ಮಂಗಳವಾರವಷ್ಟೇ ಘೋಷಣೆಯಾಗಿದ್ದ ಸೇನೆಯ ಅಗ್ನಿಪಥ್ ಯೋಜನೆಗೆ ವಿರೋಧ : ರೈಲು ತಡೆ, ಬೆಂಕಿ, ಪ್ರತಿಭಟನೆ..!

suddionenews
1 Min Read

ನವದೆಹಲಿ: ಕೆಂದ್ರ ಸರ್ಕಾರದಿಂಸ ಸೇನೆಗೆ ಸೇರುವವರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅಗ್ನಿಪಥ್ ಎಂಬ ಯೋಜನೆಯನ್ನು ಮಂಗಳವಾರವಷ್ಟೇ ಘೋಷಣೆ ಮಾಡಿದೆ. ಆದರೆ ಇದೀಗ ಆ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಬಿಹಾರದಲ್ಲಿ ಯುವಕರ ಗುಂಪೊಂದು, ದೊಡ್ಡಮಟ್ಟದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ಈ ಯೋಜನೆಯಿಂದಾಗಿ ಸೇನೆಗೆ ಸೇರಬೇಕೆಂದು ಬಯಸಿ, ಪರೀಕ್ಷೆ ಬರೆದು ನೇಮಕವಾಗಿದ್ದ ಹಾಗೂ ತರಬೇತಿ ಪಡೆದು ಕಾಯುತ್ತಿದ್ದವರಿಗೆ ಇದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಸ್ಪರ್ಧಾಳುಗಳು ಪ್ರತಿಭಟಿಸಿದ್ದು, ಈ ಯೋಜನೆ ವಾಪಾಸ್ ತೆಗೆದುಕೊಳ್ಳಿ ಎಂದು ಒತ್ತಾಯ ಹಾಕಿದ್ದಾರೆ.

ಪ್ರತಿಭಟನೆಯಲ್ಲಿದ್ದ ಸ್ಪರ್ಧಾಳುಗಳು ನಮಗೆ ಕೆಲಸ ಕೊಡಿ, ಇಲ್ಲವೆ ನಮ್ಮನ್ನು ಸಾಯಿಸಿಬಿಡಿ ಎಂದು ಭಾರತ್ ಮಾತಾಕಿ ಜೈ ಒಂದೇ ಮಾತರಂ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಸೇನೆ ಪರೀಕ್ಷೆ ನಡೆಯುವ ಲಕ್ನೋ ಕೇಂದ್ರ, ಬಿಹಾರದ ಬಿರಾನಜ, ರಾಜಸ್ಥಾನ ಸೇರಿದಂತೆ ಹಲವೆಡೆ ಬೃಹತ್ ರ್ಯಾಲಿ ನಡೆಸಿದ್ದಾರೆ. ಇಜ ರ್ಯಾಲಿಯಲ್ಲಿ ಟೈಯರ್ ಗಳಿಗೆ ಬೆಂಕಿ ಹಚ್ಚಿದ್ದಾರೆ, ರೈಲು ತಡೆದು ರೈಲಿಗೂ ಬೆಂಕಿ ಹಚ್ಚಿದ್ದಾರೆ.

ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆದು ಸಾಮಾನ್ಯ ನೇಮಕಾತಿಗಾಗಿ ಕಾಯುತ್ತಿದ್ದೆವು. ಕೊರೊನಾದಿಂದ ನೇಮಕಾತಿ ನಿಲ್ಲಿಸಲಾಗಿತ್ತು. ಇದುವರೆಗೂ ನೇಮಕಾತಿ ಪಿನರಾರಂಭ ಮಾಡಿಲ್ಲ. ಎರಡು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ವಯೋಮಿತಿ ಸಡಿಲಿಸಿ ಎಂದು ಪ್ರತಿಭಟಿಸುತ್ತಿರುವ ಅಭ್ಯರ್ಥಿಗಳು ಕೇಳಿಕೊಂಡಿದ್ದಾರೆ. ಅಗ್ನಿಪಥ್ ಯೋಜನೆಯಡಿ 17.5 ವರ್ಷದಿಂದ 21 ವರ್ಷಕ್ಕೆ ವಯೋಮಿತಿ ನಿಗದಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *