Connect with us

Hi, what are you looking for?

ಪ್ರಮುಖ ಸುದ್ದಿ

ಯತ್ನಾಳ್ ಉಚ್ಛಾಟನೆ ಮಾಡಲು ಸಹಿಸಂಗ್ರಹಿಸಲಾಗಿದೆ: ರೇಣುಕಾಚಾರ್ಯ

ದಾವಣಗೆರೆ : ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ದುರಂತ ನಾಯಕ, ದುರಹಂಕಾರಿ, ಸ್ವಯಂ ಘೋಷಿತ ನಾಯಕ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿನಿತ್ಯ ಅರಿವೇ ಹಾವು ಬಿಡುತ್ತಾರೆ. ಅದು ಬಹಳ ದಿನ ಇರುವುದಿಲ್ಲಾ ಟುಸ್ ಎನ್ನುತ್ತದೇ ಎಂದು ವ್ಯಂಗ್ಯವಾಡಿದರು.

ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕೆಂದು ೬೫ ಕ್ಕೂ ಹೆಚ್ಚು ಜನ ಶಾಸಕರು ಸಹಿ ಮಾಡಿಕೊಟ್ಟಿದ್ದು, ಅದನ್ನು ವರಿಷ್ಟರಿಗೆ ತಲುಪಿಸುತ್ತೇವೆ. ಸಹಿ ಮಾಡಿದ ಪತ್ರ ನನ್ನ ಬಳಿ ಇದೇ ಎಂದರು.

ವಿಜಯೇಂದ್ರ ಅವರ ಬಗ್ಗೆ ಯತ್ನಾಳ್ ಅವರು ಆರೋಪ ಮಾಡುತ್ತಿದ್ದು ವಿಜಯೇಂದ್ರ ಏನು ತಪ್ಪು ಮಾಡಿದ್ದಾರೆ? ವಿಜಯೇಂದ್ರ ಅವರು ಕೆಲಸ ಮಾಡುವುದೇ ಬೇಡವೇ ಎಂದು ಪ್ರಶ್ನಿಸಿದ ಅವರು, ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರ ಜೊತೆ ವಿಜಯೇಂದ್ರ ಏಕೆ ಹೋಗ್ತಾರೆ, ಯತ್ನಾಳ್ ಅವರ ಮನಸ್ಥಿತಿ ಸರಿಯಿಲ್ಲ ಎಂದು ದೂರಿದರು.

ಯತ್ನಾಳ್ ಅವರೇ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿರಬಹುದು ಅವರೇ ಕಾಂಗ್ರೆಸ್ ಹೋಗಬಹುದು. ಯತ್ನಾಳ್ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುವುದು ಬೇಡ ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ದಿ ಸಚಿವರಾದ ಈಶ್ವರಪ್ಪನವರು ನಾಲ್ಕು ಗೋಡೆಗಳ ಮಧ್ಯ ಕುಳಿತು ಸಮಸ್ಯೆ ಬಗೆಹರಿಸುಕೊಳ್ಳುವ ಬದಲು ರಾಜ್ಯಪಾಲರಿಗೆ ಪತ್ರ ಬರೆದಿದ್ದು ಎಷ್ಟು ಸರಿ ಎಂದ ಅವರು ಈ ಬಗ್ಗೆ ಈಶ್ವರಪ್ಪನವರು ಆತ್ಮವಲೋಕನ ಮಾಡಿಕೊಳ್ಳ ಬೇಕು ಎಂದರು.

ಈಶ್ವರಪ್ಪನವರ ಮೇಲೆ ನನಗೆ ಅಪಾರ ಅಭಿಮಾನ ಇದೆ. ಈಶ್ವರಪ್ಪನವರು ನನ್ನ ಇಲಾಖೆಯಲ್ಲಿ ಅನುದಾನ ಇಲ್ಲಾ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅನುದಾನ ಪಡೆದುಕೊಳ್ಳಿ ಹೇಳಿದ್ದರು. ಎಲ್ಲಾ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿದ್ದಕ್ಕೆ ಆರ್ಥಿಕ ಇಲಾಖೆಯಿಂದ ಸಿಎಂ ವಿಶೇಷ ಪರಮಾಧಿಕಾರವನ್ನು ಬಳಸಿಕೊಂಡು ಅನುದಾನವನ್ನು ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ ವಿನಾಃ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಿಲ್ಲಾ ಎಂದು ಸ್ಪಷ್ಟನೆ ನೀಡಿದರು.

ಪಕ್ಷದ ಜಗಳ ವಿನಾಃ ಕಾರಣ ಬೀದಿಗೆ ಬರ ಬಾರದಿತ್ತು, ಇದು ಕಾರ್ಯಕರ್ತರಿಗೆ ಮುಖಂಡರಿಗೆ ನೋವುಂಟಾಗಿದೆ. ನಮ್ಮಗಳ ಕೆಸರೆರಚಾಟ ಕಾಂಗ್ರೆಸ್ ನಾಯಕರಿಗೆ ಆಹಾರವಾಗಿದ್ದು, ಸಿಎಂ ರಾಜಿನಾಮೆ ಕೊಡಿ ಎಂದು ಸಿದ್ದರಾಮಯ್ಯನವರು ಕೇಳುತ್ತಿದ್ದು ಅವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೇ ಎಂದರು.

ಈಶ್ವರಪ್ಪನವರು ಶಿರಾದಲ್ಲಿ ಹತ್ತುಕೋಟಿ ಕಾಮಗಾರಿಯನ್ನು ಕಾಂಗ್ರೆಸ್,ಜೆಡಿಎಸ್ ನವರಿಗೆ ಕೆಲಸ ಕೊಟ್ಟಿದ್ದಾರೇ, ಆದರೇ ನಾವು ಕೇಳಿದಾಗ ಅನುದಾನ ಕೊಟ್ಟಿಲ್ಲಾ ಆದರೇ ಅವರಿಗೆ ಹೇಗೆ ಅನುದಾನ ಬಿಡುಗಡೆ ಮಾಡಿದ್ದಾರೆಂದು ಇದೇ ವೇಳೆ ಪ್ರಶ್ನೆ ಮಾಡಿದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂದ ರೇಣುಕಾಚಾರ್ಯ ಏನೇ ಇದ್ದರೂ ನಾಲ್ಕು ಗೋಡೆಗಳ ಮದ್ಯ ಕುಳಿತು ಬಗೆ ಹರಿಸಿಕೊಳ್ಳ ಕೊಳ್ಳುತ್ತೇವೆ ಎಂದರಲ್ಲದೇ, ವಿನಾಃ ಕಾರಣ ಈಶ್ವರಪ್ಪನವರು ವರಿಷ್ಟರ ಹೆಸರು ಎಳೆ ತಂದಿರುವುದರಿಂದ ಕಾಂಗ್ರೆಸ್ ನವರಿಗೆ ಇದೇ ಅಸ್ತ್ರವಾಗಿದೆ ಎಂದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರ ವರದಿಯಲ್ಲಿ 183 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47668 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 69...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ದಾವಣಗೆರೆ: ಬಿಜೆಪಿಯವರು ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದು, ರೇಣುಕಾಚಾರ್ಯ ಇದಕ್ಕೆ ಹೊರತಲ್ಲ ಅವನ ಹಣೇಬರಹವೂ ಅಷ್ಟೆ‌. ತಾಲ್ಲೂಕಿನ‌ 18 ವರ್ಷದ ಯುವಕರಿಂದ ಮಾಡಬಾರದ ಕೆಲಸ ಮಾಡಿಸಿ, ಅವರನ್ನು ಹಾಳು ಮಾಡಿದ್ದಾನೆ ಎಂದು ಜಿಲ್ಲಾ...

ದಾವಣಗೆರೆ

ದಾವಣಗೆರೆ: ಎತ್ತಿನಗಾಡಿ, ಬೈಕ್ ನಲ್ಲಿ ಹೊಡೆದ ಮರಳು ಸೀಜ್‌ ಮಾಡಲು‌ ನಾನು ಬಿಡುವುದಿಲ್ಲ. ನಾನು ಬಡವರ ಪರವಾಗಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಮರಳು ಸಂಗ್ರಹ ಅಡ್ಡೆಗಳ ಮೇಲೆ...

ಪ್ರಮುಖ ಸುದ್ದಿ

ದಾವಣಗೆರೆ: ಕೊರೋನಾ ಹಿನ್ನೆಲೆಯಲ್ಲಿ ಇದೇ 16 ರಂದು ಇರುವ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳದ ಹಿನ್ನೆಲೆಯಲ್ಲಿ, ಅಭಿಮಾನಿಗಳು, ಜನರು ಶುಭಾಷಯ ಕೋರಲು ಗುಂಪಾಗಿ ಆಗಮಿಸದೆ, ತಾವು ಇದ್ದಲ್ಲಿಯೇ ಜನ್ಮದಿನಕ್ಕೆ ಹಾರೈಸಬೇಕೆಂದು ಶಾಸಕ ಶಾಮನೂರು ಶಿವಶಂಕರಪ್ಪ...

ಪ್ರಮುಖ ಸುದ್ದಿ

ಸುದ್ದಿಒನ್, ದಾವಣಗೆರೆ,(ಜೂನ್.14): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 200 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 47485 ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ ದಾವಣಗೆರೆ 109...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.14): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 195 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33902 ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 31 ಚಳ್ಳಕೆರೆ...

ಪ್ರಮುಖ ಸುದ್ದಿ

ದಾವಣಗೆರೆ, (ಜೂ. 14): ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು, ಇವರ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ ಅಔಅಔ ರಿಟೇಲ್ ಪೆಟ್ರೋಲ್ ಬಂಕ್ ನಡೆಸಲು ಮಾಜಿ ಸೈನಿಕರಿಂದ (ಜೆಸಿಒ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗಳಿಂದ) ಅರ್ಜಿ...

error: Content is protected !!