ಐಮಂಗಲ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಸುದ್ದಿಒನ್, ಹಿರಿಯೂರು, ಮಾರ್ಚ್. 27 : ಅಕ್ರಮ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ
ಅವಿನಾಶ್ ಮತ್ತು ಸರೋಜಾಬಾಯಿ ಕಲ್ಯಾಣ ಮಂಟಪದ ಹಿಂಭಾಗ ಡಿಸಿಸಿ ಬ್ಯಾಂಕ್ ಲೇಔಟ್ ನ ಬಿ ಬಿ ತಿಪ್ಪೇಸ್ವಾಮಿ
ಎಂದು ಗುರುತಿಸಲಾಗಿದ್ದು ಇವರಿಂದ ಮೂರು ಸಾವಿರ ನಗದು ಹಣ ಮತ್ತು ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಐಮಂಗಲ ವೃತ್ತ ನಿರೀಕ್ಷಕರಾದ ಎನ್ ಗುಡ್ಡಪ್ಪ. ಐಮಂಗಲ ಠಾಣೆ ಪಿಎಸ್ಐ ಶ್ರೀಮತಿ ಎಂ ಟಿ ದೀಪು, ಸಿಬ್ಬಂದಿ ರವಿ, ಶಿವಕುಮಾರ್, ಪ್ರವೀಣ್ ಕುಮಾರ್, ಕಾಂತರಾಜ್  ಹರ್ಷ ರವರು ಐಮಂಗಲ ಬಳಿಯ ಗುಯಿಲಾಳ್ ಟೋಲ್  ಪ್ಲಾಜದ ಬಳಿ ಇರುವ ಆಗಸ್ತ್ಯ ಹೋಟೆಲ್ ಮುಂಭಾಗ, ಪರವಾನಗಿ ಇಲ್ಲದ/ನಿಷೇಧಿತ
1) namobook247.com,
2) skybet365.in
3) lotus7book.com ವೆಬ್ ಸೈಟ್/ಅಪ್ಲಿಕೇಶನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಕೊಂಡು ಹಾಗೂ ಸಾರ್ವಜನಿಕರಿಂದಲೂ ಸಹ ಹಣ ಕಟ್ಟಿಸಿಕೊಂಡು ಕಾನೂನು ಬಾಹೀರವಾದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

suddionenews

Recent Posts

ದಾವಣಗೆರೆಯ ಬ್ಯಾಂಕ್ ರಾಬರಿ ಕಥೆ ; 6 ತಿಂಗಳ ಬಳಿಕ ಅಂದರ್ ಆಗಿದ್ದೇಗೆ ಖದೀಮರು..?

ದಾವಣಗೆರೆ; ಕಳ್ಳತನ ಮಾಡಿದ ಕಳ್ಳರು ಸಣ್ಣದಾದ ಯಾವುದಾದರೊಂದು ಸುಳಿವನ್ನ ಬಿಟ್ಟು ಹೋಗಿರುತ್ತಾರೆ. ಅದರಿಂದಾನೇ ತಗಲಾಕಿಕೊಳ್ಳುತ್ತಾರೆ. ಇದೀಗ ದಾವಣಗೆರೆಯಲ್ಲೂ ಅಂಥದ್ದೇ ಘಟನೆಯೊಂದು…

3 hours ago

ಬಳ್ಳಾರಿ ಜಿಲ್ಲೆಯಲ್ಲಿ ಮೆಗಾ ಡೈರಿ ; ರೈತರು – ಕೆಎಂಎಫ್ ಅಧ್ಯಕ್ಷರ ನಡುವೆ ಜಟಾಪಟಿ ಶುರುವಾಗಿದ್ದೇಕೆ..?

ಬಳ್ಳಾರಿ; ಜಿಲ್ಲೆಯಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಲಾಗುವುದು ಎಂದು ಅಂದಿನ ಸಿಎಂ ಆಗಿದ್ದ ಬಸವರಾಜ್…

3 hours ago

ಚಿತ್ರದುರ್ಗದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ದೇಶಾದ್ಯಂತ ಇಂದು ಸೋಮವಾರ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್(ರಂಜಾನ್) ಆಚರಿಸಲಾಗುತ್ತಿದೆ.…

6 hours ago

ದೆಹಲಿಗೆ ತೆರಳುವ ಮುನ್ನ ಸಿಎಂ – ಡಿಸಿಎಂ ಭೇಟಿ ; ಏನೆಲ್ಲಾ ಚರ್ಚೆ ಆಯ್ತು.?

ಬೆಂಗಳೂರು; ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ಹನಿಟ್ರ್ಯಾಪ್ ಪ್ರಜರಣದ್ದೆ ಜೋರು ಸದ್ದು. ಅದರಲ್ಲೂ ಸಚಿವ ಕೆ.ಎನ್.ರಾಜಣ್ಣ ಹೆಸರು ಕೇಳಿ ಬಂದಿದೆ. ಈ…

7 hours ago

ಚಿತ್ರದುರ್ಗ : ನಗರದ ಮಧ್ಯಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡ : ಘಟನೆಗೆ ಅಸಲಿ ಕಾರಣವೇನು ಗೊತ್ತಾ ?

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31: ಆಕಸ್ಮಿಕ ಬೆಂಕಿಯಿಂದಾಗಿ ನಗರದ ಬಿ.ಡಿ. ರಸ್ತೆಯ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ (ಎಸ್.ಬಿ.ಐ.…

7 hours ago

ಪ್ರತಿದಿನ ಬಾದಾಮಿ ಹಾಲು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

  ಸುದ್ದಿಒನ್ ಬಾದಾಮಿ ಹಾಲು ಒಂದು ಆರೋಗ್ಯಕರ ಪಾನೀಯವಾಗಿದ್ದು, ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ನುಣ್ಣಗೆ ಪುಡಿಮಾಡಿ, ಸೋಸಿ ತಯಾರಿಸಲಾಗುತ್ತದೆ. ಇದು…

8 hours ago