Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದುರ್ಗದ ಜನರ ಚಿತ್ತ, ಅಕ್ಕ – ತಂಗಿ ಭೇಟಿಯತ್ತ ; ಕೆ.ಮಂಜುನಾಥ್ ಅವರ ವಿಶೇಷ ಲೇಖನ

Facebook
Twitter
Telegram
WhatsApp

ಒಂದೆಡೆ ಸಿಟ್ಟು, ಮತ್ತೊಂದೆಡೆ ಪ್ರಿತೀಯ  ಉದ್ವೇಗದಿಂದ ಕಾತರಳಾಗಿ ತಂಗಿಯನ್ನು ನೋಡಲೆಂದು ರಭಸ ರಭಸವಾಗಿ ಹೆಜ್ಜೆ ಹಾಕುವ ಅಕ್ಕ.

ಮತ್ತೊಂದು ದಿಕ್ಕಿನಿಂದ ಅಕ್ಕನನ್ನು ಕಾಣಬೇಕೆಂಬ ಮಹಾದಾಸೆ, ಪಾಪ ಪ್ರಜ್ಞೆಯಿಂದ ಅಳುಕುತ್ತಲೆ ಹೆಜ್ಜೆ ಹಾಕುವ ತಂಗಿ….

ಇದು ಯಾರೋ ಜಗಳ ಮಾಡಿಕೊಂಡ ಇಬ್ಬರು ಸಾಮಾನ್ಯ ಅಕ್ಕ-ತಂಗಿಯರ ಕಥೆಯಲ್ಲ.

ಜಾನಪದ ಸಂಸ್ಕೃತಿಯ ನೆಲೆಬೀಡಾದ ಕೋಟೆನಾಡು ಚಿತ್ರದುರ್ಗ ನೆಲದ
ಅಧಿದೇವತೆಯರಾದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಎಂಬ ಶಕ್ತಿ ದೇವತೆಗಳ ಕಥೆಯಿದು. ಚಾರಿತ್ರಿಕ ಘಟನೆ  ಜಾತ್ರೆ ರೂಪ ಪಡೆದುಕೊಂಡಿದೆ.

ಮಕ್ಕಳ ಕಾರಣಕ್ಕೆ ಜಗಳ ಮಾಡಿಕೊಂಡ
ಮುನಿದು ದೂರಾಗುವ ದೇವತೆಗಳು
ಹಿರಿಯಕ್ಕನ ನೇತೃತ್ವದಲ್ಲಿ ಸಂಧಾನದ ನಂತರ ವರ್ಷಕ್ಕೊಮ್ಮೆ ಭೇಟಿಯಾಗಿ ಉಭಯ ಕುಶಲೋಪರಿ ಸಾಂಪ್ರತ ನಡೆಸುವ ಘಳಿಗೆ ರೋಮಾಂಚನ.

ಈ ಮುಖಾ ಮುಖಿಯೇ ಇಲ್ಲಿ ಭೇಟಿ ಉತ್ಸವವಾಗಿ ಆಚರಣೆಯಲ್ಲಿದೆ. ಜಾತ್ರೋತ್ಸವ ಸಂದರ್ಭದ ಮಂಗಳವಾರ
ಈ ಭೇಟಿ ಉತ್ಸವ ನೆರವೇರುತ್ತದೆ. ಇದನ್ನು
ನೋಡಿ ಆ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಭಕ್ತರಿಗೆ ಆನಂದ ಪರಮಾನಂದ.
ಏಕೆಂದರೆ ಅಕ್ಕ-ತಂಗಿಯರು ಸಿಂಗಾರಗೊಂಡು ಪರಸ್ಪರ ಭೇಟಿಗೆ ಬಂದಾಗಲೂ
ಅದೇನು ಸುಲಭವಾಗಿ ಮುಖಾಮುಖಿ ನಡೆಯುವುದಿಲ್ಲ.

ಇನ್ನೆನ್ನೂ ಅಕ್ಕ-ತಂಗಿಯರ ಮುಖಾಮುಖಿ ನಡೆಯಿತು ಎನ್ನುವಾಗಲೇ ತನ್ನ ತಪ್ಪಿನ ಭೀತಿಗೆ ಹೆಜ್ಜೆ ಹಿಂದಿಕ್ಕುವ ತಂಗಿ, ಒಂದೆರೆಡು ಹೆಜ್ಜೆ ಹಿಂದೆ ಸರಿಯುತ್ತಲೇ ಅಕ್ಕ ಕೋಪಗೊಂಡು ಹಿಂತಿರುಗಿದರೆ ಪುನಃ ಭೇಟಿಗಾಗಿ ಒಂದು ವರ್ಷ ಕಾಯಬೇಕಾದೀತು ಎಂಬ ಆತಂಕದಿಂದ ಅಕ್ಕನ ಕಡೆ ಮತ್ತೆ ಮುಖ ಮಾಡುವ ತಂಗಿ ತಿಪ್ಪಿನಘಟ್ಟಮ್ಮ.

ತನಗೆ ಮಾಡಿದ ಅಪಮಾನ ನೆನೆದು ತಂಗಿಯ ಮುಖ ನೋಡಲು ಒಪ್ಪದ ಅಕ್ಕ ಬರಗೇರಮ್ಮ ಹಿಂದಕ್ಕೆ ಸರಿಯುವ ದೃಶ್ಯ.

ಏನೋ ಅರಿಯದೇ ತಂಗಿ ಮಾಡಿದ ತಪ್ಪಿಗೆ ಅವಳ ಮಕ್ಕಳನ್ನು ಸಿಟ್ಟಿನಲ್ಲಿ ಕಲ್ಲಾಗಲಿ ಎಂದು ಹೇಳಿದ್ದು ಸರಿಯಲ್ಲ, ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದಿತ್ತು. ಮಕ್ಕಳಿಲ್ಲದ ನೋವನ್ನು ತಂಗಿ ಎಷ್ಟೋ ಅನುಭವಿಸುತ್ತಿದ್ದಳೋ, ಅವಳನ್ನು ಸಂತೈಸೋಣಾ ಎಂದು ತಿಪ್ಪಿನಘಟ್ಟಮ್ಮನ ಕಡೆ ಹೆಜ್ಜೆ ಹಾಕುವ ಬರಗೇರಮ್ಮ…

ಅಷ್ಟರಲ್ಲಿ ತನ್ನ ಮಕ್ಕಳನ್ನು ಸಿಟ್ಟಿನಲ್ಲಿ ಕಲ್ಲಾಗಿಸಿಬಿಟ್ಟಳಲ್ಲ ನನ್ನ ಅಕ್ಕ, ಇವಳ ಮುಖವನ್ನು ನಾನು ನೋಡುವುದಿಲ್ಲ ಎಂದು ಹೆಜ್ಜೆ ಹಿಂದಿಕ್ಕುವ ತಂಗಿ ತಿಪ್ಪಿನಘಟ್ಟಮ್ಮ…

ಹೀಗೆ ಪರಸ್ಪರ ಸಿಟ್ಟು ಸೆಡವುಗಳಿಂದ ಕಹಿ ಘಟನೆಯನ್ನು ನೆನಪಿಸಿಕೊಂಡು ಹಿಂದೆ-ಮುಂದೆ ಹೆಜ್ಜೆ ಹಾಕುವ ಅಕ್ಕ-ತಂಗಿಯರು ಕೊನೆಗೆ ತಮ್ಮನ್ನು ಕೂರಿಸಿಕೊಂಡು ಬುದ್ಧಿಮಾತು ಹೇಳಿದ ಅಕ್ಕ ಏಕನಾಥೇಶ್ವರಿ ಬಳಿ ನೀಡಿದ ಮಾತನ್ನು ನೆನಪು ಮಾಡಿಕೊಂಡು ಕ್ಷಣಾರ್ಧದಲ್ಲಿಯೇ ಇಬ್ಬರು ಮುಖಾಮುಖಿ ಆಗುವ ದೃಶ್ಯ ರೋಮಾಂಚನ.

 ಕಥೆಯ ಹಿನ್ನೆಲೆ ಹೀಗಿದೆ:

ನವದುರ್ಗಿಯರು ಅಕ್ಕ ತಂಗಿಯರು. ಇವರಲ್ಲಿ ಏಕನಾಥೇಶ್ವರಿ, ಬರಗೇರಮ್ಮ, ತಿಪ್ಪಿನಘಟ್ಟಮ್ಮ ಪ್ರಮುಖರು. ತಿಪ್ಪಿನಘಟ್ಟಮ್ಮಮತ್ತು ಬರಗೇರಮ್ಮ ಮಧ್ಯೆ ಗಾಢವಾದ ಪ್ರೀತಿ. ಬರಗೇರಮ್ಮನಿಗೆ ಮಕ್ಕಳಿರುವುದಿಲ್ಲ. ಬಂಜೆ ಎಂಬ ಜನರ ಚುಚ್ಚು ಮಾತನ್ನು ಮರೆಯಲು ಸೋದರಿ ತಿಪ್ಪಿನಘಟ್ಟಮ್ಮನ ಮಕ್ಕಳೊಂದಿಗೆ ಪ್ರತಿ ದಿನ ಬೆರೆತು ತನ್ನ ನೋವು ಮರೆಯುತ್ತಿರುತ್ತಾಳೆ.

ಆಗಾಗ ಜೋಗಿಮಟ್ಟಿ ರಸ್ತೆಯಲ್ಲಿನ ಸಹೋದರಿ ತಿಪ್ಪಿನಘಟ್ಟಮ್ಮ ಮನೆಗೆ ದುರ್ಗದ ಮತ್ತೊಂದು ದಿಕ್ಕು ಬುರುಜನಹಟ್ಟಿಯಿಂದ ಬರಗೇರಮ್ಮ ಬರುತ್ತಿರುತ್ತಾಳೆ. ತಂಗಿಯ ಮಕ್ಕಳ ಜೊತೆಗೆ ಆಟವಾಡಿ ಕಾಲ ಕಳೆಯುವುದನ್ನು ರೂಢಿ ಮಾಡಿಕೊಂಡಿರುತ್ತಾಳೆ ಬರಗೇರಮ್ಮ. ಮಕ್ಕಳ ಮೇಲಿನ ಅಕ್ಕನ ಪ್ರೀತಿಗೆ ತಂಗಿ ತಿಪ್ಪಿನಘಟ್ಟಮ್ಮ ಮನಸೋತಿರುತ್ತಾಳೆ. ಅಕ್ಕ ಇವರು ನನ್ನ ಮಕ್ಕಳಲ್ಲ, ನಿನ್ನದೇ ಮಕ್ಕಳು ಎಂದು ಹೃದಯ ತುಂಬಿದ ಪ್ರೀತಿಯ ಮಾತುಗಳನ್ನು ಸದಾ ಹೇಳುತ್ತಿರುತ್ತಾಳೆ.

ಈ ಅಕ್ಕ-ತಂಗಿಯರ ಪ್ರೀತಿ ಇಡೀ ದುರ್ಗದಲ್ಲಿ ಚರ್ಚಿತವಾಗಿರುತ್ತದೆ. ಬಹುತೇಕರು ತಮ್ಮ ಕುಟುಂಬದಲ್ಲಿನ ಕುಟುಂಬದಲ್ಲಿನ ಮಧ್ಯೆಯ ದ್ವೇಷ, ಅಸೂಯೆಗೆ, ಅ ಬರಗೇರಮ್ಮ-ತಿಪ್ಪಿನಘಟ್ಟಮ್ಮನ ಪ್ರೀತಿ ಉದಾಹರಣೆ ನೀಡಿ, ನೀವಾದ್ರೂ ಸ್ವಲ್ಪ ಕಲಿಯಬಾರದು ಎಂದು ಹೇಳುತ್ತಾರೆ.

ಅಕ್ಕ-ತಂಗಿಯರ ಮಧ್ಯೆಯ ಈ
ಪ್ರೀತಿ ನೆರೆಹೊರೆಯ ಕೆಲವರಲ್ಲಿ ಅಸೂಯೆ ಹುಟ್ಟಿಸುತ್ತದೆ. ಸಹಿಸಲಾರದ ಕೆಲವರು ಏನಾದರೂ ಮಾಡಿ ಈ ಪ್ರೀತಿಯ ಅಕ್ಕ-ತಂಗಿಯರನ್ನು ದೂರ ಮಾಡಬೇಕೆಂದು ಹಠಕ್ಕೆ ಬಿದ್ದು ವಿಷ ಬೀಜ ಬಿತ್ತುತ್ತಾರೆ.

ತಂಗಿ ಮನೆಗೆ ಕಾರ-ಮಂಡಕ್ಕಿ, ಹಣ್ಣು, ಸಿಹಿ ಇತರೆ ತಿನಿಸುಗಳನ್ನು ಬರಗೇರಮ್ಮ ತಂದು ಮಕ್ಕಳಿಗೆ ನೀಡಿ ಅವರೊಂದಿಗೆ ಆಟವಾಡಿ, ಸಂಜೆ ಆಗುತ್ತಿದ್ದಂತೆ ಏ ತಂಗಿ ಮಕ್ಕಳನ್ನು ಹುಷಾರು ನೋಡಿಕೋ, ಮುಂದಿನ ವಾರ ಬರುತ್ತೇನೆ ಎಂದು ಹೇಳಿ ಬರಗೇರಮ್ಮ ಹೊರಡುತ್ತಾಳೆ.

ಬರಗೇರಮ್ಮ ಅತ್ತ ಹೋಗುತ್ತಿದ್ದಂತೆ, ಸಹಿಸಲಾರದ ಜನ ತಿಪ್ಪಿನಘಟ್ಟಮ್ಮನ ಮನೆ ಬಳಿ ಬಂದು ಮಾತಿಗೆ ಎಳೆಯುತ್ತಾರೆ.

ತಿಪ್ಪಮ್ಮ ನಿನ್ನ ಮಕ್ಕಳನ್ನು ಬಂಜೆಯಾಗಿರುವ ನಿನ್ನ ಅಕ್ಕ ಬರಗೇರಮ್ಮನಿಗೆ ಮುಟ್ಟಲು ಅವಕಾಶ ಕೊಡಬೇಡ. ನಾವು ಹೇಳುತ್ತಿರುವುದು ನಿನ್ ಒಳ್ಳೆಯದಕ್ಕೆ. ಮಕ್ಕಳನ್ನು ಬಂಜೆ ಮುಟ್ಟಿದರೆ ಮಕ್ಕಳ  ಭವಿಷ್ಯಕ್ಕೆ ಕುತ್ತು ಎಂದು ವಿಷ ಬೀಜ ಬಿತ್ತುತ್ತಾರೆ. ಇದರಿಂದ ತಿಪ್ಪಿನಘಟ್ಟಮ್ಮ ವಿಚಲಿತಳಾಗುತ್ತಾಳೆ. ಆತಂಕಕ್ಕೆ ಒಳಗಾಗುತ್ತಾಳೆ. ಮಕ್ಕಳ ಭವಿಷ್ಯಕ್ಕಾಗಿ ನೆರೆಹೊರೆಯವರ ಮಾತಿಗೆ ಬದ್ಧಳಾಗುತ್ತಾಳೆ. ಜೊತೆಗೆ ಮಕ್ಕಳಿಂದ ಬರಗೇರಮ್ಮಳನ್ನು ಹೇಗೆ ದೂರ ಮಾಡುವುದು ಎಂದು ಚಿಂತೆಗೆ ಬೀಳುತ್ತಾಳೆ.

ಎಂದಿನಂತೆ ಬರಗೇರಮ್ಮ ತಂಗಿ ಮನೆಗೆ ಬರುತ್ತಾಳೆ. ಅಕ್ಕ ಬರುವ ಸಮಯ ಗೊತ್ತಿದ್ದ ತಿಪ್ಪಿನ್ನಘಟ್ಟಮ್ಮ ಮಕ್ಕಳನ್ನು ಬುಟ್ಟಿಯಲ್ಲಿ ಬಚ್ಚಿಡುತ್ತಾಳೆ.

ಬರಗೇರಮ್ಮ ಬರುತ್ತಿದ್ದಂತೆ ಮಕ್ಕಳು ಎಲ್ಲಿ ಎಂದು ಕೇಳುತ್ತಾಳೆ. ಆಟವಾಡಲೂ ಹೋಗಿದ್ದಾರೆ ಎಂದು ತಿಪ್ಪಿನಘಟ್ಟಮ್ಮ ಸುಳ್ಳು ಹೇಳುತ್ತಾಳೆ. ಬಹಳ ಸಮಯ ಕಾದ ಬರಗೇರಮ್ಮ, ಮಕ್ಕಳಿಗಾಗಿ ತಂದಿದ್ದ ಸಿಹಿ ತಿಂಡಿಯನ್ನು ತಿಪ್ಪಿನಘಟ್ಟಮ್ಮ ಬಳಿ ಕೊಟ್ಟು ಮಕ್ಕಳು ಬಂದಾಗ ಕೊಡು ಎಂದು ಹೊರಡಲನುವಾಗುತ್ತಾಳೆ.

ದೊಡ್ಡಮ್ಮನ ಧ್ವನಿ ಮತ್ತು ತಿಂಡಿ ತಂದಿರುವ ವಿಷಯ ಕಿವಿಗೆ ಅಪ್ಪಳಿಸುತ್ತಿದ್ದಂತೆ ಪುಟ್ಟಿಯಲ್ಲಿದ್ದ ಮುಗ್ಧ ಮಕ್ಕಳು ದೊಡ್ಡಮ್ಮ ದೊಡ್ಡಮ್ಮ ನಮ್ಮನ್ನು ಅಮ್ಮ ಮುಚ್ಚಿಟ್ಟಿದ್ದಾಳೆ ಎಂದು ಕೂಗುತ್ತಾರೆ.

ಇದರ ಹಿನ್ನೆಲೆಯನ್ನು ಶಕ್ತಿ ದೇವತೆ ಬರಗೇರಮ್ಮ ಅರಿತು, ನನ್ನ ಪ್ರೀತಿ, ಅಕ್ಕರೆಗಿಂತಲೂ ನೆರೆಹೊರೆಯವರ ಮಾತೇ ನಿನಗೆ ಮುಖ್ಯವಾಯಿತಲ್ಲ ಎಂದು ಆಕ್ರೋಶಗೊಳ್ಳುತ್ತಾಳೆ.

ಸಿಟ್ಟಿನಲ್ಲಿ ಏ ತಿಪ್ಪಿನಘಟ್ಟಮ್ಮ ನಿನ್ನ ಮಕ್ಕಳು ಇದ್ದಲ್ಲಿಯೇ ಕಲ್ಲಾಗಲಿ, ನಿನಗೂ ಮಕ್ಕಳು ಇಲ್ಲದಿರುವ ನೋವು ಗೊತ್ತಾಗಲಿ ಎಂದು ಶಾಪ ಹಾಕುತ್ತಾಳೆ. ನಿನ್ನ ಮುಖ ಎಂದಿಗೂ ನೋಡುವುದಿಲ್ಲ ಎಂದು ಹೊರಟುಬಿಡುತ್ತಾಳೆ. ಮಕ್ಕಳು ಕಲ್ಲಾದ ಸಿಟ್ಟಿನಲ್ಲಿ ಅಕ್ಕನ ಜೊತೆ ತಿಪ್ಪಿನಘಟ್ಟಮ್ಮ ಕೂಡ ಜಗಳವಾಡಿ ನಾನು ನಿನ್ನ ಮುಖ ನೋಡುವುದಿಲ್ಲ ಎಂದು ಶತಥ ಮಾಡುತ್ತಾಳೆ.

ಇವರಿಬ್ಬರ ಮುನಿಸು ಕೆಲವು ವರ್ಷ ಮುಂದುವರಿಯುತ್ತದೆ. ಈ ಇಬ್ಬರು ಮುಖಾಮುಖಿ ಆಗುವುದೇ ಇಲ್ಲ.

ಈ ವಿಷಯ ತಿಳಿದಿದ್ದ ಇವರೆಲ್ಲರ ದೊಡ್ಡಕ್ಕ ಏಕನಾಥೇಶ್ವರಿ, ಹೀಗೆ ಬಿಟ್ಟರೇ ಸರಿ ಇರುವುದಿಲ್ಲ ಎಂದು ಇಬ್ಬರನ್ನು ಕರೆಯಿಸಿ ದ್ವೇಷ ಒಳ್ಳೆಯದಲ್ಲ ಎಂದು ಸಂಧಾನ ಮಾಡುತ್ತಾಳೆ. ಇಬ್ಬರು ಒಪ್ಪುವುದಿಲ್ಲ. ನನ್ನ ಮಕ್ಕಳನ್ನು ಬರಗೇರಮ್ಮ ಕಲ್ಲಾಗಿ ಮಾಡಿದ್ದಾಳೆ ಎಂದು ತಿಪ್ಪಿನಘಟ್ಟಮ್ಮ, ನನ್ನನ್ನು ಬಂಜೆ ಎಂದು ಅವಮಾನಿಸಿದ್ದಾಳೆ ಎಂದು ಬರಗೇರಮ್ಮ ಮುನಿಸು ತೊರೆಯಲು ಮುಂದಾಗುವುದಿಲ್ಲ.

ಕೊನೆಗೆ ಅಕ್ಕನ ಮಾತಿಗೆ ಕಟ್ಟುಬಿದ್ದು ವರ್ಷಕ್ಕೊಮ್ಮೆ ಭೇಟಿ ಆಗಲು ಸಮ್ಮತಿಸುತ್ತಾರೆ. ಅದರಂತೆ ಅಕ್ಕ-ತಂಗಿಯರು ನಡೆದುಕೊಳ್ಳುತ್ತಾರೆ. ಎಷ್ಟೋ ಕಾಲದಿಂದಲೂ ಈ ಭೇಟಿಗೆ ಜನತೆ ಉತ್ಸವದ ರೂಪ ನೀಡಿ ಆಚರಿಸುತ್ತಾ ಬಂದಿದ್ದಾರೆ.

ವಿಶೇಷ ಎಂದರೆ ಬಂಜೆ ಎಂಬ ನೋವಿನಿಂದ ಬಳಲಿದ ಬರಗೇರಮ್ಮ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಮಕ್ಕಳಿಗಾಗಿ ಹರಿಕೆ ಮಾಡಿಕೊಳ್ಳುತ್ತಾರೆ. ಜತೆಗೆ ವೈಮನಸ್ಸು ದ್ವೇಷದ ಕಾರಣಕ್ಕೆ ದೂರವಾಗಿರುವ ಸ್ನೇಹಿತರು, ಕುಟುಂಬದವರನ್ನು ಇಲ್ಲಿನ ಹಿರಿಯರು ಅಕ್ಕ-ತಂಗಿಯರ ಭೇಟಿ ಉತ್ಸವದ ಕಥೆ ಹೇಳಿ
ಒಂದುಗೂಡಿಸುತ್ತಾರೆ.

ಮನುಷ್ಯರಲ್ಲಿ ಕಂಡು ಬರುವ ಮತ್ಸರ ಸಣ್ಣತನವನ್ನು ದೇವತೆಗಳಿಗೂ ಆರೋಪಿಸಿ ಆ ಮೂಲಕ ಮನುಷ್ಯರನ್ನು ತಿದ್ದುವ ಪ್ರಯತ್ನವಿದು ಎಂದೆನಿಸುತ್ತದೆ. ಪ್ರತಿ ವರ್ಷ ಯುಗಾದಿಯ ನಂತರ ನಡೆಯುವ ಜಾತ್ರೆ  ದೊಡ್ಡಪೇಟೆಯ ರಾಜಬೀದಿಯಲ್ಲಿ ನಡೆಯುವ ಈ ಭೇಟಿ ಉತ್ಸವದಿಂದ ತೆರೆ ಕಾಣಲಿದೆ.

ಕೆ.ಮಂಜುನಾಥ್

ಜಿಲ್ಲಾಧ್ಯಕ್ಷರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಜಿಲ್ಲಾ ಶಾಖೆ, ಚಿತ್ರದುರ್ಗ-577501

ಮೊ.ನಂ: 9448533817

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!