ಅಖಿಲ ಭಾರತ ಕನ್ನಡ ಸಮ್ಮೇಳನ :  ಪ್ರತಿನಿಧಿ ನೋಂದಣಿಗೆ ಡಿ.18 ಅಂತಿಮ ದಿನ

1 Min Read

 

ಚಿತ್ರದುರ್ಗ : ಹಾವೇರಿಯಲ್ಲಿ ಜ.6 ರಿಂದ ಮೂರು ದಿನಗಳ ಜರುಗಲಿರುವ ಅಖಿಲ ಭಾರತ ಕನ್ನಡ ಸಮ್ಮೇಳನಕ್ಕೆ ಪ್ರತಿನಿಧಿ ನೊಂದಣಿಗೆ ಡಿ.18 ಅಂತಿಮ ದಿನವಾಗಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ಕಸಾಪ ಎಂದು ಟೈಪ್ ಮಾಡಿದರೆ ಆಪ್ ತೆರೆದುಕೊಳ್ಳುತ್ತದೆ. ನಂತರ ಆನ್ ಲೈನ್ ನಲ್ಲಿ 500 ರೂಗಳನ್ನು ಪಾವತಿಸಿ ಪ್ರತಿನಿಧಿಯಾಗಲು ಅವಕಾಶವಿದೆ.

ಕಸಾಪ ಸದಸ್ಯರಾದ ನಂತರ ಪ್ರತಿನಿಧಿಯಾಗಿ ನೊಂದಾಯಿಸಬೇಕಾಗಿರುವುದು ಕಡ್ಡಾಯವಾಗಿದೆ. ಪ್ರತಿನಿಧಿಯಾಗಿ ನೊಂದಾಯಿಸಿದವರಿಗೆ ವಸತಿ, ರೈಟಿಂಗ್ ಪ್ಯಾಡ್, ಪೆನ್ನು ಸೇರಿದಂತೆ ಕಿಟ್,  ತಿಂಡಿ,ಊಟ ದ ಕೂಪನ್ ಮತ್ತು ಓಓಡಿ ಸೌಲಭ್ಯಗಳನ್ನು ನೀಡಲಾಗುವುದು.

ನೊಂದಾಯಿಸಿದವರಿಗೆ ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂಬ ಸುಳ್ಳು ವರದಿ ಹರಿದಾಡುತ್ತಿದೆ. ನೊಂದಾಯಿತ ಪ್ರತಿನಿಧಿಗಳಿಗೆ ವಸತಿ ಸೌಲಭ್ಯ ಮತ್ತು ಕೆಲವು ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.  ಸಮ್ಮೇಳನದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯಿದೆ.

ಆನ್‍ಲೈನ್ ನೊಂದಣಿಯಲ್ಲಿ ಸಮಸ್ಯೆಗಳು ಉಂಟಾದಲ್ಲಿ ಸಹಾಯ ವಾಣಿ ಸಂಖ್ಯೆಗಳಾದ 8123878812, 9448519073, 7795662064 ಗಳನ್ನು ಸಂಪರ್ಕಿಸಬಹುದಾಗಿದೆ.

ಹಾವೇರಿ ಚಿಕ್ಕ ನಗರವಾಗಿರುವುದರಿಂದ ಪ್ರತಿನಿಧಿಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ನಿಶ್ಚಿತವಾದ ಸಂಖ್ಯೆ ಅಗತ್ಯವಿದೆ. ಹಾವೇರಿಯನ್ನು ಹೊರತುಪಡಿಸಿ ಸಮೀಪದ ನಗರಗಳಲ್ಲಿಯೂ ವಸತಿಯನ್ನು ನೀಡಲಾಗುತ್ತಿದೆ.

ನೋಂದಾಯಿಸಿದ ಪ್ರತಿನಿಧಿಗಳಿಗೆ ಹಾಸ್ಟೆಲ್, ಶಾಲೆ ಸೇರಿದಂತೆ ನಾನಾ ಕಡೆಗಳಲ್ಲಿ ವಸತಿ ಒದಗಿಸಲಾಗುತ್ತದೆ.  ಮೊದಲು ಬಂದವರಿಗೆ ಮೊದಲ ಆದ್ಯತೆ ರೂಪದಲ್ಲಿ ವಸತಿ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಿ 9449510078, 9448664878, 9449759219.

Share This Article
Leave a Comment

Leave a Reply

Your email address will not be published. Required fields are marked *