ಅಧಿಕೃತವಾಗಿ ಒಪ್ಪಿಕೊಂಡಿದೆ.

ಅವರ ನಿರೀಕ್ಷೆಯನ್ನು ಹುಸಿಗೊಳಿಸಿನಮನ ಕೇವಲ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂಬುದು ಎಷ್ಟು? ಈ ಎಲ್ಲ ಯುವಕರು ತಮ್ಮ ಮೊದಲ ಆದ್ಯತೆಯಾಗಿ ಕೇಳುತ್ತಿರುವುದು ಉದ್ಯೋಗವನ್ನೇ ಹೊರತು ನಿರುದ್ಯೋಗ ಭತ್ಯೆಯನ್ನಲ್ಲ.

ಆದರೆ ಅವರ ಯೋಗ್ಯತೆಗೆ ತಕ್ಕವಾದ ಉದ್ಯೋಗವನ್ನು ನೀಡುವವರೆಗೆ ಅವರು ಅತ್ಮ ಗೌರವದಿಂದ ಬದುಕಲು ಬೇಕಾದ ನಿರುದ್ಯೋಗ ಭತ್ಯೆಯನ್ನು ಕೊಡಬೇಕಾಗಿರುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಚುನಾಯಿತ ಸರ್ಕಾರವೊಂದರ ಕನಿಷ್ಠ ಜವಾಬ್ದಾರಿ. ಇದನ್ನು ಈಡೇರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಕೆಲವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ನಾಡಿನ ಯುವ ಸಮುದಾಯಕ್ಕೆ ಮಾಡುವ ಅನ್ಯಾಯವಾಗುತ್ತದೆ.

ಆದ್ದರಿಂದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆಯನ್ನು ಅವರಿಗೆ ಉದ್ಯೋಗ ದೊರಕುವವರೆಗೂ ನೀಡಬೇಕೆಂದು ಎಐಡಿವೈಓ ಚಿತ್ರದುರ್ಗ ಜಿಲ್ಲಾ ಘಟಕವು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತದೆ.

ಎಐಡಿವೈಓನ ಜಿಲ್ಲಾ ಸಂಚಾಲಕ ಕೃಷ್ಣಾ, ಸಂಚಾಲಕರಾದ ರವಿಕುಮಾರ್, ಕಿರಣ್, ಕುಮುದ, ಅವಿನಾಶ್, ಅರುಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಗ್ಯಾರಂಟಿ ನಾವು ಕೊಡ್ತೇವೆ.. ಮೊದಲು ವಿರೋಧ ಪಕ್ಷ ನಾಯಕನನ್ನು ಹುಡುಕಿಕೊಳ್ಳಿ : ಕಾಂಗ್ರೆಸ್

ಪ್ರತಿ ಮೂರು ತಿಂಗಳಿಗೊಮ್ಮೆ  ಆರೋಗ್ಯವನ್ನು ತಪಾಸಣೆ ಅಗತ್ಯ : ಗಾಯತ್ರಿ ಶಿವರಾಂ