ಏಪ್ರಿಲ್ ತಿಂಗಳಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಈ ತಿಂಗಳಲ್ಲಿ ಕೆಲವೊಂದು ವ್ಯವಹಾರಗಳು ಬದಲಾವಣೆಯಾಗುತ್ತವೆ. ಏಪ್ರಿಲ್ ಒಂದರಿಂದ ಕೆಪವೊಂದು ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆ ಜನಸಾಮಾನ್ಯರಿಗೆ ಪೆಟ್ಟು ಬೀಳುವಂತ ಬದಲಾವಣೆಯಾಗಿರಲಿದೆ.
* ಫಾಸ್ಟ್ ಟ್ಯಾಗ್ ಕೆವೈಸಿಯನ್ನು ಅಪ್ಡೇಟ್ ಮಾಡಬೇಕಿದೆ. ಇದಕ್ಕೆ ಮಾರ್ಚ್ 31 ಕೊನೆಯ ದಿನವಾಗಿದೆ. ಅಪ್ಡೇಟ್ ಆಗದೆ ಹೋದಲ್ಲಿ ಬ್ಯಾಂಕ್ ಗಳು ನಿಮ್ಮ ಫಾಸ್ಟ್ ಟ್ಯಾಗ್ ಖಾತೆಯನ್ನು ಡಿಆಕ್ಟಿವೇಟ್ ಮಾಡುತ್ತವೆ. ಈ ಮೂಲಕ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಹಣವಿದ್ದರು ಅನುಕೂಲವಾಗುವುದಿಲ್ಲ. ನಿಮ್ಮ ನಿಮ್ಮ ಮೊಬೈಲ್ ನಲ್ಲಿಯೇ ಫಾಸ್ಟ್ ಟ್ಯಾಗ್ ಅಪ್ಡೇಟ್ ಮಾಡಿಕೊಳ್ಳಬಹುದು.
* ಎನ್ ಪಿ ಎಸ್ ವಹಿವಾಟಿನಲ್ಲೂ ಅಪ್ಡೇಟ್ ತರಲಾಗಿದೆ. ಇನ್ನು ಮುಂದೆ ಫಾಸ್ ವರ್ಡ್ ನೊಂದಿಗೆ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.
* ಏಪ್ರಿಲ್ 1ರಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ನೀವೂ ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಹಳೆಯ ಪಿಎಫ್ ಖಾತೆಯನ್ನು ಆಟೋ ಮೋಡ್ ಗೆ ಬದಲಾಯಿಸಲಾಗುತ್ತದೆ. ಇದರಿಂದಾಗಿ ಪಿಎಫ್ ಬದಲಾಯಿಸಲು ರಿಕ್ವೆಸ್ಟ್ ಮಾಡುವ ಅಗತ್ಯವಿರುವುದಿಲ್ಲ.
* 2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…